ಭಾರತೀಯ ಸೇನೆಗೆ ಲಗ್ನಪತ್ರಿಕೆ ಕಳಿಸಿದ ಕೇರಳದ ವಧುವರರು; ಸೇನೆಯಿಂದ ಶುಭಹಾರೈಕೆ

| Updated By: ಶ್ರೀದೇವಿ ಕಳಸದ

Updated on: Nov 19, 2022 | 2:06 PM

Indian Army : ‘ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ ಶ್ರಮದಿಂದಾಗಿ ನಾವು ಪ್ರತೀ ದಿನ ನೆಮ್ಮದಿಯಿಂದ ಮಲಗುತ್ತೇವೆ.  ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ದಿನ ಕಳೆಯುತ್ತೇವೆ. ದಯವಿಟ್ಟು ನಮ್ಮ ಮದುವೆಗೆ ಬನ್ನಿ’

ಭಾರತೀಯ ಸೇನೆಗೆ ಲಗ್ನಪತ್ರಿಕೆ ಕಳಿಸಿದ ಕೇರಳದ ವಧುವರರು; ಸೇನೆಯಿಂದ ಶುಭಹಾರೈಕೆ
Indian army invited by Kerala couple for their wedding and they received a cute reply
Follow us on

Viral Video : ನೀವು ಮದುವೆಗೆ ಯಾರನ್ನೆಲ್ಲ ಆಹ್ವಾನಿಸುತ್ತೀರಿ? ಬಂಧು, ಬಳಗ, ಸ್ನೇಹಿತರು, ಊರವರು. ಆದರೆ ಇದೀಗ ವೈರಲ್ ಆಗಿರುವ ಈ ಆಮಂತ್ರಣ ಪತ್ರಿಕೆಯನ್ನು ಗಮನಿಸಿ. ಕೇರಳದ ವಧುವರರು ತಮ್ಮ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿದ್ದರು. ಈ ಆಹ್ವಾನಕ್ಕೆ ಪ್ರತಿಯಾಗಿ ಕೈಬರಹದಲ್ಲಿ ಸೇನೆಯು ನವದಂಪತಿಗೆ ಶಭಕೋರಿ ಹಾರೈಸಿದೆ. ನೆಟ್ಟಿಗರು ಇದನ್ನು ಬಹುವಾಗಿ ಮೆಚ್ಚುತ್ತಿದ್ದಾರೆ. ವಿಭಿನ್ನ ಮತ್ತು ಅರ್ಥಪೂರ್ಣವಾದುದು ಎಂದಿಗೂ ಜನಮನವನ್ನು ಗೆಲ್ಲುತ್ತದೆ ಎನ್ನುವುದಕ್ಕೆ ಈ ಲಗ್ನಪತ್ರಿಕೆ ಸಾಕ್ಷಿ.

ಹೊಸ ಅಡಿ ಇಡುವಾಗ ಹಾರೈಕೆಗಳು ಬಹಳೇ ಮುಖ್ಯ. ಅವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಹೊಸ ಹುರುಪು ಚೈತನ್ಯ ತುಂಬುತ್ತವೆ. ಕೇರಳದ ಈ ವಧುವರರಿಗೆ, ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಡುವ ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಆ ಪ್ರಕಾರ ಅವರು ಸೇನೆಗೆ ಆಹ್ವಾನ ಪತ್ರಿಕೆ ಕಳಿಸಿದ್ದಾರೆ.

ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ ಶ್ರಮದಿಂದಾಗಿ ನಾವು ಪ್ರತೀ ದಿನ ನೆಮ್ಮದಿಯಿಂದ ಮಲಗುತ್ತೇವೆ.  ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ದಿನ ಕಳೆಯುತ್ತೇವೆ. ನಿಮ್ಮನ್ನು ನಮ್ಮ ಮದುವೆಗೆ ಆಹ್ವಾನಿಸಲು ಖುಷಿಯಾಗುತ್ತಿದೆ. ದಯವಿಟ್ಟು ಆ ದಿನ ಬಂದು ಆಶೀರ್ವದಿಸಬೇಕಾಗಿ ವಿನಂತಿ- ಹೀಗೆಂದು ನವೆಂಬರ್ 10ಕ್ಕೆ ಇದ್ದ ಮದುವೆಗೆ ಆಹ್ವಾನಿಸಲಾಗಿತ್ತು.

ಈ ಲಗ್ನಪತ್ರಿಕೆಯನ್ನು ಭಾರತೀಯ ಸೇನೆಯು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದೆ. ಜೊತೆಗೆ ನವದಂಪತಿಗೆ ಶುಭವನ್ನೂ ಹಾರೈಸಿದೆ, ‘ರಾಹುಲ್ ಮತ್ತು ಕಾರ್ತಿಕಾ ನೀವು ನಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ. ನಿಮ್ಮ ದಾಂಪತ್ಯ ಸಂತೋಷದಿಂದ ಕೂಡಿರಲಿ’.

ಈಗಾಗಲೇ ಈ ಪೋಸ್ಟ್​ 85,000 ಜನರ ಮೆಚ್ಚುಗೆ ಗಳಿಸಿದೆ. ನೆಟ್ಟಿಗರು ದಂಪತಿಯ ಈ ನಡೆಯನ್ನು ಶ್ಲಾಘಿಸಿದ್ದಾರೆ. ಇದು ಬಹಳ ಅದ್ಭುತವಾದ ಆಲೋಚನೆ. ನಮ್ಮ ದೇಶಸೇವೆ ಮಾಡುತ್ತಿರುವ ಹೀರೋಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ ಈ ರೀತಿ ಬಹಳ ಚೆನ್ನಾಗಿದೆ ಎನ್ನುತ್ತಿದ್ದಾರೆ ಹಲವರು.

ಈ ಆಲೋಚನೆಯ ಬಗಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:55 pm, Sat, 19 November 22