Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​’ ಇದೀಗ ಲಂಡನ್​ನಲ್ಲಿ

|

Updated on: Jul 19, 2023 | 5:30 PM

London : ಪಾಕಿಸ್ತಾನದ ಬೀದಿಗಳಲ್ಲಿ ಚಹಾ ಮಾರುತ್ತಿದ್ದ ಈ ಯುವಕ 2016ರಲ್ಲಿ ರಾತ್ರೋರಾತ್ರಿ ಸುದ್ದಿಯಾಗಿದ್ದ. ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಮೂಲಕ ಇತರೇ ದೇಶಗಳಲ್ಲಿಯೂ ಕೆಫೆಗಳನ್ನು ತೆರೆಯಲು ತಯಾರಿ ನಡೆಸಿದ್ಧಾನೆ.

Viral: ನೀಲಿಕಂಗಳ ಹುಡುಗನ ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​ ಇದೀಗ ಲಂಡನ್​ನಲ್ಲಿ
ಚಾಯ್​ವಾಲಾ ಅರ್ಷದ್​ ಖಾನ್​
Follow us on

Pakistan : 2016 ರಲ್ಲಿ ಈ ನೀಲಿಕಂಗಳ ಚೆಲುವ, ಪಾಕಿಸ್ತಾನದ ಚಾಯ್‌ವಾಲಾ ಅರ್ಷದ್ ಖಾನ್​ ರಾತ್ರೋರಾತ್ರಿ ಸುದ್ದಿಯಾಗಿದ್ದರು. ಇದೀಗ ಲಂಡನ್​ನಲ್ಲಿ ಕೆಫೆ ಶುರುಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತೀಯರು, ಪಾಕಿಸ್ತಾನಿಗಳು, ಬಾಂಗ್ಲಾದೇಶಿಗರು ವಾಸವಾಗಿರುವ ಲಂಡನ್​ನ ಇಲ್ಫೋರ್ಡ್​ ಲೇನ್​ನಲ್ಲಿ ಕೆಫೆ ಚಾಯ್​ವಾಲಾ ಅರ್ಷದ್​ ಖಾನ್ (Cafe Chaiwala Arshad Khan)​ ಎಂಬ ಹೆಸರಿನಲ್ಲಿ ಈ ಕೆಫೆ ಈಗಾಗಲೇ ಘಮ ಹರಡುತ್ತಿದೆ. ಬಹದರ್ ದುರಾನಿ, ನಾದಿರ್ ದುರಾನಿ ಮತ್ತು ಅಕ್ಬರ್ ದುರಾನಿ ಎಂಬ ಸಹೋದರರು ಪಾಕಿಸ್ತಾನದ ಈ ಚಾಯ್​ವಾಲಾನನ್ನು ಲಂಡನ್​ಗೆ ಸ್ಥಳಾಂತರಿಸಿ ಬ್ರ್ಯಾಂಡ್​ ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಟ್ರಕ್ ಆರ್ಟ್‌ ಶೈಲಿಯಲ್ಲಿ ವೆಸ್ಪಾ ವಾಹನವನ್ನು ಮತ್ತು ಕೆಫೆಯ ಒಳಾಂಗಣವನ್ನು ವಿನ್ಯಾಸ ಮಾಡಿ ಸ್ಥಳೀಯರ ಕಣ್ಮನ ಸೆಳೆದಿದ್ದಾರೆ.

ಅರ್ಷದ್​ರ ಈ ಪ್ರಯಾಣದ ಹಿಂದೆ ಏಳು ವರ್ಷಗಳ ಬೀದಿಬದುಕು ಮತ್ತು ಶ್ರಮವಿದೆ. ತನ್ನ ಕುಟುಂಬವನ್ನು ನಿರ್ವಹಿಸುವುದಕ್ಕೋಸ್ಕರ ಅವರು ಇಸ್ಲಾಮಾಬಾದ್‌ನ ಬೀದಿಗಳಲ್ಲಿ ಚಹಾ ಮರುತ್ತಿದ್ದರು. ಒಂದೊಮ್ಮೆ ಛಾಯಾಗ್ರಾಹಕ ಜವೇರಿಯಾ ಅಲಿಯವರ ಕ್ಯಾಮೆರಾ ಕಣ್ಣಿಗೆ ಇವರು ಬಿದ್ದರು. ಚಹಾವನ್ನು ಫ್ಲಾಸ್ಕಿಗೆ ಸುರಿಯುತ್ತಿರುವ ಅವರ ಫೋಟೋ ಇದ್ದಕ್ಕಿದ್ದಂತೆ ಭಾರತೀಯರ ಮತ್ತು ಪಾಕಿಸ್ತಾನಿಗರ ಗಮನ ಸೆಳೆಯಿತು. ರಾತ್ರೋರಾತ್ರಿ ಹೀರೋ ಎನ್ನಿಸಿಕೊಂಡುಬಿಟ್ಟರು.

ಮುಂಬರುವ ದಿನಗಳಲ್ಲಿ ಲಂಡನ್​, ಯುರೋಪ್​, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ ಮುಂತಾದ ಕಡೆ ಫ್ರಾಂಚೈಸಿ ಮೂಲಕ ಈ ವ್ಯವಹಾರವನ್ನು ವಿಸ್ತರಿಸುವ ಇರಾದೆ ಅರ್ಷದ್​ ಅವರಿಗಿದೆ. ‘ಲಂಡನ್​ನಲ್ಲಿರುವ ಸಾವಿರಾರು ಜನರ ವಿನಂತಿಯ ಮೇರೆಗೆ ಸದ್ಯದಲ್ಲಿಯೇ ಲಂಡನ್​ಗೆ ಪ್ರಯಾಣಸಲಿದ್ದೇನೆ. ಪಾಕಿಸ್ತಾನದ ಕರಕ್​ ಚಾಯ್​ನ ಸವಿಯನ್ನು ಅವರಿಗೆ ಉಣಬಡಿಸಲಿದ್ದೇನೆ’ ಎಂದಿದ್ದಾರೆ ಅರ್ಷದ್​.

ಇದನ್ನೂ ಓದಿ : Viral Video: ಟೊಮ್ಯಾಟೋ ಬೆಲೆ ದುಬಾರಿಯಾಗಲು ಕಾರಣರಾದವರ ವಿಡಿಯೋ ವೈರಲ್​ 

ದುರಾನಿ ಸಹೋದರರೊಂದಿಗೆ ಲಂಡನ್​ನ 50 ಸ್ಥಳಗಳಲ್ಲಿ ಕೆಫೆ ಶುರು ಮಾಡಲು ಅರ್ಷದ್​ ಯೋಜಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ತಯಾರಿಗಳು ಈಗಾಗಲೇ ಶುರುವಾಗಿವೆ. ವ್ಯಾಪಾರವನ್ನು ವಿಸ್ತರಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್​ ಸೃಷ್ಟಿಸಲು ಬೇಕಾಗಿರುವ ಸಂಶೋಧನೆ, ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಅಕ್ಬರ್​ ದುರಾನಿ ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:30 pm, Wed, 19 July 23