ಉತ್ತರಾಖಂಡ ಪರ್ವತ ಪ್ರದೇಶದಲ್ಲಿ ಭೂಕುಸಿತ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಕೆಲ ಸಮಯ ದಾರಿ ಮಧ್ಯೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಮೇಲಿನಿಂದ ಬಂಡೆ ಕಲ್ಲುಗಳು ದಾರಿ ಮಧ್ಯೆ ಬಿದ್ದವು.
ಉತ್ತರಾಖಂಡದ ರಾಷ್ಟ್ರೀಯ ಹೆದ್ದಾರಿ 58ರಲ್ಲಿ ನಡೆದ ಭೂಕುಸಿತದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರ್ವತ ಪ್ರದೇಶದಲ್ಲಿರುವ ರಿಷಿಕೇಶ ಮತ್ತು ಶ್ರೀನಗರಕ್ಕೆ ಹಾದು ಹೋಗುವ ದಾರಿಯಲ್ಲಿನ ಪರ್ವತ ಪ್ರದೇಶದಲ್ಲಿ ಭೂಕುಸಿತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಕೆಲ ಸಮಯ ದಾರಿ ಮಧ್ಯೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಮೇಲಿನಿಂದ ಬಂಡೆ ಕಲ್ಲುಗಳು ದಾರಿ ಮಧ್ಯೆ ಬಿದ್ದವು. ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಒಮ್ಮೆಲೆ ಭಯಗೊಂಡಿದ್ದಾರೆ. ಭೀಕರ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ.
#WATCH | Uttarakhand: National Highway 58 (Rishikesh-Srinagar) near Tota Ghati closed after boulders roll downhill due to landslide; vehicular movement affected. pic.twitter.com/X1b9sMTcNx
— ANI (@ANI) August 10, 2021
ಉತ್ತರಾಖಂಡದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಹಲವಾರು ಆಘಾತಕಾರಿ ಘಟನೆಗಳು ನಡೆದಿವೆ. ಕಳೆದ ಶನಿವಾರ ಉತ್ತರಾಖಂಡ ಜೋಶಿಮಠದಲ್ಲಿ ಹೋಟೆಲ್ನ ಒಂದು ಭಾಗ ಕುಸಿದಿತ್ತು. ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡಿದ್ದರಿಂದ ಹೋಟೆಲ್ನಲ್ಲಿದ್ದ ಗ್ರಾಹಕರನ್ನು ಸಿಬ್ಬಂದಿ ಹೊರ ಕಳುಹಿಸಿದ್ದರು.
ಇದನ್ನೂ ಓದಿ:
Uttara Kannada Flood: ಉತ್ತರ ಕನ್ನಡ: ಪ್ರವಾಹ, ಭೂಕುಸಿತದಿಂದ 737 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಕ್ಕೆ ಹಾನಿ
Published On - 12:50 pm, Tue, 10 August 21