ದಹಿ ಕಚೋರಿ ಮಾರುತ್ತಾ ಹಗಲಿರುಳು ಶ್ರಮಿಸುತ್ತಿರುವ 14 ವರ್ಷದ ಬಾಲಕನಿಗೆ ಸಹಾಯ ಮಾಡಲು ಒಗ್ಗೂಡಿದ ನೆಟ್ಟಿಗರು

| Updated By: shruti hegde

Updated on: Sep 27, 2021 | 12:33 PM

Viral Video: ವಿಶಾಲ್ ಪರೇಖ್ ಎಂಬುವವರು ಬಾಲಕ ದಹಿ ಕಚೋರಿ ಮಾರಾಟ ಮಾಡುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೃದಯಸ್ಪರ್ಶಿ ವಿಡಿಯೋವಿದು.

ದಹಿ ಕಚೋರಿ ಮಾರುತ್ತಾ ಹಗಲಿರುಳು ಶ್ರಮಿಸುತ್ತಿರುವ 14 ವರ್ಷದ ಬಾಲಕನಿಗೆ ಸಹಾಯ ಮಾಡಲು ಒಗ್ಗೂಡಿದ ನೆಟ್ಟಿಗರು
ದಹಿ ಕಚೋರಿ ಮಾರುತ್ತಾ ಹಗಲಿರುಳು ಶ್ರಮಿಸುತ್ತಿರುವ 14 ವರ್ಷದ ಬಾಲಕನಿಗೆ ಸಹಾಯ ಮಾಡಲು ಒಗ್ಗೂಡಿದ ನೆಟ್ಟಿಗರು
Follow us on

ಗುಜರಾತ್ ಮೂಲದ 14 ವರ್ಷದ ಬಾಲಕ ದಹಿ ಕಚೋರಿ ಮಾರಾಟ ಮಾಡುತ್ತಾ ಶ್ರಮವಹಿಸಿ ದುಡಿದು ತನ್ನ ಕುಟುಂಬವನ್ನು ಸಾಕುತ್ತಿದ್ದಾನೆ. ಈ ಬಾಲಕ ಅಹಮದಾಬಾದ್​ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ ದಹಿ ಕಚೋರಿ ಮಾರಾಟ ಮಾಡುತ್ತಿದ್ದನು. ಈತನ ಭಾವನಾತ್ಮಕ ಕಥೆ ಕೇಳಿ ಮನಕಲಕುವುದಂತೂ ಸತ್ಯ. ಬಾಲಕನಿಗೆ ಸಹಾಯ ಮಾಡಲು ನೆಟ್ಟಿಗರೆಲ್ಲ ಒಂದಾಗಿದ್ದಾರೆ. ಇದೀಗ ಬಾಲಕ ದಹಿ ಕಚೋರಿ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶಾಲ್ ಪರೇಖ್ ಎಂಬುವವರು ಬಾಲಕ ದಹಿ ಕಚೋರಿ ಮಾರಾಟ ಮಾಡುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಲಕ 10 ರೂಪಾಯಿಗೆ ದಹಿ ಕಚೋರಿಯನ್ನು ಮಾರಾಟ ಮಾಡುತ್ತಾನೆ. ಜನರನ್ನು ಅಂಗಡಿಗೆ ಕರೆದು ದಹಿ ಕಚೋರಿ ಸೇವಿಸುವಂತೆ ವಿನಂತಿಸಿಕೊಳ್ಳುತ್ತಾನೆ. ಜತೆಗೆ ಹಣವನ್ನು ಕೂಡಿಟ್ಟು ತನ್ನ ಕುಂಟುಬವನ್ನು ಸಾಗಿಸಲು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಅದೆಷ್ಟೋ ಜನರು ಹಣಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ಎದುರಾಯಿತು. ಗೂಡಂಗಡಿಗಳನ್ನಿಟ್ಟು ಪ್ರತಿನಿತ್ಯ ಹಣ ಸಂಪಾದಿಸುತ್ತಿದ್ದ ಜನರ ಬದುಕು ಕಷ್ಟದಲ್ಲಿ ಸಿಲುಕಿತು. ಆ ದಿನ ದುಡಿದ ಹಣ ಆ ದಿನದ ಊಟಕ್ಕೆ ಖರ್ಚು ಎಂಬುವವರಿಗೆ ಕೊರೊನಾ ಸಾಂಕ್ರಾಮಿಕ ತುತ್ತು ಅನ್ನಕ್ಕೂ ಕಷ್ಟ ಪಡುವಂತೆ ಮಾಡಿತು.

ಅಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನೆಟ್ಟಿಗರು ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಕಲ್ಪಿಸಿಕೊಂಡರು. ಇಂತಹ ಜನರಿಗೆ ಸಹಾಯ ಮಾಡಲು ನೆಟ್ಟಿಗರೆಲ್ಲ ಒಂದಾಗಿದ್ದಾರೆ. ಟ್ವಿಟರ್​ನಲ್ಲಿ ದೃಶ್ಯ ಹಂಚಿಕೊಳ್ಳುವ ಮೂಲಕ ಸಹಾಯಕ್ಕೆ ಮುಂದಾಗಿದ್ದಾರೆ.

ಪರೇಖ್​ ಎನ್ನುವವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಇತರರೂ ಸಹ ದೃಶ್ಯವನ್ನು ಹಂಚಿಕೊಂಡರು. ಜತೆಗೆ ಹುಡುಗನಿಗೆ ಸಹಾಯ ಮಾಡುವಂತೆ ಜನರಲ್ಲಿ ಕೇಳಿಕೊಂಡರು. ಅಹಮದಾಬಾದ್​ನಲ್ಲಿ ವಾಸಿಸುತ್ತಿರುವ ಜನರು ಬಾಲಕನಿಗೆ ಸಹಾಯ ಮಾಡಬಹುದು. ಆತನ ಅಂಗಡಿಗೆ ಹೋಗಿ ದಹಿ ಕಚೋರಿ ಸವಿದು ಆತನಿಗೆ ಸಹಾಯ ಮಾಡಿ ಎಂದು ನೆಟ್ಟಿಗರು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ

(Viral News 14 years boy sells Dahi kachori in Ahmedabad netizens to help to him)