Viral: ಯುವರಾಜ್​ ಸಿಂಗ್​ ಪತ್ನಿ ಹೆಝೆಲ್ ಕೀಚ್​ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ

|

Updated on: Oct 16, 2023 | 4:08 PM

Cancer Patients : 'ಕತ್ತರಿಸಿದ ಕೂದಲು ವ್ಯರ್ಥವಾಗದೇ ಕ್ಯಾನ್ಸರ್ ರೋಗಿಗಳಿಗೆ ವಿಗ್​ ತಯಾರಿಸಲು ಸಹಾಯವಾಗಲಿ ಎಂದು ದಾನ ಮಾಡಿದೆ. ಇದು ಪೇಡ್​ ಪ್ರೊಮೋಷನ್​ ಅಲ್ಲ, ಈ ಚಾರಿಟಿಗೂ ನನಗೂ ಸಂಬಂಧವಿಲ್ಲ. ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಬೇಕೆಂದು ಗೂಗಲ್​ ಸರ್ಚ್​ಗೆ ಕೇಳಿದೆ. ಅದು ತೋರಿದ ಹಾದಿಯಲ್ಲಿ ನಡೆದೆ' ಎಂದಿದ್ದಾರೆ ಯುವರಾಜ್​ ಸಿಂಗ್​ ಪತ್ನಿ ಹೆಝೆಲ್​ ಕೀಚ್​.

Viral: ಯುವರಾಜ್​ ಸಿಂಗ್​ ಪತ್ನಿ ಹೆಝೆಲ್ ಕೀಚ್​ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ
1. ಎರಡನೇ ಮಗಳು ಔರಾಳೊಂದಿಗೆ ಯುವರಾಜ್​ ಸಿಂಗ್. 2. ಹೆಝೆಲ್​ ಕೀಚ್​ ಸಿಂಗ್​ ಕ್ಯಾನ್ಸರ್​ ರೋಗಿಗಳಿಗಾಗಿ ಕೂದಲು ದಾನ ಮಾಡಿರುವುದು.
Follow us on

Donate Hair: ಕ್ರಿಕೆಟಿಗ ಯುವರಾಜ್​ ಸಿಂಗ್​ ಪತ್ನಿ (Yuvraj Singh) ಹೆಝೆಲ್​ ಕೀಚ್​ ಸಿಂಗ್ (Hazel Keech) ಎರಡನೇ​ ಪ್ರಸವಾನಂತರ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗುವಾಗ ರೋಗಿಗಳು ಕೂದಲು ಕಳೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ವಿಗ್​ ಧರಿಸುವುದು ಅನಿವಾರ್ಯವಾಗುತ್ತದೆ. ಈ ವಿಗ್​ ತಯಾರಿಸಲು ಸಹಾಯವಾಗಲೆಂದು ಹೆಝೆಲ್​ ಈ ನಿರ್ಧಾರ ತೆಗೆದುಕೊಂಡರು. 2022ರಲ್ಲಿ ಯುವರಾಜ್​ ಮತ್ತು ಹೆಝೆಲ್​ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಈ ಆಗಸ್ಟ್​ನಲ್ಲಿ ಎರಡನೇ ಮಗು ಔರಾ ಅವರ ಮಡಿಲನ್ನು ತುಂಬಿದ್ದಾಳೆ.

ಇದನ್ನೂ ಓದಿ : Viral​; ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್​ ನೋಡಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರಸವಾನಂತರ ಕೂದಲು ಉದುರುವಿಕೆ ಅತ್ಯಂತ ಸಹಜ. ಅದನ್ನು ಚಿಕಿತ್ಸೆಯ ಮೂಲಕ ನಿಭಾಯಿಸುವುದರ ಬದಲಾಗಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಲು ಹೆಝೆಲ್​ ನಿರ್ಧರಿಸಿದರು. ತಮ್ಮ ಈ ನಿರ್ಧಾರವು ಒಳ್ಳೆಯ ಕಾರ್ಯಕ್ಕೆ ಸದುಪಯೋಗವಾಗಲಿ ಎಂದು ಕ್ಯಾನ್ಸರ್​ ರೋಗಿಗಳ ವಿಗ್​ ತಯಾರಿಕೆಗೆ ಕೂದಲನ್ನು ದಾನ ಮಾಡಿದರು.

ಕ್ಯಾನ್ಸರ್​ ರೋಗಿಗಳಿಗೆ ಕೂದಲು ದಾನ ಮಾಡಿದ ಹೆಝೆಲ್​

‘ಮಗು ಹುಟ್ಟಿದ ಮೇಲೆ ಅನೇಕ ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಾರೆ ಎನ್ನುವುದು ಈ ಮೊದಲು ನನಗೆ ಅರ್ಥವಾಗಿರಲಿಲ್ಲ. ಪ್ರಸವಾನಂತರ ನನಗಿದು ಅರ್ಥವಾಯಿತು. ಬಾತ್ರೂಮಿಗೆ ಹೋಗಲು ಬಿಡದೆ ಸತತ ಅಳುತ್ತಲೇ ಇರುವ ಮುದ್ದು ಕೂಸನ್ನು ಸಂಭಾಳಿಸುವಾಗ ಉದುರುವ ಕೂದಲಿನ ಕಡೆ ಗಮನ ಕೊಡಲು ಸಾಧ್ಯವಾಗುವುದೆ? ಹಾಗಾಗಿ ಮತ್ತೊಮ್ಮೆ ಕೂದಲನ್ನು ಕತ್ತರಿಸಿಕೊಳ್ಳಬೇಕೆಂದು ನಿರ್ಧರಿಸಿದೆ ಮತ್ತು ಕ್ಯಾನ್ಸರ್​ ರೋಗಿಗಳಿಗೆ ದಾನವನ್ನೂ ಮಾಡಿದೆ’ ಎಂದಿದ್ದಾರೆ ಹೆಝೆಲ್​.

ಟಿವಿ9 ಕನ್ನಡ ಡಿಜಿಟಲ್​ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಲು ಕ್ಲಿಕ್ ಮಾಡಿ

ಲಂಡನ್​ನಲ್ಲಿ ವಾಸವಾಗಿರುವ ಹೆಝೆಲ್​, ‘ನನ್ನ ಕೂದಲನ್ನು ಸ್ವೀಕರಿಸಿದ್ದಕ್ಕೆ @officiallittleprincesstrust ಗೆ ಧನ್ಯವಾದ. ದಯವಿಟ್ಟು ಗಮನಿಸಿ, ಇದು ಯಾವುದೇ ರೀತಿಯ ಪೇಡ್​ ಪ್ರೊಮೋಷನ್​ ಅಲ್ಲ. ನನಗೂ ಈ ಚಾರಿಟಿಗೂ ಸಂಬಂಧವಿಲ್ಲ, ಪರಿಚಯವೂ ಇಲ್ಲ. ನಾನು ಕೂದಲನ್ನು ದಾನ ಮಾಡಲು hair donation for wig ಎಂದು ಗೂಗಲ್​ನಲ್ಲಿ ಸರ್ಚ್​ ಕೊಟ್ಟಾಗ ಈ ಚಾರಿಟಿ ಸಿಕ್ಕಿತು’ ಎಂದಿದ್ದಾರೆ

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 4:04 pm, Mon, 16 October 23