Viral News: ‘ಬಟರ್ ಚಿಕನ್ ಗೋಲ್ಗಪ್ಪಾ’ ಹೊಸ ಹೆಸರು ಕೇಳಿ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Butter Chicken Golgappa: ಬಟರ್ ಚಿಕನ್ ಗೋಲ್ಗಪ್ಪಾ ಎಂಬ ಖಾದ್ಯದ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ದೆಹಲಿಯ ಸ್ಟ್ರೀಟ್​ ಫುಡ್​ನಲ್ಲಿ ಸಿಗುವ ಹೊಸ ರೆಸಿಪಿ. ಹೆಸರೇ ಸೂಚಿಸುವಂತೆ ಇದು ಚಿಕನ್​ನಿಂದ ತಯಾರಾಗುವ ಖಾದ್ಯ.

Viral News: ‘ಬಟರ್ ಚಿಕನ್ ಗೋಲ್ಗಪ್ಪಾ’ ಹೊಸ ಹೆಸರು ಕೇಳಿ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಬಟರ್ ಚಿಕನ್ ಗೋಲ್ಗಪ್ಪಾ
Updated By: shruti hegde

Updated on: Sep 28, 2021 | 10:40 AM

ಈಗಿನ ಜನರು ಸಾಮಾನ್ಯವಾಗಿ ಹೊಸ ಹೊಸ ಪ್ರಯತ್ನದಲ್ಲಿ ಹೊಸ ರುಚಿಯ ಆಹಾರವನ್ನು ಸವಿಯಲು ಇಷ್ಟಪಡುವುದಂತೂ ನಿಜ. ಅಂಥಹ ಹೊಸ ಪ್ರಯತ್ನದಲ್ಲಿ ತಯಾರಿಸಿದ ವಿವಿಧ ತಿಂಡಿಗಳು ಹಲವರಿಗೆ ಇಷ್ಟವಾಗಿದ್ದರೆ, ಇನ್ನು ಕೆಲವರು ಮೂಗು ಮುರಿಯುತ್ತಾರೆ. ಇತ್ತೀಚೆಗಂತೂ ಹೊಸ ಹೊಸ ರೆಸಿಪಿಗಳು ವೈರಲ್ ಆಗುತ್ತವೇ ಇದೆ. ಇದೀಗ ವೈರಲ್ ಆದ ಬಟರ್ ಚಿಕನ್ ಗೋಲ್ಗಪ್ಪಾ ಹೆಸರು ಕೇಳಿದ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ನೋಡಿ.

ಬಟರ್ ಚಿಕನ್ ಗೋಲ್ಗಪ್ಪಾ ಎಂಬ ಸ್ನ್ಯಾಕ್ಸ್​ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ದೆಹಲಿಯ ಸ್ಟ್ರೀಟ್​ ಫುಡ್​ನಲ್ಲಿ ಸಿಗುವ ಹೊಸ ರೆಸಿಪಿ. ಹೆಸರೇ ಸೂಚಿಸುವಂತೆ ಇದು ಚಿಕನ್​ನಿಂದ ತಯಾರಾಗುವ ಸ್ನ್ಯಾಕ್ಸ್​.

ಸಾಮಾನ್ಯವಾಗಿ ಹೊಸ ಹೊಸ ಥರಹದ ತಿಂಡಿಗಳನ್ನು ಸವಿಯಲು ಜನರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜತೆಗೆ ರೆಸಿಪಿಗಳನ್ನು ತಯಾರಿಸಲು ಹೆಚ್ಚು ಉತ್ಸುಕರಾಗಿಯೂ ಇರುತ್ತಾರೆ. ಆದರೆ ಕೆಲವು ಕಾರಣಗಳಿಂದ ಆಹಾರ ವ್ಯವಸ್ಥೆ ಹೆಚ್ಚು ಇಷ್ಟವಾಗುವುದಿಲ್ಲ. ಬಟರ್ ಚಿಕನ್ ಗೋಲ್ಗಪ್ಪಾ ಅಷ್ಟು ಇಷ್ಟವಾಗಿಲ್ಲ ಎಂಬ ಪ್ರತಿಕ್ರಿಯೆ ನೆಟ್ಟಿಗರಿಂದ ಬರುತ್ತಿದೆ.

ಸ್ಪಷ್ಟ ಕಾರಣಗಳಿಂದ ಟ್ವಿಟರ್​ನಲ್ಲಿ ಬಟರ್ ಚಿಕನ್ ಗೋಲ್ಗಪ್ಪಾ ವೈರಲ್ ಆಗಿದೆ. ಬಳಿಕ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಗೋಲ್ಗಪ್ಪಾ ಎಲ್ಲರಿಗೂ ಇಷ್ಟವಾಗುವ ತಿನಿಸು. ಇದರ ಹೊಸ ಪ್ರಯೋಗದಲ್ಲಿ ಚಿಕನ್​ ಸೇರಿಸಲಾಗಿದೆ. ಕೆಲವು ಬಾರಿ ವಿಲಕ್ಷಣ ಕಾಂಬಿನೇಷನ್​ಗಳ ರುಚಿ ಸವಿಯಲು ಇಷ್ಟವಾಗುವುದಿಲ್ಲ. ಹಾಗಾಗಿ ಹಲವರು ಈ ಹೊಸ ರೆಸಿಪಿಗೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿಲ್ಲ.

ಇದನ್ನೂ ಓದಿ:

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

Viral News: 61 ವರ್ಷದ ವೃದ್ದೆಯನ್ನು ಮದುವೆಯಾದ 24 ವರ್ಷದ ಯುವಕ; ವಿವಾಹದ ಸಂಭ್ರಮ ಟಿಕ್​ ಟಾಕ್​ನಲ್ಲಿ ಲೈವ್​

(Viral news butter chicken golgappa goes viral)