Acid Attack: ‘ನನಗಾಗ 13 ವರ್ಷ. ಒಂದು ದಿನ ಟ್ಯೂಷನ್ ಮುಗಿಸಿ ನನ್ನ ಸ್ನೇಹಿತೆಯೊಂದಿಗೆ ಮನೆಗೆ ಮರಳುತ್ತಿದ್ದೆ. ಇದ್ದಕ್ಕಿದ್ದಂತೆ ಬಂದ ದುಷ್ಕರ್ಮಿಗಳು ನನ್ನ ಮೇಲೆ ಎಸಿಡ್ ದಾಳಿ ನಡೆಸಿದರು. ಹಾಗೆ ನೋಡಿದರೆ ಅವರು ಕಣ್ಣಿಟ್ಟದ್ದು ನನ್ನ ಸ್ನೇಹಿತೆಯ ಮೇಲೆ ಆದರೆ ಗುರಿಯಾಗಿದ್ದು ನಾನು. ನನ್ನ ಅರ್ಧದೇಹ ಸುಟ್ಟು ಉರಿಯತೊಡಗಿತು. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಶೇ. 70 ರಷ್ಟು ದೇಹ ಸುಟ್ಟುಹೋಗಿತ್ತು. ಒಂದು ವಾರದ ನಂತರ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ನನಗೇ ಭಯವಾಯಿತು. ಮುಖ ದೇಹದ ತುಂಬಾ 50ರಿಂದ 55 ಸರ್ಜರಿಗಳಾದವು. ಶಾಲೆಗೆ ಹೋಗಲು ಅಸಹ್ಯವೆನ್ನಿಸಿತು. ಆದರೆ ನನ್ನ ಪೋಷಕರ, ಸ್ನೇಹಿತರ ಬೆಂಬಲದಿಂದ (Support) ಶಾಲೆಗೆ ಹೋದೆ. ದೇವರೇ ನನಗೇ ಯಾಕೆ ಇದೆಲ್ಲ? ಎಂದು ಕೇಳಿದೆ.’
ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್ನಲ್ಲಿ ಕಾಫಿ ಕುಡಿದ ಗಗನಯಾತ್ರಿ
‘ಎಸಿಡ್ ದಾಳಿ ನಡೆಸಿದ ದುಷ್ಕರ್ಮಿಯನ್ನು ಎರಡು ವರ್ಷಗಳ ನಂತರ ಪೊಲೀಸರು ಬಂಧಿಸಿದರು. ಇದೆಲ್ಲ ನಡೆದು ಇದೀಗ ಹತ್ತು ವರ್ಷಗಳು ಕಳೆದವು. ಮಾಸ್ಟರ್ಸ್ ಮುಗಿಸಿ ಸಪ್ಲೈ ಚೈನ್ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಂಥವಳನ್ನು ಯಾರು ಮದುವೆಯಾಗುತ್ತಾರೆ? ಎಂದು ಅಂದಿನಿಂದ ಇಂದಿನವರೆಗೂ ಅಂದವರ ಮಾತುಗಳೆಲ್ಲ ನೆನಪಿನಲ್ಲಿವೆ. ಆದರೆ ಒಂದು ಮಾತ್ರ ನಿಜ. ಯಾವಾಗ ಬೇಕಾದರೂ ಬದುಕಿನಲ್ಲಿ ಏನೂ ಆಗಬಹುದು. ಬದುಕುವ ಛಲ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು.’ ಪ್ರೇರಣಾ ಗಾಂಧಿ
ಈ ವಿಡಿಯೋ ಅನ್ನು officialpeopleofindia ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಹೇಯ್ ಹುಡುಗಿ ನೀವು ಈಗ ಹೇಗಿದ್ದೀರೋ ಹಾಗೆ ನೋಡಲು ಕೂಡ ಖುಷಿ ಎನ್ನಿಸುತ್ತಿದೆ. ನಿಮ್ಮ ಮುಖದಲ್ಲಿ ಹೆಚ್ಚು ಆತ್ಮವಿಶ್ವಾಸವಿದೆ, ನಿಮ್ಮ ಭವಿಷ್ಯ ಉಜ್ವಲವಾಗಿದೆ ಎಂದಿದ್ದಾರೆ ಒಬ್ಬರು. ಸೌಂದರ್ಯ ಎನ್ನುವುದು ಅಂತರಿಕ, ಅದು ನಿಮ್ಮ ಹೋರಾಟದ ಹೆಜ್ಜೆಗಳಲ್ಲಿ ವೃದ್ಧಿಸುತ್ತಾ ಹೋಗುತ್ತದೆ. ನಿಮ್ಮ ಮುಖದ ಮೇಲೆ ಅದು ಪ್ರಜ್ವಲಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ