Viral video: ಕುಡಿದ ಮಂಪರಿನಲ್ಲಿ ಅತ್ತೆ ಕೊರಳಿಗೆ ಹಾರ ಹಾಕಲು ಹೊರಟ ವರ! ವಿಡಿಯೋ ನೋಡಿದ್ರೆ ಬಿದ್ದು-ಬಿದ್ದು ನಗ್ತೀರಾ
ಮದ್ಯ ಸೇವಿಸಿ ವಾಲಾಡುವವರ ವಿಡಿಯೋ ನೋಡುತ್ತಾ ಅದೆಷ್ಟು ನಕ್ಕಿದ್ದೀರೋ ಏನೋ.. ವಿವಾಹದಲ್ಲಿ ಮದುಮಗನೇ ಕುಡಿದು ಬಂದರೆ ಏನೆಲ್ಲಾ ಅವಾಂತರಗಳಾಗಬಹುದು? ವಿಡಿಯೋ ನೋಡಿ..
ಮದ್ಯ ಸೇವಿಸಿ ರೋಡಿನಲ್ಲಿ ವಾಲಾಡುತ್ತಾ ಎದ್ದು-ಬಿದ್ದು ಒದ್ದಾಡುತ್ತಿರುವವರನ್ನು ನೋಡಿಯೇ ಇರುತ್ತೀರಿ. ಅದೆಷ್ಟು ನಕ್ಕಿದ್ದಿರೋ ಏನೋ.. ಕುಡಿದ ಅಮಲಿನಲ್ಲಿ ಏನೆಲ್ಲಾ ಅವಾಂತರಗಳಾಗಬಹುದು ಅಲ್ಲವೇ? ಅವರಲ್ಲಿಯೂ ವಿವಾಹದ ಸಮಯದಲ್ಲಿ ಮದುಮಗನೇ ಮದ್ಯ ಸೇವಿಸಿ ಬಿಟ್ಟಿದ್ದರೆ? ಆಗುವ ಅಂವಾಂತರಗಳನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫುಲ್ ಟೈಟ್ ಆಗಿ ಹಸೆಮಣೆ ಏರಿ ಅತ್ತೆ ಕೊರಳಿಗೆ ಹಾರ ಹಾಕಲು ಹೊರಟಿದ್ದಾನೆ ಈ ಮದುಮಗ. ಮುಂದೆನಾಗುತ್ತೆ ಎಂಬುದು ಕುತೂಹಲಕಾರಿಯಾಗಿದೆ ವಿಡಿಯೋ ನೋಡಿ.
ಡಿಜಿಟಲ್ ಯುಗದಲ್ಲಿ ರಾತ್ರಿ ಬೆಳಗಾಗುವುದರಲ್ಲಿ ವಿಡಿಯೋಗಳು ವೈರಲ್ ಆಗಿಬಿಡುತ್ತವೆ. ಸ್ಮಾರ್ಟ್ ಫೋನ್ಗಳು ಕೈಯ್ಯಲ್ಲಿದ್ದಾಗಲೆಂತೂ ಅದೆಷ್ಟೋ ತಮಾಷೆಯ ದೃಶ್ಯಗಳು ಸೆರೆಯಾಗ್ತವೆ. ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಮದ್ಯ ಸೇವಿಸಿ ವಾಲಾಡುವವರ ವಿಡಿಯೋ ನೋಡುತ್ತಾ ಅದೆಷ್ಟು ಸಲ ನಕ್ಕಿದ್ದೀರೋ ಏನೋ.. ಅಂಥಹದ್ದೇ ಒಂದು ವಿಡಿಯೋ ಇಲ್ಲಿದೆ.
ವಿಡಿಯೋದಲ್ಲಿ ನೀವು ಗಮನಿಸಬಹುದು, ಮದುಮಗ ವಿವಾಹದ ಮಂಟವೇರಿರುತ್ತಾನೆ. ಅದ್ದೂರಿಯಾದ ರಂಗುರಂಗಿನ ಬಟ್ಟೆ ಧರಿಸಿ ರೆಡಿಯಾಗಿದ್ದಾನೆ. ಎದುರಿಗೆ ಸಿಂಗಾರಗೊಂಡ ವಧು ಎದುರಿಗಿದ್ದಾಳೆ. ಅವಳ ಪಕ್ಕದಲ್ಲಿ ವಧುವಿನ ತಾಯಿ ಅಂದರೆ ವರನ ಅತ್ತೆ ನಿಂತಿರುತ್ತಾಳೆ. ಮಾಲೆ ಹಾಕುವ ಸಮಯದಲ್ಲಿ ಹುಡುಗಿ ನಾಚಿಕೆಯಿಂದ ತಲೆತಗ್ಗಿಸಿ ನಿಂತಿರುತ್ತಾಳೆ. ಮದ್ಯದ ಅಮಲಿನಲ್ಲಿದ್ದ ವರ ಪಕ್ಕದಲ್ಲಿದ್ದ ಅತ್ತೆಗೆ ಹಾರ ಹಾಕಲು ಹೊರಟುಬಿಡುತ್ತಾನೆ. ತಕ್ಷಣವೇ ಅತ್ತೆ, ಆತನನ್ನು ದೂರ ತಳ್ಳುತ್ತಾಳೆ. ಆ ಬಳಿಕ ವಧುವಿಗೆ ಹಾರ ಹಾಕಲು ಮತ್ತೆ ಪ್ರಯತ್ನಿಸುತ್ತಾನೆ. ಆದರೂ ಸಾಧ್ಯವಾಗದೇ ಬ್ಯಾಲೆಂನ್ಸ್ ತಪ್ಪಿ ಕೆಳಗೆ ಬಿದ್ದಿರುವ ದೃಶ್ಯ ಸೆರೆಯಾಗಿದೆ. ವಿಡಿಯೋವನ್ನು ಪಂಜಾಬಿ ಹಾಡಾದ ‘ಕ್ಷಮಿಸಿ ಡಾರ್ಲಿಂಗ್’ ಹಾಡನ್ನು ಹಿನ್ನೆಲೆಯಾಗಿ ಸೇರಿಸಲಾಗಿದೆ.
View this post on Instagram
ವಿಡಿಯೋ ನೋಡಿದ ನೆಟ್ಟಿಗರು ವರನನ್ನು ನೋಡಿ.. ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು, ಮದುಮಗ ಕುಡಿದು ಹಸೆ ಮಣೆ ಏರಿದರೆ ಹೀಗೇ ಆಗುತ್ತದೆ ಎಂದು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: