ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಶ್ರೀ, ಓಂ, ಶುಭಂ ಅಥವಾ ಸ್ವಸ್ತಿಕ ಬರೆಯುತ್ತೇವೆ. ಹೀಗೆ ಬರೆಯುವುದರಿಂದ ಏನು ಲಾಭ? ಏನೆಲ್ಲ ಪರಿಣಾವಾಗುತ್ತೆ? ಈ ವಿಡಿಯೋ ನೋಡಿ.
ಓಂಕಾರವನ್ನು ಎಲ್ಲ ಮಂತ್ರಗಳ ರಾಜ ಎಂದು ಕರೆಯಲಾಗುತ್ತದೆ ಯಾಕೆಂದರೆ ಎಲ್ಲ ಮಂತ್ರಗಳ ಮೂಲವೇ ಓಂ (OM). ಓಂಕಾರವು ಪರಬ್ರಹ್ಮನನ್ನು ಪ್ರತಿನಿಧಿಸುತ್ತದೆ, ವಾಸ್ತವಿಕವಾಗಿ ಓಂ ಪವಿತ್ರವಾದ ಪದವಾಗಿದ್ದು ಅನಂತವಾದ ಶಕ್ತಿಯನ್ನುಪ್ರತಿನಿಧಿಸುತ್ತದೆ. ಓಂಕಾರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಓಂಕಾರಕ್ಕೆ ಅತೀ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ವೇದಮಂತ್ರ, ದೆವರ ನಾಮಸ್ಮರಣೆಯೂ ಓಂ ಶಬ್ದದಿಂದಲೇ ಆರಂಭವಾಗುತ್ತದೆ. ಓಂಕಾರದ ಮೂಲಕ ಆರಂಭವಾಗುವ ದೇವರನಾಮಾರ್ಚನೆಯು ಹೆಚ್ಚು ಪರಿಣಾಮಕಾರಿಯಾದುದು ಎಂದು ವೇದದಲ್ಲಿ ಉಲ್ಲೇಖ ಮಾಡಲಾಗಿದೆ. ಓಂ ಎನ್ನುವುದು ಒಂದು ಅಕ್ಷರವಲ್ಲ. ಅದು ಅ ಉ ಮ ಎಂಬ ಮೂರು ಅಕ್ಷರಗಳ ಸಂಗಮ. ಅ ಎಂದರೆ ಸೃಷ್ಟಿ, ಉ ಎಂದರೆ ವಿಕಸನ, ಮ ಎಂದರೆ ಮೌನ ಹಾಗೂ ವಿನಾಶ. ಹಾಗಾಗಿ ಈ ಒಂದೇ ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ.
ನಮ್ಮ ಸನಾತನ ಹಿಂದೂ ಧರ್ಮದಲ್ಲಿ (Hindu) ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಶ್ರೀ, ಓಂ, ಶುಭಂ ಅಥವಾ ಸ್ವಸ್ತಿಕ ಬರೆಯುತ್ತೇವೆ. ಹೀಗೆ ಬರೆಯುವುದರಿಂದ ಏನು ಲಾಭ? ಏನೆಲ್ಲ ಪರಿಣಾವಾಗುತ್ತೆ? ಇಲ್ಲಿದೆ ನೋಡಿ.
ಇದನ್ನೂ ಓದಿ: ಆಂಜನೇಯ ಸ್ವಾಮಿಗೆ ಚಿರಂಜೀವಿ ವರವನ್ನು ಕೊಟ್ಟವರು ಯಾರು? ಹನುಮನಿಗೆ ಅಮರತ್ವ ಸಿಕ್ಕಿದ್ದು ಹೇಗೆ?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ