ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲೇ ಅನ್ಯಗ್ರಹ ಜೀವಿಯ ವಾಕಿಂಗ್; ಜಾರ್ಖಂಡ್​ನಲ್ಲಿ ಸೆರೆಯಾದ ವಿಡಿಯೋ ಬಗ್ಗೆ ಭಾರೀ ಸಂಶಯ

|

Updated on: Jun 04, 2021 | 3:30 PM

ಒಂದೆರೆಡು ಬೈಕ್ ಸವರಾರು ತಮ್ಮ ಪಾಡಿಗೆ ತಾವು ಆಕೃತಿಯ ಬಳಿಯೇ ಸಾಗಿ ಹೋದರೂ ಬೆಚ್ಚಿಬೀಳದೇ ಯಾವುದೇ ಪ್ರತಿಕ್ರಿಯೆ ತೋರದ ಅದು, ಕೆಲ ಕ್ಷಣಗಳ ಬಳಿಕ ಕ್ಯಾಮೆರಾದತ್ತ ತಿರುಗಿ ನೋಡಿದೆ. ವಾಹನಗಳ ಬೆಳಕು ಬೀಳುತ್ತಿರುವಂತೆಯೇ ತಿರುಗಿ ನೋಡಿದ ಆಕೃತಿ ಕ್ಯಾಮೆರಾವನ್ನೇ ದಿಟ್ಟಿಸಿದೆ. ಆಗ ಕೆಲ ಸವಾರರು ಮುಂದೆ ಚಲಿಸಲು ಹಿಂದೇಟು ಹಾಕಿ ಗಲಿಬಿಗೊಂಡಿದ್ದಾರೆ.

ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲೇ ಅನ್ಯಗ್ರಹ ಜೀವಿಯ ವಾಕಿಂಗ್; ಜಾರ್ಖಂಡ್​ನಲ್ಲಿ ಸೆರೆಯಾದ ವಿಡಿಯೋ ಬಗ್ಗೆ ಭಾರೀ ಸಂಶಯ
ರಸ್ತೆ ಬದಿಯಲ್ಲಿ ಓಡಾಡಿದ ಮನುಷ್ಯಾಕೃತಿ
Follow us on

ಜಾರ್ಖಂಡ್: ಮನುಷ್ಯನ ಕುತೂಹಲಕ್ಕೆ ಹೇಗೆ ಪೂರ್ಣವಿರಾಮವಿಲ್ಲವೂ ಹಾಗೆಯೇ ಆತನ ಕುತೂಹಲ ಕೆರಳಿಸುವ ಸಂಗತಿಗಳಿಗೂ ಅಂತ್ಯವಿಲ್ಲ. ಇತ್ತೀಚೆಗೆ ವೈರಲ್​ ಆಗಿರುವ ವಿಡಿಯೋ ಒಂದು ನಮ್ಮೆಲ್ಲರನ್ನೂ ಅಚ್ಚರಿಗೆ ನೂಕುವಂತಿದೆ. ಇದು ಜಾರ್ಖಂಡ್​ನಲ್ಲಿ ಚಿತ್ರೀಕರಿಸಿದ ವಿಡಿಯೋ ತುಣುಕೆಂದು ಹೇಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜನರು ಇಸ್ರೋ, ನಾಸಾ ಸಂಸ್ಥೆಗಳನ್ನೂ ಟ್ಯಾಗ್ ಮಾಡಿ ಅದರತ್ತ ಗಮನ ಹರಿಸುವಂತೆ ಹೇಳಿದ್ದಾರೆ. ವಿಡಿಯೋದಲ್ಲಿ ಕಂಡಿರುವಂತೆ ರಸ್ತೆ ಬದಿಯಲ್ಲಿ ಮನುಷ್ಯಾಕೃತಿಯನ್ನೇ ಹೋಲುವ ಜೀವಿಯೊಂದು ಚಲಿಸುತ್ತಿದ್ದು, ನೋಡುವುದಕ್ಕೆ ಯಾವುದೋ ಅನ್ಯಗ್ರಹ ಜೀವಿ ಎಂಬಂತೆ ಭಾಸವಾಗುತ್ತದೆ.

ಈ ಘಟನೆಯು ಜಾರ್ಖಂಡ್​ನ ಹಜರಿಬಾಗ್ ಬಳಿ ನಡೆದಿದೆ ಎನ್ನಲಾಗಿದ್ದು, ಅನೇಕರು ಇದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗೋಚರಿಸುವಂತೆ ಅದಾಗಲೇ ಕತ್ತಲಾಗಿದ್ದು, ಕೆಲ ವಾಹನಗಳು ಸಂಚರಿಸುತ್ತಿರುವ ರಸ್ತೆಯಲ್ಲಿ ಮನುಷ್ಯಾಕೃತಿ ಚಲಿಸುತ್ತಿದೆ. ರಸ್ತೆಬದಿಯಲ್ಲಿ ಏಕಾಂಗಿಯಾಗಿ ಸಾಗುತ್ತಿರುವ ಆಕೃತಿಯ ಕೈ, ಕಾಲು, ದೇಹ ಸಂಪೂರ್ಣವಾಗಿ ಮನುಷ್ಯನಂತೆಯೇ ಕಂಡರೂ ವಾಹನದ ಬೆಳಕಲ್ಲಿ ಕಂಡ ಅದರ ಮುಖ ಮಾತ್ರ ಭಯ ಹುಟ್ಟಿಸುವಂತಿದೆ.

ಒಂದೆರೆಡು ಬೈಕ್ ಸವರಾರು ತಮ್ಮ ಪಾಡಿಗೆ ತಾವು ಆಕೃತಿಯ ಬಳಿಯೇ ಸಾಗಿ ಹೋದರೂ ಬೆಚ್ಚಿಬೀಳದೇ ಯಾವುದೇ ಪ್ರತಿಕ್ರಿಯೆ ತೋರದ ಅದು, ಕೆಲ ಕ್ಷಣಗಳ ಬಳಿಕ ಕ್ಯಾಮೆರಾದತ್ತ ತಿರುಗಿ ನೋಡಿದೆ. ವಾಹನಗಳ ಬೆಳಕು ಬೀಳುತ್ತಿರುವಂತೆಯೇ ತಿರುಗಿ ನೋಡಿದ ಆಕೃತಿ ಕ್ಯಾಮೆರಾವನ್ನೇ ದಿಟ್ಟಿಸಿದೆ. ಆಗ ಕೆಲ ಸವಾರರು ಮುಂದೆ ಚಲಿಸಲು ಹಿಂದೇಟು ಹಾಕಿ ಗಲಿಬಿಗೊಂಡಿದ್ದಾರೆ.

ಸದ್ಯ ಇದರ ಹಿಂದಿನ ಅಸಲಿಯತ್ತೇನು? ಜಾರ್ಖಮಡ್​ನಲ್ಲಿ ನಿಜವಾಗಿಯೂ ನಡೆದಿರುವ ಘಟನೆಯೇ ಇದು? ಅಥವಾ ಯಾರಾದರೂ ಬೇಕಂತಲೇ ಹೀಗೆ ಮಾಡಿದ್ದಾರಾ? ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಹೆಚ್ಚಿನವರು ಇದು ಏಲಿಯನ್​ ಎಂದೇ ಊಹಿಸಿ, ವಿಡಿಯೋ ಹಂಚಿಕೊಳ್ಳುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:
ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ 

ಭೂಮಿ ಸಮೀಪ ಹಾದು ಹೋಗಿತ್ತು ಅನ್ಯಜೀವಿ! ಖಗೋಳಶಾಸ್ತ್ರಜ್ಞನ ಪುಸ್ತಕದಲ್ಲಿ ಅಚ್ಚರಿಯ ವಿಚಾರ