Video Viral: ಲಾಟರಿಯಲ್ಲಿ ಕೋಟಿ ದುಡ್ಡು ಗೆದ್ದ ಖುಷಿಗೆ ವೇದಿಕೆಯ ಮೇಲೆ ಕುಸಿದು ಬಿದ್ದ ಮಹಿಳೆ

ಹೊಸ ವರ್ಷದ ಮುನ್ನ ದಿನದ ಲಾಟರಿಯಲ್ಲಿ ಮಿಲಿಯನ್ ಡಾಲರ್ ವಿಜೇತರ ಹೆಸರು ಘೋಷಣೆಯಾಗುತ್ತಿದ್ದಂತೆ ಮಹಿಳೆಯೊಬ್ಬಳು ಖುಷಿ ತಾಳಲಾರದೆ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾಳೆ. ಬಡತನದಿಂದಲೇ ಜೀವನ ಸಾಗಿಸುತ್ತಿದ್ದ ಈಕೆಗೆ ತಾನು ಕೋಟ್ಯಾಧಿಪತಿಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಖುಷಿ ತಾಳಲಾರದೆ ಕುಸಿದು ಬಿದ್ದಿರುವುದು ತಿಳಿದುಬಂದಿದೆ.

Video Viral: ಲಾಟರಿಯಲ್ಲಿ ಕೋಟಿ ದುಡ್ಡು ಗೆದ್ದ ಖುಷಿಗೆ ವೇದಿಕೆಯ ಮೇಲೆ ಕುಸಿದು ಬಿದ್ದ ಮಹಿಳೆ
Woman collapsed
Image Credit source: Twitter

Updated on: Jan 02, 2024 | 4:59 PM

ಅಮೆರಿಕದ ಉತ್ತರ ಕೆರೊಲಿನಾದ ಮಹಿಳೆಯೊಬ್ಬರು ಹೊಸ ವರ್ಷದ ಮುನ್ನ ದಿನದ ಲಾಟರಿಯಲ್ಲಿ ಮಿಲಿಯನ್ ಡಾಲರ್ ಗೆದ್ದ ನಂತರ ನಂಬಲಾಗದೆ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಬಡತನದಿಂದಲೇ ಜೀವನ ಸಾಗಿಸುತ್ತಿದ್ದ ಈಕೆಗೆ ತಾನು ಕೋಟ್ಯಾಧಿಪತಿಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಖುಷಿ ತಾಳಲಾರದೆ ಕುಸಿದು ಬಿದ್ದಿರುವುದು ತಿಳಿದುಬಂದಿದೆ. ಆಕೆಯ ಪ್ರತಿಕ್ರಿಯೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ಡಿಸೆಂಬರ್​​​ 31ರಂದು ರಾಕಿನ್​​ ಈವ್​​ ಈವೆಂಟ್​​​ ಕಾರ್ಯಕ್ರಮದಲ್ಲಿ ಫೈನಲಿಸ್ಟ್​​​ 5ಜನರ ಪೈಕಿ ಒಬ್ಬರಿಗೆ ಒಂದು ಮಿಲಿಯನ್​​ ಡಾಲರ್​​ ಗೆಲ್ಲುವ ಅವಕಾಶವಿತ್ತು. ಆದ್ದರಲ್ಲಿ ಪಮೇಲಾ ಬ್ರಾಡ್‌ಶಾ ಎಂಬ ಮಹಿಳೆ ಮಿಲಿಯನ್​​ ಡಾಲರ್​ ದುಡ್ಡು ಗೆದ್ದಿದ್ದಾರೆ. ದುಡ್ಡು ಗೆಲ್ಲುತ್ತಿದ್ದಂತೆ ಖುಷಿ ತಾಳಲಾರದೆ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಆದರೆ ಅದೇ ಹೊತ್ತಿಗೆ ಆಕೆಯ ಮಗಳು ಜೊವಾನ್ನಾ ಹಿನ್ಸನ್‌ರ ನೆರವಿನೊಂದಿಗೆ ಮತ್ತೆ ಎದ್ದು ನಿಂತು ಸಂಭ್ರಮಿಸಿದ್ದಾಳೆ.

ಇದನ್ನೂ ಓದಿ: 41 ವರ್ಷಗಳ ಕಾಲ ತಾಯಿಯ ಹುಡುಕಾಟ, ಇನ್ನೇನು ಭೇಟಿಯಾಗಬೇಕೆನ್ನುವಷ್ಟರಲ್ಲಿ ನಡೆದಿದ್ದೇ ಬೇರೆ

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಬ್ರಾಡ್‌ಶಾ ಬಂದ ಲಾಟರಿ ಹಣದಿಂದ ಸ್ವಂತ ಮನೆಯನ್ನು ಖರೀದಿಸುವುದಾಗಿ ಹೇಳಿರುವುದು ವರದಿಯಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:59 pm, Tue, 2 January 24