Chile: 42 ವರ್ಷಗಳ ಕಾಲ ತನಗೆ ಯಾರೂ ಸಂಬಂಧಿಕರಿಲ್ಲ ತಾನೊಬ್ಬ ದತ್ತು ಪಡೆದ ಮಗು ಎಂದೇ ನಂಬಿದ್ದ. ಇದೀಗ ಜಿಮ್ಮಿ ತನ್ನ ತಾಯಿಯನ್ನು ಸೇರಿದ್ದಾನೆ ಅಲ್ಲದೇ ತನಗಾದ ಮೋಸವನ್ನೂ ಕಂಡುಕೊಂಡಿದ್ದಾನೆ. ತನ್ನ ಫೇಸ್ಬುಕ್ ಪುಟದಲ್ಲಿ ತಾಯಿಯೊಂದಿಗಿನ ಪುನರ್ಮಿಲನದ (Reunion) ಬಗ್ಗೆ ಪೋಸ್ಟ್ ಹಾಕಿದ್ದಾನೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ಭಾವುಕರಾಗಿ ಸ್ಪಂದಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಚಿಲಿಯಲ್ಲಿ ಹುಟ್ಟುತ್ತಲೇ ಮಗುವನ್ನು ಅಪಹರಿಸುವುದು ಮತ್ತು ಅಕ್ರಮವಾಗಿ ದತ್ತು ಪಡೆಯುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಜಿಮ್ಮಿ ಕೂಡ ಇಂಥ ಪ್ರಕರಣಗಳಡಿ ಸಿಲುಕಿದ್ದ ಶಿಶುವಾಗಿದ್ದ.
42 ವರ್ಷಗಳ ಹಿಂದೆ ಅವಧಿಪೂರ್ವ ಜನಿಸಿದ್ದರಿಂದ ಜಿಮ್ಮಿಯನ್ನು ಇನ್ಕ್ಯೂಬೇಟರ್ನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಅವನ ತಾಯಿಗೆ ಡಾಕ್ಟರ್ ಮತ್ತು ನರ್ಸ್, ನಿಮ್ಮ ಮಗು ತೀರಿಕೊಂಡಿದೆ ಮತ್ತು ಅದರ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ ಎಂದು ಹೇಳಿದ್ದರು. ಇತ್ತ ಜಿಮ್ಮಿ ತನಗೆ ಯಾರೂ ಸಂಬಂಧಿಕರೇ ಇಲ್ಲ ತಾನೊಬ್ಬ ದತ್ತುಪಡೆದ ಮಗು ಎಂದುಕೊಂಡೇ ಜೀವಿಸತೊಡಗಿದ. ಏಪ್ರಿಲ್ನಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು ಕಣ್ಣಿಗೆ ಬಿತ್ತು. ಅಪಹರಣಕ್ಕೊಳಗಾದ ಮಗು ವರ್ಷಗಳ ಬಳಿಕ ತನ್ನ ತಾಯಿಯನ್ನು ಭೇಟಿಮಾಡಿದುದು ಅದರಲ್ಲಿ ಪ್ರಸ್ತಾಪಗೊಂಡಿತ್ತು. ತನ್ನ ಬದುಕಿನಲ್ಲಿಯೂ ಇಂಥದ್ದೇನಾದರೂ ನಡೆದಿದೆಯೇ? ಎಂದು ಆತ ಯೋಚಿಸಲು ಆರಂಭಿಸಿದ ಮತ್ತು ಈ ಬಗ್ಗೆ ತಿಳಿದುಕೊಳ್ಳಲು ಕಾರ್ಯಪ್ರವೃತ್ತನೂ ಆದ.
ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿರುವ ಇನ್ನೊಂದು ನಾಯಿಯನ್ನು ಕಂಡುಹಿಡಿಯಬಹುದೆ?
ಅಂತೂ ತನ್ನ ಕುಟುಂಬ ಅಸ್ತಿತ್ವದಲ್ಲಿದೆ ಎನ್ನುವುದನ್ನು ಪತ್ತೆ ಮಾಡಿದ. ಚಿಲಿಯ ವಾಲ್ಡಿವಿಯಾದಲ್ಲಿ ತನ್ನ ಮನೆ ಇರುವುದಾಗಿ ಮತ್ತು ತನ್ನ ತಾಯಿಯ ನಿಜವಾದ ಹೆಸರು ಮಾರಿಯಾ ಏಂಜೆಲಿಕಾ ಗೊಂಝಾಲೆಝ್ ಎಂದು ತಿಳಿದುಕೊಂಡ. ನಂತರ ಮನೆಗೆ ಹೋಗಿ ತಾಯಿಯನ್ನು ಬೇಟಿಯಾದ. ಮೊದಲ ಸಲ ಅವರು ಪರಸ್ಪರ ಅಪ್ಪಿಕೊಂಡು ಭಾವುಕರಾದರು. ಜಿಮ್ಮಿ ಸ್ಪ್ಯಾನಿಷ್ ಭಾಷೆಯಲ್ಲಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ. Nos Buscamos ಎಂಬ ಎನ್ಜಿಒ ಸಹಾಯದಿಂದ ತನ್ನ ಕುಟುಂಬವನ್ನು ಈತ ಸೇರಿದ. ಇಷ್ಟೇ ಅಲ್ಲ ತಾನು ನಕಲಿ ದತ್ತು ಪ್ರಕ್ರಿಯೆ ಪ್ರಕರಣಕ್ಕೆ ಸಿಲುಕಿದ್ದ ಶಿಶು ಎನ್ನುವುದನ್ನೂ ತಿಳಿದುಕೊಂಡ.
ಇದನ್ನೂ ಓದಿ : Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು
ಡಿಎನ್ಎ ಪರೀಕ್ಷೆಯಲ್ಲಿ ಶೇ. 100 ಜಿಮ್ಮಿ ಚಿಲಿಮೂಲದವನು ಎಂದು ದೃಢಪಟ್ಟಿದೆ. ‘ಮೈ ಹೆರಿಟೇಜ್’ ಎಂಬ ಸಂಸ್ಥೆಯ ಮೂಲಕ ಅವನ ಸೋದರಸಂಬಂಧಿಯೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಮೊದಲು ತನ್ನ ಸೋದನಿಗೆ ದತ್ತು ಪತ್ರಗಳನ್ನು ಜಿಮ್ಮಿ ಕಳಿಸಿದ್ದಾನೆ. ಅದರಲ್ಲಿ ಅವನ ಜನನದ ವಿವರ ಮತ್ತು ತಾಯಿಯ ಹೆಸರು ವಿಳಾಸಗಳನ್ನು ಉಲ್ಲೇಖಿಸಲಾಗಿತ್ತು. ಆ ದಾಖಲೆಯಗಳ ಆಧಾರದ ಮೇಲೆ ಜಿಮ್ಮಿ ತನ್ನ ತಾಯಿ ಮತ್ತು ಸ್ವಂತ ಕುಟುಂಬವನ್ನು ಸೇರಿದ್ದಾನೆ.
ಇದನ್ನೂ ಓದಿ : Viral Video: ಲೈವ್ನಲ್ಲಿ ಆ್ಯಂಕರ್ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್ಗೆಳೆಯ
1970 ಮತ್ತು 1980 ರ ದಶಕಗಳಲ್ಲಿ ಚಿಲಿಯಲ್ಲಿರುವ ಅನೇಕ ಕುಟುಂಬಗಳಿಂದ 10,000ಕ್ಕೂ ಹೆಚ್ಚು ಶಿಶುಗಳನ್ನು ನಕಲಿ ದತ್ತು ಪ್ರಕ್ರಿಯೆ ಮೂಲಕ ಅಪಹರಿಸಲಾಗಿದೆ ಎಂದು ನೋಸ್ ಬುಸ್ಕಾಮೋಸ್ ಎನ್ಜಿಒ ಅಂದಾಜಿಸಿದೆ. ಚಿಲಿಯ ಪೊಲೀಸ್ ತನಿಖಾ ವರದಿಯನ್ನು ಆಧರಿಸಿ ಮತ್ತು ಚಿಲಿಯಿಂದ ಹೊರದೇಶಗಳಿಗೆ (ವಾಪಾಸು ಮರಳದ) ಪ್ರಯಾಣಿಸಿದ ಮಕ್ಕಳ ಪಾಸ್ಪೋರ್ಟ್ ಪರಿಶೀಲಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ.
ಮತ್ತಷ್ಟು ವೈರಲ್ ನ್ಯೂಸ್ನೊಂದಿಗೆ ಕ್ಲಿಕ್ ಮಾಡಿ
Published On - 4:54 pm, Mon, 28 August 23