Viral News : ಪಿವಿಆರ್ ಎಂದಾಕ್ಷಣ ಸಿನೆಮಾದ ಟಿಕೆಟ್ ದರದ ಜೊತೆ ಅಲ್ಲಿಯ ದುಬಾರಿ ಪಾಪ್ಕಾರ್ನ್, ಸಮೋಸಾ, ಚಹಾ, ಕಾಫಿ, ಚಿಪ್ಸ್, ಕೋಲಾ ಥಟ್ಟನೆ ನೆನಪಾಗುತ್ತದೆ ಅಲ್ಲವೆ? ಆದರೆ ಜನರ ತುರ್ತು ಅವಶ್ಯಕತೆಗೆ ಬೇಕಾದ ಸಾಮಾನುಗಳು ಅಲ್ಲಿ ದೊರೆಯುವುದಿಲ್ಲವೆಂಬ ಕೂಗು ಇದ್ದರೂ ಅದನ್ನು ಬಹಿರಂಗಪಡಿಸಿದ್ದು ಕಡಿಮೆ. ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ. ‘ಪಿವಿಆರ್ನಲ್ಲಿ ಸಿನೆಮಾ ನೋಡಲು ಹೋದಾಗ ನನ್ನ ಗೆಳತಿಗೆ ಅಕಸ್ಮಾತ್ ಆಗಿ ಮುಟ್ಟಾಯಿತು. ಆದರೆ ಪಿವಿಆರ್ನಲ್ಲಿ ಸ್ಯಾನಿಟರಿ ಪ್ಯಾಡ್ ಸಿಗಲಿಲ್ಲ.’ ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯಸೇವೆಗಳಿಗೆ ಸಂಬಂಧಿಸಿದ ಸೌಲಭ್ಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
This is just a random story but it made me think ? I was at PVR this morning for a movie with a friend. She got her period randomly and couldn’t find any sanitary pads or products at PVR.
ಇದನ್ನೂ ಓದಿ— peanut?? (@krispycrabb) January 29, 2023
ಪಿವಿಆರ್ನ ಶೌಚಾಲಯ ಸಿಬ್ಬಂದಿಗೆ ಈ ವಿಷಯವಾಗಿ ಸಹಾಯ ಮಾಡಬಹುದೇ ಎಂದು ಕೇಳಿದೆವು. ಆದರೆ ಅವರು ಸಹಕರಿಸಲಿಲ್ಲ. ಆರೋಗ್ಯಸೇವೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಂಭೀರವಾಗಿ ಪರಿಗಣಿಸಬೇಕಲ್ಲವೆ ನಾವು ಇನ್ನೂ ಅದೆಷ್ಟು ಹಿಂದುಳಿದಿದ್ದೇವೆ? ಬದಲಾವಣೆ ಮತ್ತು ಅಭಿವೃದ್ಧಿ ಎನ್ನುವುದು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಯಾಕೆ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ ಎಂದು ಆಕೆ ಕೇಳಿದ್ದಾರೆ. ಈ ಟ್ವೀಟ್ ಅನ್ನು ಪಿವಿಆರ್, ಆರೋಗ್ಯ ಸಚಿವಾಲಯ ಮತ್ತ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ : ‘ಎಮ್ಮಿಗೆ ತಾ ಭಾರತದಾಗ ಇದ್ದೀನಂತೂ ಗೊತ್ತಿಲ್ಲ, ಭಾರತಕ್ಕ ಸ್ವಾತಂತ್ರ್ಯ ಸಿಕ್ಕದಂತೂ ಗೊತ್ತಿಲ್ಲ’
ನೆಟ್ಟಿಗರನ್ನು ಈ ಪೋಸ್ಟ್ ಬಹುವಾಗಿ ಗಮನ ಸೆಳೆದಿದೆ. ನೂರಾರು ಜನರು ಇದಕ್ಕೆ ಸಂಬಂಧಿಸಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ವಿಮಾನ ನಿಲ್ದಾಣಗಳಲ್ಲಿಯೂ ಕೆಲ ಸ್ಥಳಗಳಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆಯೇ ಇಲ್ಲ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ಪಿವಿಆರ್ನಲ್ಲಿ ಸೇಬು ಕತ್ತರಿಸಲು ಚಾಕೂ ಸಿಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಆರೋಗ್ಯ ಸಂಬಂಧಿ ವಿಷಯಗಳು ಯಾವಾಗಲೂ ಸವಾಲೇ. ಇನ್ನು ಅದೆಷ್ಟೋ ಪ್ರಸಿದ್ಧ ಸಾರ್ವಜನಿಕ ತಾಣಗಳು ವಿಶೇಷ ಚೇತನರಿಗೆ ಅನಾನುಕೂಲಕರವಾಗಿಯೇ ಇವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:31 pm, Tue, 31 January 23