Viral News: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ಮಾಲೀಕ

| Updated By: ಸುಷ್ಮಾ ಚಕ್ರೆ

Updated on: Jul 23, 2021 | 8:04 PM

ತಮ್ಮ ಮುದ್ದಿನ ನಾಯಿಯ 5ನೇ ಪುಣ್ಯತಿಥಿಯಂದು ಈ ಕಂಚಿನ ಪುತ್ಥಳಿಯನ್ನು ಮಾಲೀಕರು ಉದ್ಘಾಟನೆ ಮಾಡಿದ್ದಾರೆ.

Viral News: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ಮಾಲೀಕ
ನಾಯಿಯ ಕಂಚಿನ ಪುತ್ಥಳಿ
Follow us on

ನಾಯಿ, ಬೆಕ್ಕುಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ಸಾಕುವವರು ಸಾಕಷ್ಟು ಜನರಿದ್ದಾರೆ. ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾಯಿಗೂ ಹೆಸರಿಟ್ಟು, ಬೇಕಾದ ಬಟ್ಟೆಗಳನ್ನೆಲ್ಲ ತೊಡಿಸಿ, ಸಂಭ್ರಮಿಸುವ ಶ್ವಾನಪ್ರಿಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದೇರೀತಿ ಆಂಧ್ರಪ್ರದೇಶದ ಕುಟುಂಬವೊಂದು ಬಹಳ ಪ್ರೀತಿಯಿಂದ ನಾಯಿಮರಿಯನ್ನು ಸಾಕಿಕೊಂಡಿತ್ತು. ಆ ನಾಯಿಮರಿ ದೊಡ್ಡದಾಗಿ ಮನೆಯವರಲ್ಲಿ ಒಂದಾಗಿ ಬದುಕುತ್ತಿತ್ತು. ಆದರೆ, 5 ವರ್ಷಗಳ ಹಿಂದೆ ಆ ನಾಯಿ ಸಾವನ್ನಪ್ಪಿತ್ತು. ಆ ದುಃಖದಿಂದ ಹೊರಬರಲು ಇನ್ನೂ ಪ್ರಯತ್ನಿಸುತ್ತಲೇ ಇರುವ ಆ ಕುಟುಂಬಸ್ಥರು ತಮ್ಮ ಮುದ್ದಿನ ನಾಯಿಯ ನೆನಪಿಗಾಗಿ ಮನೆಯ ಪಕ್ಕದಲ್ಲಿ ಆ ನಾಯಿಯ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಮುದ್ದಿನ ನಾಯಿಯ 5ನೇ ಪುಣ್ಯತಿಥಿಯಂದು ಈ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಜ್ಞಾನಪ್ರಕಾಶ್ ರಾವ್ ಎಂಬ ವ್ಯಕ್ತಿ ತಮ್ಮ ಮುದ್ದಿನ ನಾಯಿಯ ನೆನಪಿನಲ್ಲಿ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಆ ನಾಯಿ ಸಾವನ್ನಪ್ಪಿದ ದಿನ ಎಲ್ಲ ರೀತಿಯ ಶಾಸ್ತ್ರಗಳನ್ನೂ ನೆರವೇರಿಸಿದ್ದಾರೆ. 9 ವರ್ಷ ಸಾಕಿದ್ದ ನಾಯಿಯ ನೆನಪನ್ನು ಪುತ್ಥಳಿಯ ಮೂಲಕ ಗಟ್ಟಿಯಾಗಿಸಿಕೊಂಡಿದ್ದಾರೆ ಆ ನಾಯಿಯ ಒಡೆಯ.

ಹೊಸದಾಗಿ ನಿರ್ಮಿಸಲಾದ ನಾಯಿಯ ಪ್ರತಿಮೆಗೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಆ ಪ್ರತಿಮೆಗೆ ಕಲಶಾಭಿಷೇಕ ಮಾಡಿ ಕಾರ್ಯಕ್ರಮಕ್ಕೆ ಬಂದವರಿಗೆ ಸಿಹಿಯೂಟ ಹಾಕಿಸಿದ್ದಾರೆ.

ನಾಯಿಯ ಕಂಚಿನ ಪುತ್ಥಳಿ

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Andhra Pradesh Man Erects Bronze Statue of His Late Pet Dog on 5th Death Anniversary)

Published On - 8:03 pm, Fri, 23 July 21