ಜನರು ಆಹಾರ ಪದಾರ್ಥಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡುತ್ತಾರೆ. ಈಗ ವಿಚಿತ್ರ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ಕಂಡು ಗುಲಾಬ್ ಜಾಮೂನ್ ಇಷ್ಟ ಪಡುವವರು ಕಂಗಾಲಾಗಿದ್ದಾರೆ. ಯಾಕೆಂದರೆ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗುಲಾಬ್ ಜಾಮೂನು ಬಳಸಿ ಪಿಜ್ಜಾ ತಯಾರಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ .ಈ ಹೊಸ ಪಾಕವಿಧಾನದ ವೀಡಿಯೊವನ್ನು @realfoodler ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಗುಲಾಬ್ ಜಾಮೂನ್ ಪಿಜ್ಜಾ ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರಿಂದ ನಾನಾ ರೀತಿಯ ಕಾಮೆಂಟ್‌ಗಳು ಬರುತ್ತಿವೆ.
“ಈ ಎರಡು ಭಕ್ಷ್ಯಗಳನ್ನು ಇಷ್ಟಪಡುವ ಅನೇಕ ಜನರಿದ್ದಾರೆ. ಎರಡು ಖಾದ್ಯಗಳ ರುಚಿ ಕೆಡಿಸಲು ಇಷ್ಟೆಲ್ಲಾ ಮಾಡುತ್ತಿದ್ದೀರಿ..ಈಗ ವಿಷವನ್ನೂ ಸೇರಿಸಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಖಾದ್ಯವನ್ನು ಮಾಡಿದವರಿಗೆ ಶಿಕ್ಷೆ ಅನುಭವಿಸಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ನಿನ್ನ ವಿಳಾಸ ಕಳಿಸು,ನಿನ್ನನ್ನು ಜೈಲಿಗೆ ಹಾಕುತ್ತೇನೆ,ನೋಡಲೂ ಆಗುತ್ತಿಲ್ಲ, ನಾನೇನು ಮಾಡಲಿ ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಿದ ಬ್ಲೌಸ್ ತೊಟ್ಟು ಮಿಂಚಿದ ಅಂಬಾನಿಯ ಏಕೈಕ ಪುತ್ರಿ
ಈ ವಿಡಿಯೋವನ್ನು ಫೆಬ್ರವರಿ 29ರಂದು ಹಂಚಿಕೊಂಡಿದ್ದು, ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಅಧಿಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಿತ್ರದ ಪ್ರಯೋಗದ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ