AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಕರುವಿನ ಮೇಲೆ ವ್ಯಾಘ್ರನ ದಾಳಿ, ಕಂದನ ಜೀವ ಕಾಪಾಡಲು ಹುಲಿ ಮೇಲೆ ಪ್ರತಿದಾಳಿ ನಡೆಸಿದ ತಾಯಿ ಹಸು

ಹುಲಿಯೊಂದು ಕರುವನ್ನು ಬೆನ್ನಟ್ಟಿಸಿಕೊಂಡು ಹೋಗಿ ದಾಳಿ ಮಾಡುತ್ತದೆ. ಇದನ್ನು ಕಂಡು ತಾಯಿಹಸು ತನ್ನ ಪುಟ್ಟ ಕಂದನನ್ನು ಕಾಪಾಡಲು ಮುಂದಾಗುತ್ತದೆ. ತಕ್ಷಣ ಕೋಪದಲ್ಲಿ ಹಸು ಕರುವನ್ನು ಕಾಪಾಡಲು ತನ್ನ ಕೊಂಬಿನ ಮೂಲಕ ಹುಲಿಯ ಮೇಲೆ ಪ್ರತಿದಾಳಿ ಮಾಡಿ ಅಲ್ಲಿಂದ ಓಡಿಸುತ್ತದೆ

Video Viral: ಕರುವಿನ ಮೇಲೆ ವ್ಯಾಘ್ರನ ದಾಳಿ, ಕಂದನ ಜೀವ ಕಾಪಾಡಲು ಹುಲಿ ಮೇಲೆ ಪ್ರತಿದಾಳಿ ನಡೆಸಿದ ತಾಯಿ ಹಸು
ಕರುವಿನ ಮೇಲೆ ವ್ಯಾಘ್ರನ ದಾಳಿ
ಅಕ್ಷಯ್​ ಪಲ್ಲಮಜಲು​​
|

Updated on:Apr 24, 2023 | 2:13 PM

Share

ಇಲ್ಲೊಂದು  ಪುಟ್ಟ ಕರುವಿನ ಮೇಲೆ ಹುಲಿಯೊಂದು ದಾಳಿ ಮಾಡುವ ವೀಡಿಯೊ ವೈರಲ್ ಸಾಮಾಜಿಕ ಜಾಲತಾನದಲ್ಲಿ ಆಗಿದೆ.   ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅದರ ಜತೆಗೆ ಹುಲಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದೆ, ಇದು ಜನ, ಸಾಕುಪ್ರಾಣಿಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡಿದೆ, ಹುಲಿಗಳು ಕಾಡು ಬಿಟ್ಟು ನಾಡಿನತ್ತ ಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ, ಈಗಾಗಲೇ ಬನ್ನೇರುಘಟ್ಟ ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷವನ್ನು ಆಚರಣೆ ಮಾಡಲಾಗಿತ್ತು. ಭಾರತವು ಈಗ 3,000 ಕ್ಕೂ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ ಎಂದು ಒಂದು ದಾಖಲೆಯ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅನೇಕ ಹಳ್ಳಿಗಳಲ್ಲಿ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಕಳವಳ ಸೃಷ್ಟಿ ಮಾಡಿದೆ. ಇದು ಮನುಷ್ಯರಿಗೆ ಮತ್ತು ವನ್ಯಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತಿದೆ.

ಇದೀಗ ಇದಕ್ಕೆ ಸಾಕ್ಷಿ ಎಂಬಂತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್​​ ಆಗುತ್ತಿದೆ. ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಹುಲಿಯೊಂದು ಕರುವನ್ನು ಬೆನ್ನಟ್ಟಿಸಿಕೊಂಡು ಹೋಗಿ ದಾಳಿ ಮಾಡಿದೆ. ಎಲ್ಲರನ್ನೂ ಒಂದು ಬಾರಿ ತಲ್ಲಣಗೊಳಿಸಿದೆ. ತಮ್ಮ ಪುಟ್ಟ ಕಂದನನ್ನು ಕಾಪಾಡಲು  ತಾಯಿಹಸು ಮುಂದಾಗುತ್ತದೆ. ತಕ್ಷಣ ಕೋಪದಲ್ಲಿ ಹಸು ಕರುವನ್ನು ಕಾಪಾಡಲು ತನ್ನ ಕೊಂಬಿನ ಮೂಲಕ ಹುಲಿಯ ಮೇಲೆ ಪ್ರತಿದಾಳಿ ಮಾಡಿ ಅಲ್ಲಿಂದ ಓಡಿಸುತ್ತದೆ, ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್​​ ಆಗುತ್ತಿದೆ.

ಭಾರತವು ಈಗ ವಿಶ್ವದ 75% (ಸುಮಾರು 3200) ರಷ್ಟು ಕಾಡು ಹುಲಿಗಳನ್ನು ಹೊಂದಿದೆ. ಇದೀಗ ಹುಲಿಗಳು ಮಾನವನ ಮೇಲೆ ದಾಳಿ ಮಾಡುತ್ತಿದೆ. ಇದರ ಜತೆಗೆ ಸಾಕು ಪ್ರಾಣಿಗಳಿಗೂ ಸಂಕಷ್ಟವನ್ನು ಉಂಟು ಮಾಡುತ್ತಿದೆ ಎಂದು ಟ್ವಿಟರ್​​ನಲ್ಲಿ ನಂದಾ ಬರೆದಿದ್ದಾರೆ. ಶನಿವಾರ ಹಂಚಿಕೊಂಡ ಈ ವೀಡಿಯೊ Twitter ನಲ್ಲಿ 33,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಆದರೆ ಈ ಘಟನೆ ಎಲ್ಲಿ ನಡೆದದ್ದು ಎಂದು ತಿಳಿಸಲಿಲ್ಲ.

ಇದನ್ನೂ ಓದಿ:Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ

ಈ ವೀಡಿಯೊವನ್ನು ನೋಡಿದ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರೂ ಕಮೆಂಟ್​​​ ಮಾಡಿದ್ದಾರೆ. ಒಬ್ಬ ಬಳಕೆದಾರ ಈ ರೀತಿಯ ಹುಲಿ ಬೇಟೆಯಾಡುವುದನ್ನು ನೋಡಿಲ್ಲ ಎಂದು ಕಮೆಂಟ್​​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಹುಲಿಗಳ ಜನಸಂಖ್ಯೆಯನ್ನು ನೋಡಲು ಕಣ್ಣಿಗೆ ಹಬ್ಬ ಆದರೆ ಮಾನವ-ಪ್ರಾಣಿ ಸಂಘರ್ಷ ಮತ್ತು ವ್ಯಾಪಕ ಜಾಗೃತಿಯನ್ನು ತಡೆಗಟ್ಟಲು ಕಾಂಕ್ರೀಟ್ ಕ್ರಮಗಳ ಅನುಷ್ಠಾನವಾಗಬೇಕು ಎಂದು ಹೇಳಿದ್ದಾರೆ.

ಭಾರತದ ಹುಲಿ ಗಣತಿಯ ಮಾಹಿತಿಯ ಪ್ರಕಾರ, ದೇಶದಲ್ಲಿ ಹುಲಿಗಳ ಸಂಖ್ಯೆಯು 2018 ರಲ್ಲಿ 2,967 ರಿಂದ 2022 ರಲ್ಲಿ 3,167 ಕ್ಕೆ 6.74 ರಷ್ಟು ಹೆಚ್ಚಾಗಿದೆ. ಪ್ರಾಜೆಕ್ಟ್ ಟೈಗರ್ ಅನ್ನು ಕೇಂದ್ರವು ಏಪ್ರಿಲ್ 1, 1973 ರಂದು ಪ್ರಾರಂಭಿಸಿತು. ಹುಲಿಗಳ ಸಂಖ್ಯೆ ಕುಸಿಯಿತು. ವರದಿಯ ಪ್ರಕಾರ, ಸ್ವಾತಂತ್ರ್ಯದ ಸಮಯದಲ್ಲಿ ಹುಲಿಗಳ ಸಂಖ್ಯೆ 40,000 ರಷ್ಟಿತ್ತು ಆದರೆ 1970 ರ ವೇಳೆಗೆ, ವ್ಯಾಪಕವಾದ ಬೇಟೆಯಾಡುವಿಕೆಯಿಂದಾಗಿ ಇದು ವೇಗವಾಗಿ 2,000 ಕ್ಕೆ ಇಳಿಯಿತು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 2:11 pm, Mon, 24 April 23