Video Viral: ಮದುವೆ ಮನೆಯಿಂದಲೇ ವಧುವನ್ನು ಹೊತ್ಯೊಯ್ದ ನಾಲ್ವರು ಯುವಕರು

ವಾಸ್ತವವಾಗಿ ಮದುವೆ ಮುಗಿಸಿ ಬೀಳ್ಕೊಡುವ ಸಂದರ್ಭದಲ್ಲಿ ವಧು ತಾನು ಅತ್ತೆಯ ಮನೆಗೆ ಹೋಗಲಾರೆ ಎಂದು ಹಠ ಹಿಡಿದು ಕುಳಿತಿದ್ದಾಳೆ. ಎಷ್ಟೇ ಕರೆದರೂ ಬರದೇ ಇರುವುದರಿಂದ ಕೊನೆಗೆ ವರನ ಸಂಬಂಧಿಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ.

Video Viral: ಮದುವೆ ಮನೆಯಿಂದಲೇ ವಧುವನ್ನು ಹೊತ್ಯೊಯ್ದ ನಾಲ್ವರು ಯುವಕರು

Updated on: Jun 18, 2024 | 2:01 PM

ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಆದರೆ ಕೆಲವೊಂದು ಮದುವೆಯ ವಿಚಿತ್ರ ಸಂಗಂತಿಗಳು ಭಾರೀ ವೈರಲ್​ ಆಗುತ್ತಿರುತ್ತವೆ. ಇದೀಗ ಅಂತದ್ದೇ ವಿಚಿತ್ರ ಘಟನೆಯೊಂದು ಮದುವೆ ಮನೆಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಸದ್ಯ ವೈರಲ್​​ ಆಗಿರುವ ವಿಡಿಯೋದಲ್ಲಿ ನಾಲ್ವರು ಯುವಕರು ಮದುಮಗಳನ್ನು ಹೊತ್ಯೊಯ್ಯುತ್ತಿರುವುದನ್ನು ಕಾಣಬಹುದು.

@PalsSkit ಎಂಬ ಟ್ವಿಟರ್​ ಖಾತೆಯಲ್ಲಿ ಜೂನ್​​ 10ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಇಲ್ಲಿಯವರೆಗೂ 2ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್​​​ಗಳನ್ನು ಕಾಣಬಹುದು.

ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್ ವಾಲಾ; ಚಹಾದ ರುಚಿಗೆ ಫಿದಾ ಆದ ಪ್ರವಾಸಿಗರು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಾಸ್ತವವಾಗಿ ಮದುವೆ ಮುಗಿಸಿ ಬೀಳ್ಕೊಡುವ ಸಂದರ್ಭದಲ್ಲಿ ವಧು ತಾನು ಅತ್ತೆಯ ಮನೆಗೆ ಹೋಗಲಾರೆ ರಂದು ಹಠ ಹಿಡಿದು ಕುಳಿತಿದ್ದಾಳೆ. ಎಷ್ಟೇ ಕರೆದರೂ ಬರದೇ ಇರುವುದರಿಂದ ಕೊನೆಗೆ ವರನ ಸಂಬಂಧಿಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ. ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: