ವೈರಲ್ ವಿಡಿಯೋ: ಒಂದೇ ಸಲಕ್ಕೆ ಡಜನ್​ಗಿಂತ ಹೆಚ್ಚು ಪ್ಲೇಟ್ ಗಳನ್ನು ಹೊತ್ತು ತರುವ ವೇಟರ್​ನ ಸಂಬಳ ಹೆಚ್ಚಿಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ!

ಹೆಚ್ಚೆಚ್ಚು ಗ್ರಾಹಕರಿಗೆ ಒಟ್ಟಿಗೆ ಸರ್ವ್ ಮಾಡಲು ಈತ ಒಂದೇ ಸಲಕ್ಕೆ ಒಂದು ಡಜನ್ ಪ್ಲೇಟ್ ಗಳನ್ನು ಕ್ಯಾರಿ ಮಾಡುತ್ತಾನೆ. ವೇಟರ್ ಕರಾಮತ್ತಿನ ವಿಡಿಯೋ ವೈರಲ್ ಆದ ಬಳಿಕ ಅದನ್ನು ವೀಕ್ಷಿಸಿದವರು ಅವನ ಸಂಬಳ ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದಾರೆ.

ವೈರಲ್ ವಿಡಿಯೋ: ಒಂದೇ ಸಲಕ್ಕೆ ಡಜನ್​ಗಿಂತ ಹೆಚ್ಚು ಪ್ಲೇಟ್ ಗಳನ್ನು ಹೊತ್ತು ತರುವ ವೇಟರ್​ನ ಸಂಬಳ ಹೆಚ್ಚಿಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ!
ವೇಟರ್​ನ ಕರಾಮತ್ತು!!
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 8:03 AM

ರೆಸ್ಟುರಾಂಟ್ (Restaurant) ಮತ್ತು ಹೋಟೆಲ್ ಗಳ ಮಾಲೀಕರು (owners) ಗ್ರಾಹಕರನ್ನು ಸೆಳೆಯಲು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ. ಈ ನಿಟ್ಟಿನಲ್ಲಿ ಸಫಲರಾದರೆ ಅವರ ವ್ಯಾಪಾರ ದ್ವಿಗುಣಗೊಳ್ಳವುದರಲ್ಲಿ ಸಂಶಯವಿಲ್ಲ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಅಷ್ಟೇ. ತಮ್ಮ ಮಾಲೀಕ ನಿರೀಕ್ಷಿಸದಕ್ಕಿಂತ ಹೆಚ್ಚಿನ ಸೇವೆ (service) ಒದಗಿಸಿ ಅವರಿಂದ ಶಹಬ್ಬಾಸಗಿರಿ ಗಿಟ್ಟಿಸುವ ತವಕದಲ್ಲಿರುತ್ತಾರೆ. ಕೆಲ ಉದ್ಯೋಗಿಗಳಂತೂ ನಂಬಲಸದಳ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ.

ಅಂಥವರ ಪೈಕಿ ಒಬ್ಬ ವೇಟರ್ ನ ಸ್ಟಂಟ್ ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ. ಹೆಚ್ಚೆಚ್ಚು ಗ್ರಾಹಕರಿಗೆ ಒಟ್ಟಿಗೆ ಸರ್ವ್ ಮಾಡಲು ಈತ ಒಂದೇ ಸಲಕ್ಕೆ ಒಂದು ಡಜನ್ ಪ್ಲೇಟ್ ಗಳನ್ನು ಕ್ಯಾರಿ ಮಾಡುತ್ತಾನೆ. ವೇಟರ್ ಕರಾಮತ್ತಿನ ವಿಡಿಯೋ ವೈರಲ್ ಆದ ಬಳಿಕ ಅದನ್ನು ವೀಕ್ಷಿಸಿದವರು ಅವನ ಸಂಬಳ ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದಾರೆ.

ವಿಡಿಯೋವನ್ನು ನೀವು ಗಮನಿಸಿ. ವೇಟರ್, ಒಂದು ಟ್ರೇನಲ್ಲಿ ಹತ್ತಾರು ಪ್ಲೇಟ್ ಗಳನ್ನು ಇಟ್ಟುಕೊಂಡು ಆ ಟ್ರೇಯನ್ನು ಭುಜದ ಮೇಲೆ ಹೊತ್ತು ಕಿಚನ್ ನಿಂದ ಸುಮಾರು ದೂರವಿರುವ ಹೋಟೆಲ್ ಅವರಣಕ್ಕೆ ಬರುತ್ತಾನೆ. ಎಡಗೈಯಲ್ಲಿ ಒಂದು ಸ್ಟ್ಯಾಂಡ್ ಹಿಡಿದು ಮತ್ತೊಂದು ಕೈಯಿಂದ ಹೆಗಲ ಮೇಲಿರುವ ಟ್ರೇಯಿಂದ ಪ್ಲೇಟ್ ಗಳು ಜಾರದ ಹಾಗೆ ಬೀಳದ ಹಾಗೆ ಬ್ಯಾಲೆನ್ಸ್ ಮಾಡುತ್ತಾ ಲೀಲಾಜಾಲವಾಗಿ ನಡೆದು ಬರುತ್ತಾನೆ.

ಸದರಿ ವಿಡಿಯೋವನ್ನು ಈಗಾಗಲೇ 40 ಲಕ್ಷ ಜನ ವೀಕ್ಷಿಸಿದ್ದು ವೇಟರ್ ನ ಕ್ಷಮತೆಯಿಂದ ಅವಾಕ್ಕಾಗಿದ್ದಾರೆ.

ವೀಕ್ಷಿಸಿದವರಲ್ಲಿ ಅನೇಕರು ವೇಟರ್ ನ ಈ ಸಾಹಸದಿಂದ ಹೋಟೆಲ್ ವ್ಯಾಪಾರ ಹೆಚ್ಚಾಗಿರುತ್ತ್ತದೆ ಮತ್ತು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿರುವ ಅದರ ಮಾಲೀಕ ಅವನ ಸಂಬಳ ಹೆಚ್ಚಿಸಬೇಕು ಅಂತ ಹೇಳಿದ್ದಾರೆ.

ಅದನ್ನು ಟೀಕಿಸಿದವರೂ ಇದ್ದಾರೆ. ಅವರು ಹೇಳೋದೇನೆಂದರೆ, ಅವನು ಕ್ಯಾರಿ ಮಾಡಿರವ ತಿಂಡಿಯನ್ನು 2-3 ಸಲ ಓಡಾಡಿ ಸರ್ವ್ ಮಾಡಬಹುದಾಗಿದೆ. ಹೀಗೆ ಸ್ಟಂಟ್ ಮಾಡುವ ಅವಶ್ಯಕತೆಯೇ ಇಲ್ಲ ಅನ್ನೋದು ಅವರ ಅಂಬೋಣ.

‘ಅವನಿಗೆ ಹೀಗೆಲ್ಲ ಕಷ್ಟಪಡುವ ಅಗತ್ಯವಿಲ್ಲ. ಒಂದು ಸಲಕ್ಕೆ 3-4 ಪ್ಲೇಟ್ ಕ್ಯಾರಿ ಮಾಡಿದರೆ ಸಾಕು. ಅದು ಸುಲಭದ ಕೆಲಸ ಮತ್ತು ಅವನು ಬರುವ ದಾರಿಯಲ್ಲಿ ಅಪಘಾತ ನಡೆಯುವುದನ್ನೂ ಅದು ತಪ್ಪಿಸುತ್ತದೆ. ಅವನು ಯಾರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದಾನೆ?’ ಅಂತ ಒಬ್ಬ ನೆಟ್ಟಿಗ ಕೇಳಿದ್ದಾರೆ.

ಇನ್ನೂ ಕೆಲ ನೆಟ್ಟಿಗರು, ಪ್ಲೇಟ್ ಗಳನ್ನು ಅವನು ಒಂದರ ಮೇಲೊಂದು ಇಡುವುದರಿಂದ ಪ್ಲೇಟಿನ ತಳಭಾಗ ಆಹಾರಕ್ಕೆ ತಾಕಿ ಅದರ ಶುಚಿತ್ವ ಹಾಳಾಗುತ್ತದೆ, ಎಂದು ತಕರಾರು ಎತ್ತಿದ್ದಾರೆ.