ಇದನ್ನು ಆಕ್ಸಿಡೆಂಟ್ ಎನ್ನುತ್ತೀರೋ ಅಥವಾ ಹಣೆಬರಹ ಎನ್ನುತ್ತೀರೋ ನಿಮಗೆ ಬಿಟ್ಟಿದ್ದು. ಅದೃಷ್ಟ ಚೆನ್ನಾಗಿದ್ದರೆ ಹುಲಿ ಬಾಯಿಂದ ಬೇಕಾದರೂ ತಪ್ಪಿಸಿಕೊಂಡು ಬರಬಹುದು, ಅದೃಷ್ಟ ಸರಿಯಿಲ್ಲದಿದ್ದರೆ ಸಾಯಗಲು ಒಂದು ಗುಂಡು ಸೂಜಿ ಸಾಕು ಎಂಬ ಮಾತೊಂದಿದೆ. ಅದೇ ರೀತಿ ಹಲಸಿನ ಹಣ್ಣೊಂದು (Jackfruit) ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮವಾಗಿ ಒಳಗೆ ಕುಳಿತಿದ್ದ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವುದು ಅತ್ಯಂತ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಕೊಟ್ಟಾಯಂನ ಜಿಲ್ಲೆಯ ಕಾಪಿಕ್ಕಾಡ್ನವರಾದ 55 ವರ್ಷದ ಸುದರ್ಶನ್ ಆಟೋ ರಿಕ್ಷಾ ಓಡಿಸಿಯೇ ಬದುಕು ಕಟ್ಟಿಕೊಂಡವರು. ಹಲವಾರು ವರ್ಷಗಳಿಂದ ಆಟೋ ಓಡಿಸುತ್ತಿರುವ ಅವರು ಬೆಳಗ್ಗೆ ಯಾರ ಮುಖ ನೋಡಿದ್ದರೋ ಗೊತ್ತಿಲ್ಲ ಹಲಸಿನ ಹಣ್ಣೊಂದು ಅವರ ಶತ್ರುವಾಗಿ ಮೇಲಿಂದ ಬಿದ್ದಿತ್ತು. ಹಾಗಂತ ಕೆಳಗೆ ನಿಂತಾಗ ತಲೆ ಮೇಲೆ ಹಲಸಿನ ಕಾಯಿ ಬಿದ್ದು ಗಾಯವಾದರೆ ಅದೊಂದು ಕತೆ. ಆದರೆ, ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋದ ಮೇಲೆ ಪಕ್ಕದಲ್ಲಿದ್ದ ಮರದಿಂದ ದೊಡ್ಡದಾದ ಹಲಸಿನ ಹಣ್ಣು ಬಿದ್ದಿದೆ. ಆಟೋದ ಮೇಲೆ ವೇಗವಾಗಿ ಬಿದ್ದ ಹಲಸಿನಹಣ್ಣು ಆಟೋ ಚಲಾಯಿಸುತ್ತಿದ್ದ ಸುದರ್ಶನ್ ಅವರ ತಲೆಗೆ ಬಡಿದಿದೆ. ಆ ರಭಸಕ್ಕೆ ಆಟೋದಿಂದ ಕೆಳಗೆ ಬಿದ್ದ ಸುದರ್ಶನ್ ಅವರಿಗೆ ಪ್ರಜ್ಞೆ ತಪ್ಪಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ತಲೆಗೆ ಜೋರಾದ ಏಟಾಗಿದೆ.
ಸುದರ್ಶನ್ ಅವರ ಆಟೋದಲ್ಲಿ ಆ ವೇಳೆ ಯಾವುದೇ ಪ್ರಯಾಣಿಕರೂ ಇರಲಿಲ್ಲಿ. ಪ್ರಯಾಣಿಕರನ್ನು ಅವರ ಮನೆಗೆ ಬಿಟ್ಟು ತನ್ನ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ಸೀಟ್ ಮೇಲ್ಭಾಗದಲ್ಲೇ ಬಿದ್ದ ಹಲಸಿನ ಹಣ್ಣ ಸೀದಾ ಆಟೋ ರಿಕ್ಷಾದ ಮೇಲ್ಭಾಗದಿಂದ ಸುದರ್ಶನ್ ಅವರ ತಲೆಗೆ ಬಡಿದಿದೆ. ಮರದಿಂದ ತಲೆ ಮೇಲೆ ಹಲಸಿನ ಹಣ್ಣು ಬಿದ್ದ ರಭಸಕ್ಕೆ ಸುದರ್ಶನ್ ಪ್ರಜ್ಞೆ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ರೀತಿಯಾಗಿಯೂ ಅಪಘಾತ ಸಂಭವಿಸುತ್ತಾ? ಎಂದು ಅಲ್ಲಿದ್ದವರಿಗೆ ಶಾಕ್ ಆಗುವ ರೀತಿಯಲ್ಲಿ ಹಲಸಿನ ಹಣ್ಣೊಂದು ಅವಾಂತರ ಸೃಷ್ಟಿಸಿದೆ.
ಸುದರ್ಶನ್ ಕೆಳಗೆ ಬಿದ್ದ ಕೂಡಲೆ ಆಟೋ ಕೂಡ ಕೊಂಚ ದೂರ ಹೋಗಿ ಮಗುಚಿಬಿದ್ದಿದೆ. ಆ ಆಟೋದಿಂದ ಬೇರೆ ಯಾರಿಗೂ ತೊಂದರೆಯಾಗಿಲ್ಲ. ಸುದರ್ಶನ್ ಅವರ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪಿಕ್ಕಾಡ್ ಸುತ್ತಮುತ್ತಲೂ ರಸ್ತೆ ಬದಿಯಲ್ಲಿ ಹಲಸಿನ ಮರಗಳು ಸಾಮಾನ್ಯ. ಆದರೆ, ಅದರಿಂದ ಈ ರೀತಿಯ ಅವಘಡ ಸಂಭವಿಸಿದ್ದು ಇದೇ ಮೊದಲು.
ಇದನ್ನೂ ಓದಿ: Viral News: ಎಟಿಎಂ ದರೋಡೆ ಮಾಡಲು ಹೋಗಿ ಮಷಿನ್ ಹಿಂದೆ ಸಿಕ್ಕಿಕೊಂಡ ಕಳ್ಳ; ಆಮೇಲೇನಾಯ್ತು?
Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ
(Viral News: Kerala Auto Driver Injured in Accident After Jackfruit Hits Him On Head from Tree)