ಎದ್ದೇಳೋ ಮಗನೇ, ಎದ್ದೀದೀನೋ ಅಪ್ಪ; ನೀವೂ ನಿಮ್ಮ ಮಕ್ಕಳೂ ನೋಡುವ ಈ ವಿಡಿಯೋ
Wake up : ಎದ್ದೀದೀನಿ ಅಪ್ಪಾ, ಎಂದರೂ ಬಿಡದ ಈ ಅಪ್ಪ. ಚಿಕ್ಕಂದಿನಲ್ಲಿ ಬೆಳಗಾದರೆ ಸಾಕು, ನಿಮ್ಮ ಅಪ್ಪಅಮ್ಮ ಹೀಗೆ ಮುಖ ತೊಳೀತಿದ್ರು ಅಲ್ವಾ? ಮತ್ತೀಗ ನಿಮ್ಮ ಮಕ್ಕಳಿಗೂ ನೀವು ಹೀಗೇ ಎಬ್ಬಿಸುವುದಾ? ನೋಡಿ ಮಜಾ ಇದೆ ಈ ವಿಡಿಯೋ.
Viral Video : ಪುಟ್ಟಮಕ್ಕಳನ್ನು ಬೆಳಗ್ಗೆ ಶಾಲೆಗೆ ಎಬ್ಬಿಸಿ ಕಳಿಸುವ ಪ್ರಯಾಸವಿದೆಯಲ್ಲ ಎಲ್ಲ ಭಾವಗಳನ್ನೂ ನಮ್ಮಿಂದ ಹೊಮ್ಮಿಸಿಬಿಡುತ್ತದೆ. ಪಾಪ ಹೇಗೆ ಎಬ್ಬಿಸುವುದು ಇಷ್ಟು ಬೇಗ ಎಂದೆನ್ನಿಸಿದರೂ ಗಡಿಯಾರ ನನ್ನನ್ನು ನೋಡು ಎನ್ನುತ್ತೆ. ಮುದ್ದು ಮಾಡಿದಷ್ಟೂ ಮುದುರಿ ಮಲಗುವ ಮಕ್ಕಳನ್ನು ಹೇಗೆ ಎಬ್ಬಿಸಲಾದೀತು? ಗಡಿಯಾರದ ಮುಳ್ಳು ಮತ್ತೂ ಓಡುತ್ತಿರುತ್ತದೆ. ಜೋರಾಗಿ ಬೈದರೆ ಶಾಲೆಗೆ ಹೋಗದಿರುವ ಅಪಾಯವಿದೆ ಎಂದು ಗೊತ್ತಿದ್ದೇ ಅನೇಕ ಪೋಷಕರು ಉಪಾಯಗಳಿಗೆ ಮೊರೆ ಹೋಗುತ್ತಾರೆ. ಇಲ್ಲಿರುವ ಈ ಉಪಾಯಕ್ಕೆ ನೀವೆಲ್ಲರೂ ಮೊರೆ ಹೋಗಿರುತ್ತೀರಿ. ನಿಮ್ಮ ಪೋಷಕರು ಚಿಕ್ಕಂದಿನಲ್ಲಿ ನಿಮಗೆ ಹೀಗೆ ಮಾಡಿರುವ ಸಾಧ್ಯತೆ ಖಂಡಿತಾ ಇದೆ!
View this post on Instagram
13,000 ಜನರು ಇಷ್ಟಪಟ್ಟಿರುವ ಈ ವಿಡಿಯೋ ಇದೀಗಷ್ಟೇ ವೈರಲ್ ಆಗುತ್ತಿದೆ. ಎದ್ದೇಳು ಮಗನೇ ಎಂದು ಅಪ್ಪ, ಎದ್ದಿದೀನಿ ಅಂತ ಮಗ, ಈಗ ಬ್ರಷ್ ಮಾಡು ಅಂತ ಅಪ್ಪ, ಮಾಡ್ತೀನಿ ಅಂತ ಮಗ. ಥಣ್ಣನೆಯ ನೀರಿನಿಂದ ಮುಖಕ್ಕೆ ನೀರು ಎರಚುತ್ತಾ, ಉಜ್ಜುತ್ತಾ ಒಂದೇ ಸಮ… ಬಹಳ ಮಜಾ ಇದೆಯಲ್ಲ ಈ ವಿಡಿಯೋ? ಮಗು ಇದನ್ನು ನಗುನಗುತ್ತಲೇ ಸ್ವೀಕರಿಸುತ್ತಿದೆ.
ನೆಟ್ಟಿಗರು ಎಂಥ ಚೆಂದದ ಕುಟುಂಬ, ಹೀಗೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ಅಯ್ಯೋ ಈ ವಿಡಿಯೋ ನೋಡಿ ತೀರಿಹೋದ ನನ್ನ ಅಪ್ಪನ ನೆನಪಾಗುತ್ತಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ನಮ್ಮ ತಾಯಿ ಕೂಡ ನನಗೆ ಹೀಗೇ ಮಾಡಿದ್ದರು ಎಂದು ಹಲವರು ಹೇಳಿದ್ದಾರೆ. ಇದು 16 ವರ್ಷದ ಮಕ್ಕಳಿಗೆ ವರ್ಕೌಟ್ ಆಗತ್ತಾ? ಎಂದು ಕೇಳಿದ್ದಾರೆ ಮತ್ತೊಬ್ಬರು. ಎರಡು ಸೆಕೆಂಡ್ ಸಾಕು, ಎಷ್ಟದು ನೀರು ಉಗ್ಗೋದು ಎಂದು ಕೇಳಿದ್ಧಾರೆ ಇನ್ನೊಬ್ಬರು.
ಹೇಳಿ ನಿಮ್ಮ ಮಕ್ಕಳನ್ನು ಬೆಳಗ್ಗೆ ಹೇಗೆ ಎಬ್ಬಸ್ತೀರಿ?
ಮತ್ತಷ್ಟು ವೈರಲ್ ವಿಡಿಯೋ ಕ್ಲಿಕ್ ಮಾಡಿ
Published On - 11:49 am, Sat, 19 November 22