Math Fun: ವಾರಾಂತ್ಯ ಅತ್ಯಂತ ನಿಧಾನವಾಗಿ ಆರಂಭವಾಗಿರಬೇಕು. ಈಗಷ್ಟೇ ನಿದ್ರೆಯಿಂದೆದ್ದು ಕಾಫೀ, ಚಹಾ ಹೀರುತ್ತಿರಬಹುದು. ಹಾಗಿದ್ದರೆ ಇದೊಂದು ಬ್ರೇನ್ ಟೀಸರ್ ನೋಡಬಹುದಾ? ನಿನ್ನೆಯಷ್ಟೇ ಭ್ರಮಾತ್ಮಕ ಚಿತ್ರವನ್ನು ನೋಡಿದಿರಿ. ಈವತ್ತು ನಿಮ್ಮ ಮೆದುಳಿಗೆ ಗುದ್ದು ಕೊಡುವ ಸವಾಲನ್ನು ತರಲಾಗಿದೆ. ನೆಟ್ಟಿಗರನೇಕರನ್ನು ಈ ಬ್ರೇನ್ ಟೀಸರ್ ಗೊಂದಲಕ್ಕೆ ಕೆಡವಿದೆ. @mathequiz ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಮೋಜಿನ ಗಣಿತವನ್ನು ಹಂಚಿಕೊಳ್ಳಲಾಗಿದೆ. ಬಹುಶಃ ನೀವು ಇದನ್ನು ಪರಿಹರಿಸುತ್ತೀರಿ. 2 + 3 = 13, 3 + 4 = 25, 4 + 5 = 41 ಆಗಿದ್ದರೆ, 5 + 6 = ಇದರ ಮೌಲ್ಯ ಎಷ್ಟು? ಇಲ್ಲಿ ನಾಲ್ಕು ಆಯ್ಕೆಗಳಿವೆ, ಅವುಗಳಲ್ಲಿ ಒಂದು ಸರಿಯಾದ ಉತ್ತರ ಕಂಡುಹಿಡಿಯಿರಿ. ಆಯ್ಕೆಗಳು- 60, 56, 61 ಮತ್ತು 65.
ಇದನ್ನೂ ಓದಿ: Viral Video: ವೆಡ್ಡಿಂಗ್ ಕೇಕ್ನಲ್ಲಿ ಪುಟ್ಟನಾಯಿ; ವರನನ್ನು ಅಚ್ಚರಿಗೊಳಿಸಿದ ವಧು
ಈ ಪೋಸ್ಟ್ ಅನ್ನು ಸೆ. 21 ರಂದು ಹಂಚಿಕೊಳ್ಳಲಾಗಿದೆ. ಅನೇಕರು ಈ ಗಣಿತದ ಒಗಟಿನೆಡೆ ಆಸಕ್ತರಾಗಿದ್ದಾರೆ. 61 ಎಂದು ಸರಿಯಾದ ಉತ್ತರ ನೀಡಿದ್ದಾರೆ ಕೆಲವರು. ನೀವೂ ಪ್ರಯತ್ನಿಸಿ, ಸರಿಯಾದ ಉತ್ತರ ನಿಮಗೆ ಸಿಗಬಹುದೇ ಪ್ರಯತ್ನಿಸಿ. ನಿಮಗೆ ಕೊಟ್ಟಿರುವ ಸಮಯ ಒಂದು ನಿಮಿಷ.
ಭ್ರಮಾತ್ಮಕ ಚಿತ್ರಗಳು, ಮೋಜಿನ ಗಣಿತ, ಬ್ರೇನ್ ಟೀಸರ್ ಇಂಥವು ಮೆದುಳನ್ನು ಚುರುಕುಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಸ್ವಲ್ಪ ಹೊತ್ತಾದರೂ ನಿತ್ಯದ ಜಂಜಡದಿಂದ ಹೊರತಂದು ನಿಮ್ಮಷ್ಟಕ್ಕೆ ನೀವು ತೊಡಗಿಕೊಳ್ಳಲು ಪ್ರೇರೇಪಿಸುತ್ತವೆ.
ಇದನ್ನೂ ಓದಿ : Viral: ‘ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್ 15’; ಹೆಮ್ಮೆಪಟ್ಟ ನಟ ಮಾಧವನ್
ಎಳೆವೆಯಲ್ಲಿಯೇ ಮಕ್ಕಳಿಗೆ ಇಂಥ ಸಂಗತಿಗಳ ಕಡೆಗೆ ಆಸಕ್ತಿ ಬೆಳೆಸುವುದು ತುಂಬಾ ಮುಖ್ಯ. ಯಾವುದಕ್ಕೋ ಹಠ ಮಾಡುತ್ತಿರುವಾಗ ಭ್ರಮಾತ್ಮಕ ಚಿತ್ರ, ಬ್ರೇನ್ ಟೀಸರ್ ತೋರಿಸಿ ಅವರ ಗಮನವನ್ನು ಸೆಳೆಯಬಹುದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:08 am, Sat, 23 September 23