
Zomato Delivery Agent : ಮಹಿಳೆಯೊಬ್ಬಳು ಝೊಮ್ಯಾಟೋ ಡೆಲಿವರಿ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋಗೆ ಝೊಮ್ಯಾಟೋ, ‘ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಡೆಲಿವರಿ ಸಿಬ್ಬಂದಿಯನ್ನು ಸಂಪರ್ಕಿಸಲಾಗುವುದು’ ಎಂದು ಟ್ವಿಟರ್ನಲ್ಲಿ ತಿಳಿಸಿದೆ. ಆದದ್ದು ಇಷ್ಟೇ. ಝೊಮ್ಯಾಟೋ ಆರ್ಡರ್ ಮನೆಗೆ ತಲುಪಿಸಲು ಹೋದಾಗ ಡೆಲಿವರಿ ಏಜೆಂಟ್ನನ್ನು ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಚಪ್ಪಲಿಯೇಟಿನಿಂದ ಥಳಿಸಿದ್ದಾರೆ.
ಡಿಜೆ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಘಟನೆ ನಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಸಾರ್ವಜನಿಕರು ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಏಜೆಂಟ್ನಿಂದ ಆರ್ಡರ್ ಪಡೆದುಕೊಂಡು ನಂತರ ಅವನಿಗೆ ಚಪ್ಪಲಿಯಿಂದ ಹೀಗೆ ಒಂದೇ ಸಮ ಮಹಿಳೆ ಹೊಡೆಯಲು ಆರಂಭಿಸಿದಳು. ಗಾಬರಿ ಮತ್ತು ಅವಮಾನಕ್ಕೀಡಾದ ಏಜೆಂಟ್ ತನ್ನ ಕೆಲಸ ಕಳೆದುಕೊಳ್ಳುವ ಭಯಕ್ಕೆ ಬಿದ್ದಿದ್ಧಾನೆ.
ಆಗಸ್ಟ್ 16 ರಂದು ಈ ವಿಡಿಯೋ ಪೋಸ್ಟ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಉಲ್ಲೇಖವಿಲ್ಲ. ಇದು ನಿಮ್ಮ ಆರ್ಡರ್ ಅಲ್ಲ. ನಿಮ್ಮದೇ ಎಂದು ಖಚಿತಪಡಿಸಿಕೊಳ್ಳಲು ಪಾವತಿ ತೋರಿಸಿ ಎಂದು ಮಹಿಳೆಗೆ ಡೆಲಿವರಿ ಎಂಜೆಂಟ್ ಕೇಳಿದಾಗ ಆಕೆ ಹೊಡೆಯಲು ಪ್ರಾರಂಭಿಸಿದ್ದಾಳೆ.
ಈ ಮಧ್ಯೆ ಈ ವಿಡಿಯೋಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಬೇರೆಯವರ ಆರ್ಡರ್ ಅನ್ನು ನೀವು ಸ್ವೀಕರಿಸಿ ಮತ್ತೆ ಹೀಗೆ ಹಲ್ಲೆ ಮಾಡಿರುವ ನಡೆವಳಿಕೆ ಸೂಕ್ತವಲ್ಲ. ಅದೂ ಒಬ್ಬ ಮಹಿಳೆಯಾಗಿ ನಾಚಿಕೆಗೀಡು ಮಾಡುವ ಪ್ರಸಂಗ. ಈ ಮಹಿಳೆಯ ವಿರುದ್ಧ ದೂರ ದಾಖಲಿಸಬೇಕು. ಡೆಲಿವರಿ ಏಜೆಂಟ್ನನ್ನು ಬೆಂಬಲಿಸಬೇಕು’ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ.
ಮತ್ತೊಬ್ಬರು, ‘ಈ ಡೆಲಿವರಿ ಏಜೆಂಟ್ಗಳು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹೀಗೆ ಅವರನ್ನು ನಡೆಸಿಕೊಳ್ಳುವುದು ಸರಿಯಲ್ಲ. ಗ್ರಾಹಕಸೇವೆಯನ್ನು ಇವರು ಬಹಳ ಉತ್ತಮ ರೀತಿಯಲ್ಲಿ ಒದಗಿಸುತ್ತಾರೆ. ಹಿಂಸಾತ್ಮಕ ನಡೆವಳಿಕೆ ಸಲ್ಲದು. ಹೀಗೆ ಹಲ್ಲೆ ಮಾಡಿದ ಮಹಿಳೆಯನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಬೇಕು’ ಎಂದು ಸಲಹೆ ನೀಡಿದ್ಧಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:51 am, Wed, 24 August 22