ಮನೆಗಳಲ್ಲಿ ಎಲ್ಲಿಂದಲಾದರೂ ಹಾವು, ಚೇಳು, ಹಲ್ಲಿ, ಜಿರಲೆ ಬಂದರೂ ಕೆಲವು ಜನರು ಕಂಗಾಲಾಗುತ್ತಾರೆ, ಓಡಿಹೋಗುತ್ತಾರೆ. ಆದರೆ, ಈ ಪ್ರದೇಶದಲ್ಲಿ ಕೆಲವೊಮ್ಮೆ ಹುಲಿಗಳು ಮತ್ತು ಸಿಂಹಗಳು ಕೂಡ ಕಾಡಿನ ಸಮೀಪವಿರುವ ಮನೆಗಳಿಗೆ ನುಸುಳುವುದು ಸಾಮಾನ್ಯವಾಗಿದೆ. ಇಂತಹ ಆಘಾತಕಾರಿ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದೇ ರೀತಿ ಇತ್ತೀಚೆಗೆ ಮೊಸಳೆಯೊಂದರ ವೀಡಿಯೋ ಹರಿದಾಡುತ್ತಿದೆ. ಮನೆಯೊಳಗೆ ಯುವತಿ ಸೋಫಾದಲ್ಲಿ ಮಲಗಿದ್ದಾಗ ಮೊಸಳೆಯೊಂದು ಏಕಾಏಕಿ ಆಕೆಯ ಸಮೀಪಕ್ಕೆ ಬಂದಿದೆ. ಕೊನೆಗೆ ಏನಾಯ್ತು ನೋಡಿ…
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಸ್ಥಳೀಯ ಪ್ರದೇಶಕ್ಕೆ ಸೇರಿದ ಮನೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ತನ್ನ ಮನೆಯ ಸೋಫಾ ಮೇಲೆ ಮಲಗಿದ್ದಾಗ ಅನಿರೀಕ್ಷಿತ ಘಟನೆ ನಡೆದಿದೆ. ಒಂದು ದೊಡ್ಡ ಮೊಸಳೆ ಮನೆಯೊಳಗೆ ಬಂದು ನಿಧಾನವಾಗಿ ಅವಳ ಸೋಫಾಕ್ಕೆ ಬಂದಿತು. ಆಕೆಗೆ ಅನುಮಾನ ಬಂದು ಹಿಂತಿರುಗಿ ನೋಡಿ ಕಿರುಚುತ್ತಾಳೆ. ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾಳೆ. ಈ ದೃಶ್ಯ ಮನೆಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಕೂಗಿಗೆ ಮನೆಯವರೆಲ್ಲಾ ಅಲ್ಲಿ ಸೇರಿದ್ದಾರೆ.
ಇದನ್ನೂ ಓದಿ: Viral Video: ಹಾವನ್ನು ಇಡಿಯಾಗಿ ನುಂಗಿ ಮತ್ತೆ ಹೊರಹಾಕಿದ ಬೃಹತ್ ನಾಗರಹಾವು; ಮೈ ಜುಮ್ಮೆನಿಸುವ ವಿಡಿಯೋ ವೈರಲ್
ಮೊಸಳೆ ಸೋಫಾದತ್ತ ಬಂದು ನಿಧಾನವಾಗಿ ಸೋಫಾ ಏರಲು ಪ್ರಯತ್ನಿಸಿತು. ಮೊಸಳೆಯ ಹಿಂದೆ ಒಬ್ಬ ಯುವಕನೂ ಇದ್ದಾನೆ. ಬಹಳ ಹೊತ್ತು ಮೊಸಳೆ ಮನೆಯಲ್ಲಿ ಗಲಾಟೆ ಮಾಡಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ