ಬರೋಬ್ಬರಿ 142 ಕೋಟಿ ಮೌಲ್ಯದ ನೋಟುಗಳು ಕಪಾಟಿನಲ್ಲಿ ತುಂಬಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹೈದರಾಬಾದ್ನ ಔಷಧೀಯ ಕಂಪನಿಯ ರೇಡ್ ಬಳಿಕ ಸಿಕ್ಕ ಹಣ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಕಪಾಟಿನಲ್ಲಿ ತುಂಬಿ ತುಳುಕುತ್ತಿದ್ದ ಬರೋಬ್ಬರಿ 142 ಕೋಟಿ ಮೌಲ್ಯದ ಹಣವನ್ನು ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಔಷಧಿ ತಯಾರಿಕೆ ಕಂಪನಿಯ ಮೇಲೆ ಐಟಿ ರೇಡ್ ನಡೆದಿದ್ದು ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತ ಹೇಳಿಕೆಯ ಪ್ರಕಾರ, ಐಟಿ ರೇಡ್ನಲ್ಲಿ ಹಣವನ್ನು ಔಷಧೀಯ ಬಾಕ್ಸ್ಗಳಲ್ಲಿ , ಕಪಾಟಿನಲ್ಲಿ ತುಂಬಿಟ್ಟಿರುವುದು ತಿಳಿದು ಬಂದಿದೆ.
IT raid on a Pharma company in Hyderabad revealed this. I am assuming they have kept clothes in the locker pic.twitter.com/k15SnYdwNB
— Gabbbar (@GabbbarSingh) October 10, 2021
ಟ್ಟಿಟರ್ ಬಳಕೆದಾದರು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಹೈದರಾಬಾದ್ನ ಔಷಧೀಯ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ನಿಂದ ಇದು ಬಹಿರಂಗವಾಗಿದೆ. ಈ ಫೋಟೋ ನೋಡಿದ ತಕ್ಷಣ ಲಾಕರ್ನಲ್ಲಿ ಬಟ್ಟೆಗಳನ್ನು ಇಟ್ಟುಕೊಂಡಿರಬೇಕು ಎಂದು ಅಂದಕೊಂಡೆ! ಎಂಬ ಶೀರ್ಷಿಕೆ ನೀಡುವ ಮೂಲಕ ಫೋಟೋ ಹರಿಬಿಟ್ಟಿದ್ದಾರೆ.
ಏತನ್ಮಧ್ಯೆ, ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕೆಲವು ಬಳಕೆದಾರರು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ಹಾಸ್ಯ ಮಾಡಿದ್ದಾರೆ. ಇಲಾಖೆಯ ಔಷಧೀಯ ತಯಾರಿಕಾ ಕಂಪನಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:
Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು
Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?