ಭಾರತೀಯ ಸೀರೆಯಲ್ಲಿ ಆಸ್ಟ್ರೇಲಿಯಾ ನೀರೆ; ಸೀರೆಯುಟ್ಟು ರ‍್ಯಾಂಪ್‌ ವಾಕ್​​ ಮಾಡಿದ ಮಿಸ್ ಆಸ್ಟ್ರೇಲಿಯಾ

|

Updated on: Jun 02, 2024 | 10:56 AM

ಮಿಸ್ ಆಸ್ಟ್ರೇಲಿಯಾ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಯನ್ನು ಉಟ್ಟು ಪ್ರತಿಷ್ಠಿತ ಮಿಸ್ ವರ್ಲ್ಡ್ 2024 ರಲ್ಲಿ ರ‍್ಯಾಂಪ್‌ ವಾಕ್​​​ ಮಾಡಿದ್ದು ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ಭಾರತೀಯ ಸೀರೆಯಲ್ಲಿ ಆಸ್ಟ್ರೇಲಿಯಾ ನೀರೆ; ಸೀರೆಯುಟ್ಟು ರ‍್ಯಾಂಪ್‌ ವಾಕ್​​ ಮಾಡಿದ ಮಿಸ್ ಆಸ್ಟ್ರೇಲಿಯಾ
Follow us on

ಮಿಸ್ ಆಸ್ಟ್ರೇಲಿಯಾ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಯನ್ನು ಉಟ್ಟು ಪ್ರತಿಷ್ಠಿತ ಮಿಸ್ ವರ್ಲ್ಡ್ 2024 ರಲ್ಲಿ ರ‍್ಯಾಂಪ್‌ ವಾಕ್​​​ ಮಾಡಿದ್ದು ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಭಾರತೀಯ ಹೆಣ್ಣುಮಕ್ಕಳಿಗೆ ಸೀರೆ ಮೇಲೆ ವಿಶೇಷ ಒಲವು. ಆದರೆ ಇದೀಗ ಸೀರೆಯಲ್ಲಿ ಆಸ್ಟ್ರೇಲಿಯಾದ ನೀರೆ ಮಿಂಚಿದ್ದು ವಿದೇಶಿಗರ ಸೀರೆಯೊಂದಿನ ವಿಶೇಷ ನಂಟು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಅದೇ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿ ಸಿನಿ ಶೆಟ್ಟಿ ಸಂಪ್ರದಾಯಿಕ ಲೆಹಾಂಗ​​​ ತೊಟ್ಟು ರ‍್ಯಾಂಪ್‌ ವಾಕ್​​ ಮಾಡಿದ್ದಾರೆ.

ವಿಶ್ವ ಸುಂದರಿ 2024 ರ ಪ್ರತಿಷ್ಠಿತ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಸುತ್ತಿನಲ್ಲಿ ಮಿಸ್ ಆಸ್ಟ್ರೇಲಿಯ ಸೀರೆಯುಟ್ಟು ರ‍್ಯಾಂಪ್​​ನ್ಲಿ ನಡೆದಿದ್ದು, ಸಾಂಸ್ಕೃತಿಕ ಗೌರವ ಮತ್ತು ಜಾಗತಿಕ ಏಕತೆಯ ಬಗ್ಗೆ ಪ್ರಬಲ ಸಂದೇಶವನ್ನು ರವಾನಿಸಿದೆ. ಇದಲ್ಲದೇ ವಿಶೇಷವಾಗಿ ತಮ್ಮದೇ ಆದ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುವ ಭಾರತೀಯ ಯುವ ಪೀಳಿಗೆಗೆ ಉತ್ತಮ ಸಂದೇಶವಾಗಿದೆ.

ಇದನ್ನೂ ಓದಿ: ಕಾಮಿಡಿ ಶೋ ನೋಡಿ ನಕ್ಕು ನಕ್ಕು ಮೂರ್ಛೆ ತಪ್ಪಿ ಬಿದ್ದ ವ್ಯಕ್ತಿ; ಆಸ್ಪತ್ರೆಗೆ ದಾಖಲು

ಇದೀಗ @Brinda_IND ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಮೇ 31ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 8ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸೀರೆಯಲ್ಲಿ ಆಸ್ಟ್ರೇಲಿಯಾ ಸುಂದರಿಯ ಸೌಂದರ್ಯ ಕಂಡು ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sun, 2 June 24