Viral Video : ನಮ್ಮ ನಡುವೆ ಅದೆಷ್ಟೋ ಜನ ಎರಡು ಮೂರು ಕೆಲಸಗಳನ್ನು ಮಾಡಿ ಬದುಕು ಕಟ್ಟಿಕೊಳ್ಳುವವರು ಇದ್ದಾರೆ. ಕೆಲಸ ಮಾಡುವವರಿಗೆ ಹಗಲು ಬೇರೆಯಲ್ಲ ಹಾಗೆ ರಾತ್ರಿಯೂ. ಆದರೆ ದುಡಿಮೆಯನ್ನು ಯಾರಿಗಾಗಿ ಮಾಡುತ್ತೇವೆ, ಯಾಕಾಗಿ ಮಾಡುತ್ತೇವೆ ಮತ್ತು ನಿರ್ದಿಷ್ಟವಾದ ಕೆಲಸವನ್ನೇ ಯಾಕೆ ಮಾಡುತ್ತೇವೆ ಎನ್ನುವುದು ಮುಖ್ಯ. ಇದೀಗ ವೈರಲ್ ಆಗುತ್ತಿರುವ ಈ ಸುದ್ದಿಯನ್ನು ಗಮನಿಸಿ. ಒಡಿಶಾದ ಈ ವ್ಯಕ್ತಿ ರಾತ್ರಿಹೊತ್ತು ರೈಲುನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಾರೆ. ಹಗಲು ಹೊತ್ತು ಬಡಮಕ್ಕಳಿಗೆ ಪಾಠ ಮಾಡುತ್ತಾರೆ.
Odisha | A railway porter by night, Berhampur’s Ch Nageshu Patro becomes a teacher for young and poor children during the day. The 31-year-old also teaches at a private college as a guest lecturer. pic.twitter.com/yZdBetJx5p
ಇದನ್ನೂ ಓದಿ— ANI (@ANI) January 8, 2023
ಒಡಿಶಾದ ಬೆಹ್ರಾಂಪುರದ ಈ ವ್ಯಕ್ತಿಯ ಹೆಸರು ನಾಗೇಶ ಪಾತ್ರೋ. ವಯಸ್ಸು 31. ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಸುಮಾರು 12 ವರ್ಷಗಳಿಂದ ನಾನು ಹಮಾಲಿಯಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ಹಮಾಲಿ ಕೆಲಸ. ಹಗಲಿನಲ್ಲಿ ಶಿಕ್ಷಕ ವೃತ್ತಿ. ಜೊತೆಗೆ 2006ರಲ್ಲಿ ನಿಂತು ಹೋದ ನನ್ನ ವಿದ್ಯಾಭ್ಯಾಸವನ್ನೂ 2012ರಿಂದ ಮುಂದುವರಿಸುತ್ತಿದ್ದೇನೆ. ಪೋರ್ಟರ್ ಆಗಿ ಕೆಲಸ ಮಾಡುವ ಹೊತ್ತಿಗೆ ನಾನು ಎಂಎ ಮುಗಿಸಿದ್ದೆ’ ಎಂದಿದ್ಧಾರೆ ನಾಗೇಶ.
ಇದನ್ನೂ ಓದಿ : ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್
ಈ ಪೋಸ್ಟ್ ಅನ್ನು ಈತನಕ 82,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಬಡಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಮತ್ತು ಮೈಮುರಿದು ದುಡಿಯುವ ಇಂಥ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕು ಎಂದು ನೆಟ್ಟಿಗರು ಇವರನ್ನು ಅಭಿನಂದಿಸಿದ್ಧಾರೆ. ಮಕ್ಕಳಿಗೆ ಬೇಕಾದ ಪಠ್ಯಪುಸ್ತಕ ಮತ್ತು ಇನ್ನಿತರೇ ವಸ್ತುಗಳನ್ನು ಈ ವ್ಯಕ್ತಿಗೆ ಕೊಡಿ. ಆಗ ಪರಿಣಾಮಕಾರಿಯಾಗಿ ಈ ವ್ಯಕ್ತಿ ಪಾಠ ಮಾಡಲು ಅನುಕೂಲವಾಗುತ್ತದೆ ಎಂದಿದ್ದಾರೆ ಒಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:39 pm, Tue, 10 January 23