Viral News: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ, ಮದುವೆ ಮುರಿದುಕೊಂಡ ವರ

|

Updated on: Mar 14, 2023 | 1:15 PM

ವಧು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

Viral News: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ, ಮದುವೆ ಮುರಿದುಕೊಂಡ ವರ
ಸಾಂದರ್ಭಿಕ ಚಿತ್ರ
Follow us on

ಕನೌಜ್: ಉತ್ತರ ಪ್ರದೇಶ(Uttar Pradesh) ಕನೌಜ್ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ವಧು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಪೊಲೀಸರು ಎರಡು ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಪ್ರಕರಣ ಬಗ್ಗೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಇದೀಗ ಎರಡು ಕುಟುಂಬ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಾರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿರ್ವ ಕೊತ್ವಾಲಿ ವಲಯದ ಪೊಲೀಸ್ ಠಾಣೆ ಪ್ರಭಾರಿ ಪಿ.ಎನ್.ಬಾಜಪೈ ತಿಳಿಸಿದ್ದಾರೆ.

ವರದಿಯ ಪ್ರಕಾರ, ವಧುವಿನ ಕುಟುಂಬವು ತಮ್ಮ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ವರನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, 12ನೇ ತರಗತಿ ಅಂಕಪಟ್ಟಿಯಲ್ಲಿ ಬಾಲಕಿಗೆ ಕಡಿಮೆ ಅಂಕ ಬಂದಿದೆ ಎಂದು ತಿಳಿಸಿದ್ದರು. ಬಾಗಂವ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬುವರೊಂದಿಗೆ ಮಗಳು ಸೋನಿ ಮದುವೆ ನಿಶ್ಚಯಿಸಿದ್ದು, 60 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ವರನಿಗೆ 15 ಸಾವಿರ ಮೌಲ್ಯದ ಬಂಗಾರದ ಉಂಗುರವನ್ನೂ ನೀಡಿ ಸಮಾರಂಭ ಏರ್ಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನವೇ ವರನ ಮನೆಯವರು ವರದಕ್ಷಿಣೆ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಆರೋಪಿಸಿದರು. ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ವರನ ಕುಟುಂಬವು ಹುಡುಗಿ 12ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಹೇಳಿ ಮದುವೆ ಮುರಿದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಬಸ್ಸಿನಲ್ಲಿ ಗರ್ಭಿಣಿ, ವೃದ್ಧ, ದಿವ್ಯಾಂಗ, ಮಕ್ಕಳು ಯಾರಿಗೆ ಸೀಟು ಬೀಡಬೇಕು? IAS ಅಧಿಕಾರಿ ಪ್ರಶ್ನೆ ವೈರಲ್

ವಧುವಿನ ಮನೆಯವರು ತಮ್ಮ ಸಂಬಂಧಿಕರ ಮೂಲಕ ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೆ ವರನ ಕುಟುಂಬವು ಅವರ ಕೇಳಿದ ವರದಕ್ಷಿಣೆಯನ್ನು ನೀಡದಿದ್ದಾರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ. ವಧುವಿನ ತಂದೆ ಪೊಲೀಸರ ಸಹಾಯವನ್ನು ಕೇಳಿದ್ದಾರೆ.

Published On - 1:14 pm, Tue, 14 March 23