Viral: ಪ್ಯಾಂಟಲ್ಲೇ ಸುಸ್ಸೂ ಮಾಡ್ಕೊಂಡಿದ್ದಾನೆ ಅಂದ ಅನ್ಕೋಬೇಡಿ; ಹೊಸ ಫ್ಯಾಶನ್ ಜೀನ್ಸ್ ಅಂತೆ!
ಡೆನಿಮ್ ಕಂಪೆನಿಯ ಈ ಜೀನ್ಸ್ನ್ನು ಬ್ರಿಟಿಷ್ ಇಟಾಲಿಯನ್ ಬ್ರಾಂಡ್ ಡಿಸೈನರ್‌ಗಳಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಅವರು ವಿನ್ಯಾಸಗೊಳಿಸಿದ್ದು, ಇತ್ತೀಚೆಗಷ್ಟೇ ಫ್ಯಾಶನ್ ಶೋವೊಂದರಲ್ಲಿ ಅನಾವರಣಗೊಳಿಸಲಾಯಿತು. ಈ ಜೀನ್ಸ್ ಬೆಲೆ 811 ಡಾಲರ್‌ಗಳು ಅಂದರೆ ಭಾರತೀಯ ಕರೆನ್ಸಿ ಪ್ರಕಾರ 67,600 ರೂಪಾಯಿ.
ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಹೆಸರಿನಲ್ಲಿ ಸಾಕಷ್ಟು ಚಿತ್ರ ವಿಚಿತ್ರ ಉಡುಪುಗಳು ಮಾರುಕಟ್ಟೆಗೆ ಬರುತ್ತಿವೆ. ಒಂದು ಕ್ಷಣ ಅಂತಹ ಬಟ್ಟೆಗಳನ್ನು ನೋಡಿದಾಗ ಯಾರಪ್ಪ ಇದನ್ನು ಖರೀದಿಸುತ್ತಾರೆ ಅಂತ ನಿಮಗೆ ಅನಿಸುವುದು ಸಹಜ. ಆದ್ರೆ ಇದಕ್ಕೂ ಲಕ್ಷ ಲಕ್ಷ ಕೊಟ್ಟು ಖರೀದಿಸುವವರು ಇದ್ದಾರೆ. ಹೌದು ಇದೀಗ ಸುಸ್ಸೂ ಮಾಡಿಕೊಂಡಂತೆ ಕಾಣೋ ಜೀನ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ.
ಡೆನಿಮ್ ಕಂಪೆನಿಯ ಈ ಜೀನ್ಸ್ನ್ನು ಬ್ರಿಟಿಷ್ ಇಟಾಲಿಯನ್ ಬ್ರಾಂಡ್ ಡಿಸೈನರ್‌ಗಳಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಅವರು ವಿನ್ಯಾಸಗೊಳಿಸಿದ್ದು, ಇತ್ತೀಚೆಗಷ್ಟೇ ಫ್ಯಾಶನ್ ಶೋವೊಂದರಲ್ಲಿ ಅನಾವರಣಗೊಳಿಸಲಾಯಿತು. ಈ ಜೀನ್ಸ್ ಬೆಲೆ 811 ಡಾಲರ್‌ಗಳು ಅಂದರೆ ಭಾರತೀಯ ಕರೆನ್ಸಿ ಪ್ರಕಾರ 67,600 ರೂಪಾಯಿ.
View this post on Instagram
ಇದನ್ನೂ ಓದಿ: ನೀವು ಧರಿಸುವ ಬಟ್ಟೆಯ ಬಣ್ಣ ರಸ್ತೆ ಅಪಘಾತಕ್ಕೆ ಕಾರಣವಾಗಬಹುದು; ವಿಡಿಯೋ ಇಲ್ಲಿದೆ ನೋಡಿ
ಸದ್ಯ ಈ ವಿಚಿತ್ರ ಜೀನ್ಸ್ ಪ್ಯಾಂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಜೀನ್ಸ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Sun, 28 April 24