Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ

|

Updated on: Apr 12, 2023 | 12:07 PM

ಆನೆಯೊಂದು ಬಾಳೆಹಣ್ಣಿನ ಸಿಪ್ಪೆ ತೆಗೆದು ಬಾಳೆಹಣ್ಣು ತಿನ್ನುತ್ತಿರುವ ವಿಡಿಯೋ ಭಾರೀ ಸುದ್ದಿಯಲ್ಲಿದೆ. ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಆನೆಯೂ ಕೂಡ ಸಿಪ್ಪೆ ತೆಗೆದು ಬಾಳೆಹಣ್ಣು ತಿನ್ನುವುದನ್ನು ಕಲಿತಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ
ಪ್ಯಾಂಗ್ ಫಾ ಹೆಸರಿನ ಆನೆ
Image Credit source: Youtube
Follow us on

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗಿಂತ ಹೆಚ್ಚಾಗಿ ಪ್ರಾಣಿಗಳ ಬುದ್ಧಿವಂತಿಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣ(Social Media) ದಲ್ಲಿ ವೈರಲ್​ ಆಗುತ್ತಿದೆ. ಇತ್ತೀಚೆಗಷ್ಟೇ ಶ್ವಾನವೊಂದು ರೀಲ್ಸ್​​​​ ಮಾಡುತ್ತಿರುವ ವಿಡಿಯೋ ಹಾಗೆಯೇ ಆನೆಯೊಂದು ತಾನೇ ಸೊಂಡಿಲಿನ ಮೂಲಕ ಪೈಪ್​ನಲ್ಲಿ ನೀರು ಹಿಡಿದ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್(Video Viral)​​ ಆಗಿತ್ತು. ಇದೀಗಾ ಆನೆಯೊಂದು ಬಾಳೆಹಣ್ಣಿನ ಸಿಪ್ಪೆ ತೆಗೆದು ಬಾಳೆಹಣ್ಣು ತಿನ್ನುತ್ತಿರುವ ವಿಡಿಯೋ ಭಾರೀ ಸುದ್ದಿಯಲ್ಲಿದೆ. ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಆನೆಯೂ ಕೂಡ ಸಿಪ್ಪೆ ತೆಗೆದು ಬಾಳೆಹಣ್ಣು ತಿನ್ನುವುದನ್ನು ಕಲಿತಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಎಷ್ಟು ಬುದ್ಧಿವಂತಿಕೆಯಿಂದ ಆನೆ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಿದೆ ನೋಡಿ. ಇಲ್ಲಿದೆ ವೈರಲ್​ ವಿಡಿಯೋ:

ಇದನ್ನೂ ಓದಿ: 11 ದಿನಗಳ ಕಾಲ ನಿದ್ದೆ ಮಾಡದೆ ಎಚ್ಚರವಾಗಿದ್ದ ವ್ಯಕ್ತಿ! ಆತನ ಮೇಲೆ ಬೀರಿದ ಭಯಾನಕ ಪರಿಣಾಮ ಏನು?

ಬರ್ಲಿನ್ ಮೃಗಾಲಯದಲ್ಲಿರುವ ಪ್ಯಾಂಗ್ ಫಾ ಎಂಬ ಹೆಸರಿನ ಆನೆ ಬಾಳೆಹಣ್ಣು ತಿನ್ನುವ ಮೊದಲು ಸಿಪ್ಪೆ ತೆಗೆದು ತಿನ್ನುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯೊಬ್ಬಳು ಬಾಳೆಹಣ್ಣು ನೀಡಿದಾಗ, ಆನೆ ತಕ್ಷಣ ಬಾಳೆಹಣ್ಣನ್ನು ತೆಗೆದುಕೊಂಡು ಒಂದೊಂದಾಗಿ ಸಿಪ್ಪೆ ಬಿಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಆನೆಯ ಮತ್ತೊಂದು ವಿಶೇಷತೆ ಎಂದರೆ ಕಂದು ಬಣ್ಣದ ಚುಕ್ಕೆಗಳಿರುವ ಬಾಳೆಹಣ್ಣುಗಳನ್ನು ನೀಡಿದಾಗ ಮಾತ್ರ ಅದು ಸಿಪ್ಪೆ ತೆಗೆದು ತಿನ್ನುತ್ತದೆ ಎಂದು ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:07 pm, Wed, 12 April 23