Viral Optical Illusion: ಇವುಗಳಲ್ಲಿ ಯಾವ ಕಪ್ ಮೊದಲು ತುಂಬುತ್ತದೆ ಎಂದು ಹೇಳಬಲ್ಲಿರಾ?

Brain Teaser : ನಿಮ್ಮ ದೇಹಕ್ಕೆ ಹೇಗೆ ಆಹಾರ ಬೇಕೋ ಹಾಗೆಯೇ ಮೆದುಳಿಗೂ ಬೇಕು. ಒಂದೇ ಸಮನೇ ಕೆಲಸ ಮಾಡಿದ ಅದು ಹಠಕ್ಕೆ ಬೀಳುತ್ತದೆ. ಅದನ್ನು ಚುರುಕುಗೊಳಿಸಿಕೊಳ್ಳಲು ಅದಕ್ಕೂ ಚೂರು ಆಹಾರ ಬೇಕು. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ಗಮನಿಸಿ. ಇಲ್ಲಿರುವ ನಾಲ್ಕು ಕಪ್​​ಗಳಲ್ಲಿ ಮೊದಲು ಯಾವುದು ತುಂಬುತ್ತದೆ ಎನ್ನುವುದನ್ನು ನೀವು ಪತ್ತೆ ಹಚ್ಚಬೇಕಿದೆ.

Viral Optical Illusion: ಇವುಗಳಲ್ಲಿ ಯಾವ ಕಪ್ ಮೊದಲು ತುಂಬುತ್ತದೆ ಎಂದು ಹೇಳಬಲ್ಲಿರಾ?
ಯಾವ ಕಪ್​ ಮೊದಲು ತುಂಬುತ್ತದೆ ಇದರಲ್ಲಿ

Updated on: Sep 12, 2023 | 12:07 PM

Brain Teaser: ಮತ್ತೊಂದು ಹೊಸ ಬ್ರೇನ್​ ಟೀಸರ್​ ಇದೀಗ ನಿಮ್ಮ ಮುಂದಿದೆ. ಇಲ್ಲಿ ಒಟ್ಟು ನಾಲ್ಕು ಕಪ್ಪುಗಳು ಇವೆ. ಕೆಟಲ್​ನಿಂದ ಅವುಗಳಿಗೆ ಚಹಾ (Tea) ಸುರಿಯಲಾಗುತ್ತಿದೆ. ಯಾವ ಕಪ್ಪು ಮೊದಲು ತುಂಬಬಲ್ಲುದು ಎನ್ನುವುದನ್ನು ನೀವು ಯೋಚಿಸಿ ಹೇಳಬೇಕಿದೆ. ಇನ್​ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದೇ ತಡ, ಇದರಡಿ ನೂರಾರು ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. ಮತ್ತೆ ಇದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗುವುದು ಮೇಧಾವಿಗಳಿಗೆ ಮಾತ್ರ ಸಾಧ್ಯ ಎಂಬ ಶೀರ್ಷಿಕೆ ಇದಕ್ಕಿದೆ. ಹೀಗಿರುವಾಗ ಇದರೊಳಗೆ ಹೊಕ್ಕು ಯೋಚಿಸಲು ಉತ್ಸಾಹ ಬಾರದೇ ಇರುತ್ತದೆಯೇ?

ಇದನ್ನೂ ಓದಿ : Viral Video: ಉಸಿರುಗಟ್ಟುವಿಕೆಯಿಂದ ಬಾಲಕನನ್ನು ರಕ್ಷಿಸಿದ ಮಹಿಳೆ; ಆಕೆಯನ್ನು ‘ಹೀರೋ’ ಎಂದ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 11ರಂದು ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ ಸುಮಾರು 500 ಜನರು ಲೈಕ್ ಮಾಡಿದ್ದಾರೆ. ಉಳಿದಂತೆ ಅನೇಕರು ಉತ್ತರಿಸಲು ಪ್ರಯತ್ನಿಸಿದ್ದಾರೆ. 1, 3, 4, 2, ಹೀಗೆ ಒಬ್ಬೊಬ್ಬರು ತಮ್ಮ ತಮ್ಮ ಊಹೆಯನ್ನು ತಿಳಿಸಿದ್ದಾರೆ. ಆದರೂ ಸರಿಯಾದ ಉತ್ತರ ಯಾವುದು ಎಂದು ಯಾರಿಗೂ ತಿಳಿದಂತಿಲ್ಲ. ನೀವು ಪ್ರಯತ್ನಿಸಿ.

ಯಾವ ಕಪ್ ಮೊದಲು ತುಂಬುವುದು?

2,3,4 ಸರಿಯಾದ ಉತ್ತರ ಎಂದು ಅನೇಕರು ಹೇಳಿದ್ದಾರೆ. ಏಕೆಂದರೆ 1ನೇ ಪೈಪ್​ನಲ್ಲಿ ಬ್ಲಾಕ್​ ಎಂದಿದ್ದಾರೆ. ಈಗ ನಿಮಗೆ ಒಂದು ಅಂದಾಜು ಬಂದಿತೆ? ಯಾವ ಕಪ್ ಮೊದಲು ತುಂಬಬಹುದು ಎಂದು? ಇದು ನೋಡಲು ತುಂಬಾ ಸರಳ ಮತ್ತು ಉತ್ತರ ಸಿಕ್ಕೇಬಿಟ್ಟಿತು ಎನ್ನುವಂತಿದೆ. ಆದರೂ ಕೆಲವರು ಇದು ತುಂಬಾ ಗೊಂದಲವೆನ್ನಿಸುತ್ತಿದೆ. ನನಗೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಒಂದೊಂದು ಪೈಪಿನಗುಂಟ ಕಣ್ಣು ಹೊರಳಿಸಿ ನೋಡಿದರೆ ಸರಿಯಾದ ಉತ್ತರ ದೊರಕುತ್ತದೆ.

ನಿಮಗೆ ಉತ್ತರ ದೊರಕಿತೆ? ಇಲ್ಲವಾದರೆ ಇನ್ನಷ್ಟು ಪ್ರಯತ್ನಿಸಿ.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ