ನಾಯಿ, ಬೆಕ್ಕುಗಳನ್ನು ತಮ್ಮ ಮನೆಯವರ ಹಾಗೇ ನೋಡಿಕೊಳ್ಳುವ ಅದೆಷ್ಟೋ ಪ್ರಾಣಿಪ್ರಿಯರಿದ್ದಾರೆ. ನಾಯಿ, ಬೆಕ್ಕುಗಳಿಗೂ ಮನೆಯಲ್ಲಿ ರೂಮ್ ಮಾಡಿ ನೋಡಿಕೊಳ್ಳುವವರು ಬಹಳ ಜನರಿದ್ದಾರೆ. ಗುಜರಾತ್ನಲ್ಲಿರುವ ಪ್ರಾಣಿಪ್ರಿಯರೊಬ್ಬರು ಬೆಕ್ಕುಗಳಿಗೆಂದೇ ಬಂಗಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮನೆಗೆ ಕ್ಯಾಟ್ ಗಾರ್ಡನ್ ಎಂದು ಹೆಸರಿಟ್ಟಿದ್ದಾರೆ. ಈ ಕ್ಯಾಟ್ ಗಾರ್ಡನ್ 500 ಚದರ ಯಾರ್ಡ್ಸ್ ಜಾಗದಲ್ಲಿ ನಿರ್ಮಾಣವಾಗಿದೆ.
ಈ ಮನೆಯಲ್ಲಿ ಆಧುನಿಕ ಸೌಲಭ್ಯಗಳಾದ ಎಸಿ ರೂಂ, ಈಜು ಕೊಳ, ಅಡುಗೆ ಮನೆ, ಹೊರಗೆ ಗಾರ್ಡನ್ ಎಲ್ಲವೂ ಇದೆ. ಗುಜರಾತ್ನ ಕಚ್ನಲ್ಲಿ ವಾಸವಾಗಿರುವ ಉಪೇಂದ್ರ ಗೋಸ್ವಾಮಿ ಬೆಕ್ಕುಗಳಿಗೆಂದೇ ಈ ಮನೆಯನ್ನು ನಿರ್ಮಿಸಿದ್ದಾರೆ. 2017ರಲ್ಲೇ ಈ ಮನೆಯನ್ನು ನಿರ್ಮಿಸಲಾಗಿದ್ದು, ಈ ಮನೆಯಲ್ಲಿ 200 ಬೆಕ್ಕುಗಳಿದ್ದಾವೆ. ಉಪೇಂದ್ರ ಅವರ ತಂಗಿಯ ನೆನಪಿನಲ್ಲಿ ಈ ಕ್ಯಾಟ್ ಗಾರ್ಡನ್ ನಿರ್ಮಿಸಲಾಗಿದೆ. ಉಪೇಂದ್ರ ಅವರ ತಂಗಿ 1994ರಲ್ಲಿ ಮೃತಪಟ್ಟಿದ್ದಾರೆ. ಆಗಿನಿಂದಲೂ ಉಪೇಂದ್ರ ಅವರು ತಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕುತ್ತಿದ್ದಾರೆ. ಬಳಿಕ 2017ರಲ್ಲಿ ಬೆಕ್ಕುಗಳಿಗೆ ಮನೆಯನ್ನು ನಿರ್ಮಿಸಿದರು.
ನನ್ನ ತಂಗಿಯ ಹುಟ್ಟುಹಬ್ಬವನ್ನು ಈಗಲೂ ಪ್ರತಿವರ್ಷ ಆಚರಿಸುತ್ತೇವೆ. ಆಕೆ ಸಾವನ್ನಪ್ಪಿದ ಮರು ವರ್ಷವೂ ಆಕೆಯ ಹುಟ್ಟುಹಬ್ಬವನ್ನು ನಾವೆಲ್ಲ ಸೇರಿ ಆಚರಿಸುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಬಂಗಲೆಯೊಳಗೆ ಬಂದ ಬೆಕ್ಕು ಆಕೆಯ ಹುಟ್ಟುಹಬ್ಬದ ಕೇಕ್ ತಿಂದಿತು. ಅಂದಿನಿಂದ ಆ ಬೆಕ್ಕು ನಮ್ಮೊಂದಿಗೇ ವಾಸವಾಗಿತ್ತು. ನನ್ನ ತಂಗಿಗೆ ಬೆಕ್ಕು ಬಹಳ ಇಷ್ಟವಿದ್ದುದರಿಂದ ಆಕೆಯೇ ಬೆಕ್ಕಿನ ರೂಪದಲ್ಲಿ ನಮ್ಮ ನೊತೆ ವಾಸಿಸುತ್ತಿದ್ದಾಳೆ ಎಂದು ನಾವು ಭಾವಿಸಿದ್ದೇವೆ ಎಂದು ಉಪೇಂದ್ರ ಹೇಳಿದ್ದಾರೆ.
Gujarat: A Kutch-based man, Upendra Goswami established a home for cats named ‘Cat garden’ spread in 500 sq yard area
“It was established in 2017. Now we’ve over 200 cats here. We treat them as part of our family. We’ve made 16 cottages with some other facilities,” he said pic.twitter.com/z0nZ8IqBKt
— ANI (@ANI) August 20, 2021
ಈ ಕ್ಯಾಟ್ ಗಾರ್ಡನ್ನಲ್ಲಿ ಎಸಿ ರೂಂಗಳಿವೆ, ಜೊತೆಗೆ ಥಿಯೇಟರ್ ಕೂಡ ಇದೆ. ಈ ಮನೆಯಲ್ಲಿ 4 ಎಸಿ ರೂಂಗಳಿವೆ ಹಾಗೂ 16 ಕಾಟೇಜ್ಗಳಿವೆ. ಬೆಕ್ಕುಗಳಿಗೆ ಬೆಡ್ ಮತ್ತು ಮಂಚದ ವ್ಯವಸ್ಥೆಯೂ ಇದೆ. ಬಾತ್ರೂಂನಲ್ಲಿ ಬೆಕ್ಕುಗಳಿಗೆ ಶವರ್ ವ್ಯವಸ್ಥೆಯೂ ಇದೆ. ಬೆಕ್ಕುಗಳಿಗೆಂದೇ ಇರುವ ಮಿನಿ ಥಿಯೇಟರ್ ನಿರ್ಮಿಸಲಾಗಿದ್ದು, ಸಂಜೆಯ ವೇಳೆ ಬೆಕ್ಕುಗಳಿಗೆ ಅನಿಮಲ್ ಶೋಗಳನ್ನು ಹಾಕಲಾಗುತ್ತದೆ. ದಿನಕ್ಕೆ ಮೂರು ವೇಳೆ ಬೆಕ್ಕುಗಳಿಗೆ ಆಹಾರ ನೀಡಲಾಗುತ್ತದೆ.
200 ಬೆಕ್ಕುಗಳಿಗೂ ವಾರಕ್ಕೊಮ್ಮೆ ವೈದ್ಯರಿಂದ ಚೆಕಪ್ ಮಾಡಿಸಲಾಗುತ್ತದೆ. ಉಪೇಂದ್ರ ಗೋಸ್ವಾಮಿ ಅವರ ಹೆಂಡತಿ ಕೂಡ ಶಾಲಾ ಶಿಕ್ಷಕಿಯಾಗಿದ್ದು, ಬೆಕ್ಕುಗಳನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಬೆಕ್ಕುಗಳನ್ನು ನೋಡಿಕೊಳ್ಳಲು ತಿಂಗಳಿಗೆ 1.5 ಲಕ್ಷ ರೂ. ವೆಚ್ಚವಾಗುತ್ತದೆ. ಆ ವೆಚ್ಚವನ್ನು ಈ ದಂಪತಿಯೇ ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುತ್ತಾರೆ.
ಇದನ್ನೂ ಓದಿ: Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!
Viral News: 40 ವರ್ಷ ಹಿಂದಿನ ಕೇಕ್ ತುಂಡು 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!
(Viral News Gujarat Man Opens Cat Garden With AC Rooms and Mini Theatre to Raise 200 Cats)
Published On - 9:21 pm, Sat, 21 August 21