Optical Illusion: ಉಕ್ರೇನಿಯನ್ ಕಲಾವಿದರೊಬ್ಬರು ರಚಿಸಿದ ಈ ಭ್ರಮಾತ್ಮಕ ಚಿತ್ರದೊಳಗೆ ಅಡಗಿರುವುದನ್ನು ಕೇವಲ ಶೇ. 2 ಜನರಷ್ಟೇ ಕಂಡುಹಿಡಿದಿದ್ದಾರೆ. ಉಳಿದವರು ಸೋತಿದ್ದಾರೆ. ನೀವು ಈ ಸವಾಲನ್ನು ಗೆಲ್ಲುತ್ತೀರಿ ಎಂಬ ಆಶಾಭಾವನೆ ನಮ್ಮದು. ಕಲಾವಿದ ಓಲೆಗ್ ಶುಪ್ಲಿಯಾಕ್ (Oleg Shupliak) ರಚಿಸಿದ ಈ ಕಲಾಕೃತಿಯಲ್ಲಿ ಒಂದಿಷ್ಟು ಮಹಿಳೆಯರನ್ನು ಅಡಗಿಸಿಟ್ಟಿದ್ದಾರೆ. ಒಟ್ಟಾರೆ ಚಿತ್ರ ನೋಡಿದಾಗ ಕೂದಲು ಬಿಟ್ಟುಕೊಂಡಿರುವ ಮಹಿಳೆ ಸುಂದರವಾದ ಉಡುಗೆ ಧರಿಸಿರುವುದು, ನಗುತ್ತ ಫೋನ್ನಲ್ಲಿ ಮಾತನಾಡುತ್ತಿರುವುದು ಕಾಣುತ್ತದೆ. ಆದರೆ ಈ ಮಹಿಳೆ ರೂಪುಗೊಂಡಿರುವುದು ಇನ್ನೂ ನಾಲ್ಕು ಮಹಿಳೆಯರೊಂದಿಗೆ. ಅವರುಗಳನ್ನು ಗುರುತಿಸುವ ಜವಾಬ್ದಾರಿ ನಿಮ್ಮದು.
ಇದನ್ನೂ ಓದಿ : Viral Video: ‘ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ‘
ಎರಡನೇ ಮಹಿಳೆ ಈ ಮಹಿಳೆಯ ಕೆನ್ನೆಯ ಬಳಿ ಅಡಗಿದ್ದಾಳೆ. ಮೊದಲ ನೋಟಕ್ಕೆ ಅಡಗಿರುವ ಮಹಿಳೆ ಮೊಬೈಲ್ನಂತೆ ತೋರಬಹುದು. ಇನ್ನು ಮೂರನೇ ಮಹಿಳೆಯನ್ನು ಹುಡುಕಲು ತುಸು ಜಾಸ್ತಿಯೇ ಶ್ರಮ ಬೇಕು. ಏಕೆಂದರೆ ಆ ಮಹಿಳೆಯ ತೋಳಿನ ಮೇಲೆ ಪಾರ್ಶ್ವಮುಖಿಯಾಗಿ ಆಕೆ ಕಾಣಿಸಿಕೊಂಡಿದ್ದಾಳೆ. ನಾಲ್ಕನೇ ಮಹಿಳೆಯ ತುಟಿಗಳು ಆ ಮಹಿಳೆಯ ಹೊಟ್ಟೆಯ ಮೇಲೆ ಕಾಣುತ್ತಿವೆ.
ಬುದ್ಧಿ ಮತ್ತು ಕಣ್ಣಿನ ಮಧ್ಯೆ ಇಂಥ ಸೃಜನಾತ್ಮಕ ಚಿತ್ರಗಳು ಸವಾಲನ್ನು ಎಸೆಯುತ್ತವೆ. ಈ ಸೃಜನಾತ್ಮಕ ಚಿತ್ರಗಳನ್ನು ರಚಿಸಬೇಕೆಂದರೆ ಕಲಾವಿದ ಸಾಕಷ್ಟು ತಾಳ್ಮೆ, ಸಮಯವನ್ನು ವಿನಿಯೋಗಿಸಿ ಏಕಾಗ್ರತೆ ತಂದುಕೊಳ್ಳಬೇಕಾಗುತ್ತದೆ. ಅನೇಕ ನೆಟ್ಟಿಗರಿಗೆ ಎಲ್ಲ ಮಹಿಳೆಯರನ್ನೂ ಗುರುತಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ : Viral Video: ಸರ್ಕೋಮಾ ಕ್ಯಾನ್ಸರ್; ‘ಈತನಕವೂ ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ’
ಕೆಲವರು ಒಂದೇ ಮಹಿಳೆ ಎಂದಿದ್ದಾರೆ, ಇನ್ನೂ ಕೆಲವರು ಇಬ್ಬರು ಎಂದಿದ್ದಾರೆ, ಮತ್ತೂ ಕೆಲವರು ಮೂರು ಎಂದಿದ್ದಾರೆ. ನಾಲ್ಕು ಎಂದವರು ಕೇವಲ ಶೇ. 2 ಜನ ಮಾತ್ರ. ಬಹುಶಃ ಇದನ್ನು ಓದುತ್ತಿದ್ದಂತೆ ನಿಮಗೆ ಎಲ್ಲ ಮಹಿಳೆಯರು ಕಣ್ಣಿಗೆ ಬಿದ್ದಿರಲು ಸಾಧ್ಯ. ಮಂಡೇ ಬ್ಲ್ಯೂಸ್ ನಿಮ್ಮನ್ನು ಬಿಟ್ಟು ಈಗ ಓಡಿರಬೇಕಲ್ಲವೆ? ನಿನ್ನೆಯಷ್ಟೇ ವಾರಾಂತ್ಯದ ವಿಶ್ರಾಂತಿಯಿಂದ ಕೆಲಸ ಮಾಡಲು ಮನಸ್ಸು ಹಠ ಹಿಡಿದಿತ್ತೇನೋ. ಇದೀಗ ಮನಸ್ಸು ಉಲ್ಲಸಿತಗೊಂಡಿರಬೇಕು. ಮತ್ತಷ್ಟು ಇಂಥ ಭ್ರಮಾತ್ಮಕ ಚಿತ್ರಗಳಿಗಾಗಿ ಎದುರು ನೋಡುತ್ತಾ ಇರಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ