
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅದೆಷ್ಟೋ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಉಗ್ರರ ದಾಳಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಹೇಳಿದ ಮಾತಿನಂತೆ, ಭಾರತೀಯ ಸೇನೆ (Indian Army) ಆಪರೇಷನ್ ಸಿಂಧೂರ್ (operation sindoor) ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಪ್ರೀತಿಪಾತ್ರರನ್ನು ಕಳೆದುಕೊಂಡ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದ್ದು, ಈ ಪ್ರತಿಕಾರಕ್ಕೆ ಇಡೀ ಭಾರತವೇ ಸಂಭ್ರಮಾಚರಣೆ ನಡೆಸಿದೆ. ಕೆಲ ಟ್ರೋಲ್ ಪೇಜ್‌ಗಳಂತೂ ಪಾಕಿಸ್ತಾನಕ್ಕೆ ನಡುರಾತ್ರಿ ಸೂರ್ಯದರ್ಶನ ಮಾಡಿಸಿದ ಭಾರತ, ಪಾಕಿಸ್ತಾನದಲ್ಲಿ ದೀಪಾವಳಿ ಸಂಭ್ರಮಾಚರಣೆ ಅಂತೆಲ್ಲಾ ಮೀಮ್ಸ್ (memes)ಶೇರ್ ಮಾಡುತ್ತಿದೆ. ಈ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕನ್ನಡಿಗ ಮಂಜುನಾಥ್ ತಮ್ಮ ಪತ್ನಿ ಪಲ್ಲವಿಯ ಕಣ್ಣೆದುರೇ ಉಗ್ರರ ಗುಂಡಿನೇಟಿಗೆ ಬಲಿಯಾದರು. ಇನ್ನೂ ಉಗ್ರನೊಬ್ಬ ಮೋದಿಗೆ ಹೋಗಿ ಹೇಳು ಎಂದು ಪಲ್ಲವಿಯವರ ಬಳಿ ಹೇಳಿದ್ದನಂತೆ. ಇದೀಗ ಪ್ರಧಾನಿ ಮೋದಿ ʼಹೋಗಿ ಮೋದಿಗೆ ಹೇಳು ಎಂದಿದ್ದವರಿಗೆ ಪ್ರತ್ಯುತ್ತರ ನೀಡಿದ್ದು, ಈ ಕುರಿತ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. uttarkarnakatamandi, mememandir ಇನ್‌ಸ್ಟಾಗ್ರಾಮ್ ಪೇಜ್, BJP4Karnataka ಎಕ್ಸ್ ಖಾತೆ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೇಜ್‌ಗಳಲ್ಲಿ ಇಂತಹ ಮೀಮ್ಸ್‌ಗಳು ವೈರಲ್ ಆಗ್ತಿವೆ.
Sunrise in Pakistaan at 2am.
Credits to INDIAN ARMED FORCES🇮🇳.#OperationSindhoor pic.twitter.com/CecgCPHNrD— BJP Karnataka (@BJP4Karnataka) May 7, 2025
ಮೋದಿಗೆ ಹೋಗಿ ಹೇಳು ಅಂದ್ರಲ್ಲ, ಈಗ ಮೋದಿ ಕೊಟ್ಟ ರಿವೇಂಜ್ ಅಷ್ಟೇ ಚೆನ್ನಾಗಿದೆ ಅಲ್ವಾ ಅಂತೆಲ್ಲಾ ಜನ ಮೀಮ್ಸ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರಂತೂ ಭಾರತೀಯ ಸೇನೆಯ ಕ್ಷಿಪಣಿ ದಾಳಿಯ ವಿಡಿಯೋವನ್ನು ಶೇರ್ ಮಾಡಿಕೊಂಡು ಪಾಕಿಸ್ತಾನದಲ್ಲಿ ದೀಪಾವಳಿ ಹಬ್ಬ ನಡಿತಿದೆ ಅಂತೆಲ್ಲಾ ಮೀಮ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಪ್ರೀತಿಪಾತ್ರರನ್ನು ಕಳೆದುಕೊಂಡ ಭಾರತೀಯರ ಕಣ್ಣೀರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಈ ಪ್ರತಿಕಾರಕ್ಕೆ ಇಡೀ ಭಾರತವೇ ಸಂಭ್ರಮಾಚರಣೆ ನಡೆಸುತ್ತಿದೆ.