Viral Video : ಲಿಫ್ಟ್​ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಮುಂದೇನಾಯಿತು?

Dog Bite : ನನ್ನ ಮಗನಿಗೆ ನಿಮ್ಮ ನಾಯಿ ಕಚ್ಚಿದೆ ಎಂದು ಈ ಬಾಲಕನ ತಂದೆ ಹೇಳಿದಾಗ ಆಕೆ, ‘ನಿನಗೆ ಹುಚ್ಚಾ? ಹೆಣ್ಣುಮಕ್ಕಳೊಂದಿಗೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲವಾ?’ ಎಂದು ಉಲ್ಟಾ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾಳೆ.

Viral Video : ಲಿಫ್ಟ್​ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಮುಂದೇನಾಯಿತು?
ಲಿಫ್ಟ್​ನಲ್ಲಿ ನಾಯಿಯಿಂದ ಕಚ್ಚಿಸಿಕೊಂಡ ಹುಡುಗ
Updated By: ಶ್ರೀದೇವಿ ಕಳಸದ

Updated on: Sep 07, 2022 | 5:57 PM

Viral Video : ಘಾಝಿಯಾಬಾದ್ ಹೌಸಿಂಗ್ ಸೊಸೈಟಿ ಲಿಫ್ಟ್​ನಲ್ಲಿ ಸಾಕುನಾಯಿಯೊಂದು ಬಾಲಕನನ್ನು ಕಚ್ಚುತ್ತದೆ. ನೋವಿನಿಂದ ಬಾಲಕ ಒದ್ದಾಡುತ್ತಿದ್ದರೂ ನಾಯಿಯ ಪೋಷಕಿ ಏನೂ ನಡೆದೇ ಇಲ್ಲವೆಂಬಂತೆ ನಿಂತುಕೊಳ್ಳುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್​ಗೆ ಒಳಗಾಗಿದ್ದಾರೆ. ಆಘಾತಕ್ಕೊಳಗಾದ ಈ ಬಾಲಕನ ತಂದೆ ಈ ಮಹಿಳೆಯೊಂದಿಗೆ ಮಾತಿಗಿಳಿದಿದ್ಧಾರೆ. ನಿಮ್ಮ ಫ್ಲ್ಯಾಟ್​ ನಂಬರ್ ಹೇಳಿ ಎಂದು ಆಕೆಗೆ ಕೇಳಿದರೂ ಆಕೆ ಉದ್ಧಟತನದಿಂದ ವರ್ತಿಸಿದ್ದಾರೆ. ಯಾಕೆ ನನ್ನ ಹಿಂದೆ ಬಿದ್ದಿದ್ದೀರಿ. ನೀವು ಹುಚ್ಚರಾ? ಹೆಣ್ಣುಮಕ್ಕಳೊಂದಿಗೆ ಹೇಗೆ ಮಾತನಾಡಬೇಕೆಂದು ನಿಮಗೆ ಗೊತ್ತಿಲ್ಲವಾ? ಏನಿದ್ದರೂ ನನ್ನ ಗಂಡನೊಂದಿಗೆ ಮಾತನಾಡಿ ಎಂದು ಬೇಜವಾಬ್ದಾರಿಯಿಂದ ಕೂಗಾಡಿದ್ದಾಳೆ. ಇದರಿಂದ ಬಾಲಕನ ತಂದೆ ರೋಸಿ ಹೋಗಿದ್ದಾರೆ.

ಈ ಮಹಿಳೆ ತನ್ನ ನಾಯಿಯನ್ನು ಬಹಿರ್ದೆಸೆಗಾಗಿ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ. ನನ್ನ ಮಗನಿಗೆ ನಿಮ್ಮ ನಾಯಿ ಕಚ್ಚಿದೆ ಎನ್ನುವುದು ನಿಮಗೆ ಅರ್ಥವಾಗಿಲ್ಲವಾ? ಎಂದು ಬಾಲಕನ ತಂದೆ ಆತಂಕ, ಕೋಪದಿಂದ ಕೇಳಿದಾಗ ಈಕೆ ತನಗಿದು ಸಂಬಂಧವೇ ಇಲ್ಲವೆಂಬಂತೆ ವಾದಿಸಿ ನುಣುಚಿಕೊಳ್ಳಲು ಪ್ರಯತ್ನಿಸಿದ್ಧಾಳೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರು ಈ ಅಮಾನವೀಯ ದೃಶ್ಯವನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೋ ನೋವು ಗಾಯವಾಗಿದೆ ಎಂದರೆ ಸ್ಪಂದಿಸುವುದು ಮನುಷ್ಯನ ಆದ್ಯ ಕರ್ತವ್ಯ. ಇಲ್ಲಿ ನಡೆದಿರುವ ಈ ಘಟನೆ ತನಗೆ ನೇರವಾಗಿ ಸಂಬಂಧವಿದ್ದರೂ ಅದನ್ನು ನಿರ್ಲಕ್ಷಿಸಿ ವಾದಿಸುತ್ತಿರುವ ಈ ಮಹಿಳೆಗೆ ಏನೆನ್ನಬೇಕು? ಇದು ಧಾರ್ಷ್ಟ್ರತನ ಅಲ್ಲದೆ ಇನ್ನೇನು? ಪ್ರಾಣಿಗಳನ್ನು ಸಾಕುವವರು ಹೆಚ್ಚು ಅಂತಃಕರಣ, ಮಾನವೀಯತೆ ಉಳ್ಳವರಾಗಿರುತ್ತಾರೆ. ಆದರೆ ಈ ಘಟನೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:52 pm, Wed, 7 September 22