Viral Video: ಮಾಂಸಾಹಾರ ಸರ್ವ್‌ ಮಾಡಿದಕ್ಕೆ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವೃದ್ಧ ಪ್ರಯಾಣಿಕ

|

Updated on: Jul 31, 2024 | 3:44 PM

ವಂದೇ ಭಾರತ್ ರೈಲಿನಲ್ಲಿ ಶುದ್ಧ ಸಸ್ಯಹಾರಿ ಪ್ರಯಾಣಿಕರೊಬ್ಬರು ಲೇಬಲ್​​ ಗಮನಿಸದೆ ಆಕಸ್ಮಿಕವಾಗಿ ಮಾಂಸಹಾರ ಸೇವಿಸಿದ್ದಾರೆ. ಎರಡು ತುತ್ತು ತಿಂದ ಬಳಿಕ ಮಾಂಸಾಹಾರ ಎಂದು ತಿಳಿದು ಕೋಪಗೊಂಡ ವ್ಯಕ್ತಿ ಮಾಂಸಾಹಾರ ಸರ್ವ್‌ ಮಾಡಿದ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.

Viral Video: ಮಾಂಸಾಹಾರ ಸರ್ವ್‌ ಮಾಡಿದಕ್ಕೆ  ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವೃದ್ಧ ಪ್ರಯಾಣಿಕ
Follow us on

ವಂದೇ ಭಾರತ್ ಎಕ್ಸ್‌ಪ್ರೆಸ್ ಸದಾ ಒಂದಲ್ಲ ಒಂದು ಕಾರಣದಿಂದಾಗಿ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ವಂದೇ ಭಾರತ್ ಸಿಬ್ಬಂದಿಗೆ ವೃದ್ಧ ಪ್ರಯಾಣಿಕರೊಬ್ಬರು ಕಪಾಳಮೋಕ್ಷ ಮಾಡಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಂದೇ ಭಾರತ್ ರೈಲಿನಲ್ಲಿ ಶುದ್ಧ ಸಸ್ಯಹಾರಿಯಾದ ಪ್ರಯಾಣಿಕರೊಬ್ಬರು ಲೇಬಲ್​​ ಗಮನಿಸದೆ ಆಕಸ್ಮಿಕವಾಗಿ ಮಾಂಸಹಾರ ಸೇವಿಸಿದ್ದಾರೆ. ಎರಡು ತುತ್ತು ತಿಂದ ಬಳಿಕ ಮಾಂಸಾಹಾರ ಎಂದು ತಿಳಿದು ಕೋಪಗೊಂಡ ವ್ಯಕ್ತಿ ಮಾಂಸಾಹಾರ ಸರ್ವ್‌ ಮಾಡಿದ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜುಲೈ 26 ರಂದು ಹೌರಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ, ಕಾರಿನೊಳಗೆ ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ

ಘಟನೆಗೆ ಸಂಬಂಧಿಸಿದ ವಿಡಿಯೋವನ್ನು @itsmekunal07 ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಜುಲೈ 27ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 79 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ‘ಬಡ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ’ ವೃದ್ಧನನ್ನು ಖಂಡಿಸುವ ಭರದಲ್ಲಿ ಹಲವಾರು ಪ್ರಯಾಣಿಕರು ಸಿಬ್ಬಂದಿಯ ರಕ್ಷಣೆಗೆ ಮುಂದಾಗಿದ್ದಾರೆ. ಇದಲ್ಲದೇ ಬಡ ಸಿಬ್ಬಂದಿಯ ಮೇಲೆ ಕಿಡಿಕಾರಿದ ವೃದ್ದ ಪ್ರಯಾಣಿಕನ ವಿರುದ್ದ ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ