Video: ‘ಉಸಿರಾಡಲಾಗುತ್ತಿಲ್ಲ ಎಂದರೂ ಬಿಟ್ಟಿಲ್ಲ’; ಪೊಲೀಸ್‌ ದೌರ್ಜನ್ಯಕ್ಕೆ ಕಪ್ಪು ವರ್ಣೀಯ ಬಲಿ

|

Updated on: Apr 28, 2024 | 11:44 AM

ಪೋಲೀಸ್ ಅಧಿಕಾರಿಯೊಬ್ಬರು ಟೈಸನ್‌ನ ಹಿಂಭಾಗದಲ್ಲಿ ಕುತ್ತಿಗೆಯ ಬಳಿ ಮೊಣಕಾಲಿನಿಂದ ಸುಮಾರು 30 ಸೆಕೆಂಡುಗಳ ಕಾಲ ಬಲವಾಗಿ ಒತ್ತಿ ಹಿಡಿದಿರುವುದು ಮತ್ತು ಟೈಸನ್ 'ನನಗೆ ಉಸಿರಾಡಲು ಆಗುತ್ತಿಲ್ಲ' ಎಂದು ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಮೆರಿಕದಲ್ಲಿ ಕಪ್ಪು ವರ್ಣೀಯರ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ. 2020ರಲ್ಲಿ ‘ಜಾರ್ಜ್‌ ಫ್ಲಾಯ್ಡ್‌’ ಸಾವು ಮರೆಯುವ ಮುನ್ನವೇ ಅದೇ ರೀತಿ ಮತ್ತೊಂದು ದೌರ್ಜನ್ಯ ನಡೆದಿದೆ. ಫ್ರಾಂಕ್ ಟೈಸನ್ (53) ಎಂಬ ಕಪ್ಪು ವರ್ಣೀಯ ವ್ಯಕ್ತಿಯನ್ನು ಪೊಲೀಸರು ಹಿಡಿದು, ಮೊಣಕಾಲಿನಿಂದ ಆತನ ಕುತ್ತಿಗೆಗೆ ಬಲವಾಗಿ ಒತ್ತಿ ಮತ್ತು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.  ‘ನನಗೆ ಉಸಿರಾಡುತ್ತಿಲ್ಲ’ ಎಂದು ಸಂತ್ರಸ್ತೆ ಹೇಳಿದರೂ ಪೊಲೀಸರು ಬಿಡದ ಕಾರಣ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವುದು ವರದಿಯಾಗಿದೆ. ವಾರದ ಹಿಂದೆ ಓಹಿಯೋದ ಕ್ಯಾಂಟನ್ ನಗರದಲ್ಲಿ ಈ ಭಯಾನಕ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏಪ್ರಿಲ್ 18 ರಂದು, ಪೊಲೀಸ್ ಅಧಿಕಾರಿಗಳು ಫ್ರಾಂಕ್ ಟೈಸನ್ ಅವರನ್ನು ಕಾರು ಅಪಘಾತ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದರು. ಇದರಿಂದ ಪೊಲೀಸರು ಸಮೀಪದ ಬಾರ್‌ನಲ್ಲಿದ್ದ ಟೈಸನ್‌ನನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ವೀಡಿಯೊದಲ್ಲಿ, ಟೈಸನ್ ಅವರನ್ನು ಬಂಧಿಸಿದ ಪೊಲೀಸರು ಕೈಕೋಳ ಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ‘ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ, ಜಿಲ್ಲಾಧಿಕಾರಿಗೆ ಕರೆ ಮಾಡಿ’ ಎಂದು ಸಂತ್ರಸ್ತೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಅಳಿಯನ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಮಾವ ಹೃದಯಾಘಾತದಿಂದ ಸಾವು

ಪೋಲೀಸ್ ಅಧಿಕಾರಿಯೊಬ್ಬರು ಟೈಸನ್‌ನ ಹಿಂಭಾಗದಲ್ಲಿ ಕುತ್ತಿಗೆಯ ಬಳಿ ಮೊಣಕಾಲಿನಿಂದ ಸುಮಾರು 30 ಸೆಕೆಂಡುಗಳ ಕಾಲ ಬಲವಾಗಿ ಒತ್ತಿ ಹಿಡಿದಿರುವುದು ಮತ್ತು ಟೈಸನ್ ‘ನನಗೆ ಉಸಿರಾಡಲು ಆಗುತ್ತಿಲ್ಲ’ ಎಂದು ಕಿರುಚುತ್ತಿರುವುದನ್ನು ಕಾಣಬಹುದು. ಕೆಲ ಹೊತ್ತಿನ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಟೈಸನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವ್ಯಕ್ತಿ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಟೈಸನ್ ಸಾವಿಗೆ ನಿಖರವಾದ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈ ಘಟನೆಯಲ್ಲಿ ಟೈಸನ್‌ರನ್ನು ಕ್ರೂರವಾಗಿ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬ್ಯೂ ಸ್ಕೋನೆಗ್ಸ್ ಮತ್ತು ಕ್ಯಾಮ್ಡೆನ್ ಬರ್ಚ್ ಎಂದು ಗುರುತಿಸಲಾಗಿದೆ. ಓಹಿಯೋ ಬ್ಯೂರೋ ಆಫ್ ಕ್ರಿಮಿನಲ್ ಇನ್ವೆಸ್ಟಿಗೇಶನ್ (ಒಸಿಐ) ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ