Viral Video: ಎರಡು ತಟ್ಟೆ ಅವಲಕ್ಕಿ; ಒಂದು ನಿಮ್ಮ ಕೋಣೆಯ ಗೋಡೆಗೆ ಇನ್ನೊಂದು ನಿಮ್ಮ ಹೊಟ್ಟೆಗೆ!

|

Updated on: Aug 10, 2023 | 6:28 PM

Art : ಆಹಾ ನೋಡಿಯೇ ಹೊಟ್ಟೆ ತುಂಬಿತು ಎನ್ನುತ್ತಾರಲ್ಲ ಅದು ಇಲ್ಲಿ ವರ್ಣಶಃ ಸಾಬೀತಾಗಿದೆ. ಚೈತನ್ಯ ಲಿಮಯೆ ಅಡುಗೆಮನೆಯಲ್ಲಿ ಅವಲಕ್ಕಿ ತಯಾರಿಸಿದರೆ ರುಚಾ ಲಿಮಯೆ ಕ್ಯಾನ್ವಾಸಿನಲ್ಲಿ ಯಥಾವತ್​ ಅದನ್ನು ಅರಳಿಸಿದ್ದಾರೆ. ಇಷ್ಟೇ ಅಲ್ಲ ಇವರು ಮಾಡಿದ ಇನ್ನೂ ಸಾಕಷ್ಟು ಖಾದ್ಯಗಳ ಪೇಂಟಿಂಗ್​ ನಿಮಗಾಗಿ ಇಲ್ಲಿ ಕಾಯುತ್ತಿವೆ.

Viral Video: ಎರಡು ತಟ್ಟೆ ಅವಲಕ್ಕಿ; ಒಂದು ನಿಮ್ಮ ಕೋಣೆಯ ಗೋಡೆಗೆ ಇನ್ನೊಂದು ನಿಮ್ಮ ಹೊಟ್ಟೆಗೆ!
ಮಹಾರಾಷ್ಟ್ರದ ಕಲಾಜೋಡಿ ಚೈತನ್ಯ ಲಿಮಯೆ ಅವಲಕ್ಕಿ ತಯಾರಿಸುತ್ತಿದ್ದಾರೆ. ರುಚಾ ಲಿಮಯೆ ಅವಲಕ್ಕಿ ತಟ್ಟೆಯನ್ನು ಪೇಂಟಿಂಗ್​ನಲ್ಲಿ ಅರಳಿಸಿದ್ದಾರೆ.
Follow us on

Painting : ಮಹಾರಾಷ್ಟ್ರದ ಚೈತನ್ಯ ಲಿಮಯೆ, ರುಚಾ ಲಿಮಯೆ (Chaitanya Limaye, Rucha Limaye) ಎಂಬ ಈ ಕಲಾಜೋಡಿ ನಿಮಗಾಗಿ ಬಿಸಿಬಿಸಿಯಾದ ಅವಲಕ್ಕಿಯನ್ನು (Poha) ತಯಾರಿಸಿದೆ. ರುಚಿಯಾದ ಅವಲಕ್ಕಿಯಿಂದ ಹಸಿವನ್ನು ತಣಿಸಿಕೊಳ್ಳಬೇಕು ಎಂದವರು ಚೈತನ್ಯರ ಅವಲಕ್ಕಿ ತಟ್ಟೆಗೆ ಕೈಹಾಕಬಹುರು. ಬಣ್ಣಗಳಿಂದ ಸೃಜನಶೀಲತೆಯೊಳಗೆ ಮೀಯಬೇಕೆಂದುಕೊಳ್ಳುವವರ ರುಚಾ ಅವರ ತಟ್ಟೆಗೆ ಕೈ ಹಾಕಬಹುದು. ಎರಡೂ ಆಯ್ಕೆಗಳನ್ನು ಇಲ್ಲಿವೆ.  ಯೋಚಿಸಿ ಮತ್ತು ನಿರ್ಧರಿಸಿ!

‘ಅಮೆರಿಕದ ಗ್ರಾಹಕರೊಬ್ಬರು ಅವಲಕ್ಕಿ ತಟ್ಟೆಯನ್ನು ಬಣ್ಣಗಳಲ್ಲಿ ಅರಳಿಸಿ ಕೊಡಲು ಕೇಳಿಕೊಂಡಿದ್ದಾರೆ. ಹಾಗಾಗಿ ನಾವಿಬ್ಬರೂ ಜಂಟಿಯಾಗಿ ಇದನ್ನು ಪೂರೈಸಿದ್ದೇವೆ. ನಿಮಗೆ ನಮ್ಮ ಪೋಹಾ ವರ್ಷನ್​ ಇಷ್ಟವಾಯಿತಾ?’ ಎಂದು ಕೇಳಿದ್ದಾರೆ ರುಚಾ ಮತ್ತು ಚೈತನ್ಯ. ಅನೇಕರು ಇವರ ಈ ಸೃಜನಶೀಲತೆಯನ್ನು ಬಹುವಾಗಿ ಮೆಚ್ಚಿದ್ದಾರೆ. ಒಂದು ಗಂಟೆಯ ಹಿಂದಷ್ಟೇ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 6,000 ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಎಮಿಲಿಯಾನಾ ಹಾಡಿಗೆ ಸುನಿಧಿ ಚೌಹಾನ್​ ಡ್ಯಾನ್ಸ್​; ಕ್ಯಾ ಬಾತ್ ಹೈ ಎಂದ ನೆಟ್ಟಿಗರು

ನಿಜವಾದ ಅವಲಕ್ಕಿಗಿಂತ ಪೇಂಟಿಂಗ್​ನಲ್ಲಿ ಹೊಮ್ಮಿದ ಅವಲಕ್ಕಿ ನೋಡಿ ಆಸೆಯಾಗುತ್ತಿದೆ ಎಂದಿದ್ದಾರೆ ಅನೇಕರು. ಅಂದಹಾಗೆ ಆ.2ರಂದು ರುಚಾ ರೆಸ್ಟೋರೆಂಟ್​ನ ಒಂದು ಆರ್ಡರ್​​ ಅನ್ನು ಪೂರ್ಣಗೊಳಿಸಿದ್ದರು. ಆ ರೆಸ್ಟೋರೆಂಟ್​ನಲ್ಲಿ ಸಿಗುವ ತಿಂಡಿಗಳನ್ನು ಅಲ್ಲಿಯೇ ಹೋಗಿ ಸವಿಯುವ ಮೊದಲು ರುಚಾ ಅವರ ‘ಕೈರುಚಿ’ಯಲ್ಲಿ ಸವಿಯಬಹುದು. ಬನ್ನಿ ಹಾಗಿದ್ದರೆ, ಈ ಕೆಳಗಿನ ವಿಡಿಯೋ ನೋಡಿ.

ರುಚಿರುಚಿಯಾದ ಖಾದ್ಯಗಳನ್ನು ಅತ್ಯಂತ ನೈಜತೆಯಿಂದ ಚಿತ್ರಿಸುವ ಪ್ರಾವೀಣ್ಯ ಹೊಂದಿರುವ ರುಚಾ  ಅನೇಕ ರೆಸ್ಟೋರೆಂಟ್​ ಮತ್ತು ಹಲ್ದೀರಾಮ್​ನಂಥ ಬೇರೆಬೇರೆ ಆಹಾರ ಕಂಪೆನಿಯೊಂದಿಗೂ ಕೆಲಸ ಮಾಡಿದ್ದಾರೆ. ಇವರು ಚಿತ್ರಿಸಿರುವ ಢೋಕ್ಲಾ, ವಡಾ ಪಾವ್, ಚಹಾ ಬಿಸ್ಕೆಟ್​, ಪಾನೀಪುರಿ, ಢೋಕ್ಲಾ, ಬೆಂಗಾಲಿ ಥಾಲಿ, ಗುಲಾಬ್ ಜಾಮೂನ್​, ಮಸಾಲೆ ದೋಸೆ, ಇಡ್ಲಿ ವಡಾ, ರಾಜ್​ಕಚೋರಿ ಮುಂತಾದವು ಯಾರ ಬಾಯಲ್ಲಿಯೂ ನೀರೂರುವಂತೆ ಮಾಡುತ್ತವೆ.

ನಿಜವಾದ ಖಾದ್ಯ ಮತ್ತು ಪೇಂಟಿಂಗ್​ ಎರಡನ್ನೂ ಅಕ್ಕಪಕ್ಕ ಇಟ್ಟಾಗ ಯಾವುದನ್ನು ತಿನ್ನಬೇಕು ಎಂಬ ಗೊಂದಲ ಉಂಟಾಗುತ್ತದೆ, ಅಷ್ಟು ಉತ್ಕೃಷ್ಟವಾಗಿವೆ ನಿಮ್ಮ ಕಲಾಕೃತಿಗಳು ಎಂದು ನೆಟ್ಟಿಗರನೇಕರು ಬೆನ್ನು ತಟ್ಟಿದ್ದಾರೆ. ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:21 pm, Thu, 10 August 23