ಹಣಕ್ಕಾಗಿ ಗುಟ್ಟಾಗಿ ವೀರ್ಯ ದಾನ ಮಾಡಿದ ಗಂಡ; ವಿಷಯ ತಿಳಿದು ಡೈವೋರ್ಸ್​ಗೆ ಪಟ್ಟು ಹಿಡಿದ ಹೆಂಡತಿ

| Updated By: ಸುಷ್ಮಾ ಚಕ್ರೆ

Updated on: Apr 06, 2022 | 2:37 PM

ಕಾಲೇಜಿನಲ್ಲಿದ್ದಾಗ ದುಡ್ಡಿಗಾಗಿ ವೀರ್ಯ ದಾನ ಮಾಡಿದ್ದ ಪುರುಷನೊಬ್ಬ ಆರ್ಥಿಕ ಸಂಕಷ್ಟ ಎದುರಾದಾಗಲೆಲ್ಲ ವೀರ್ಯಾಣು ದಾನ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದ. ಆತನ ಗೆಳೆಯರಿಂದ ಈಗ ವಿಷಯ ತಿಳಿದ ಹೆಂಡತಿ ಆಘಾತಕ್ಕೊಳಗಾಗಿದ್ದಾಳೆ.

ಹಣಕ್ಕಾಗಿ ಗುಟ್ಟಾಗಿ ವೀರ್ಯ ದಾನ ಮಾಡಿದ ಗಂಡ; ವಿಷಯ ತಿಳಿದು ಡೈವೋರ್ಸ್​ಗೆ ಪಟ್ಟು ಹಿಡಿದ ಹೆಂಡತಿ
ಸಾಂದರ್ಭಿಕ ಚಿತ್ರ
Follow us on

ಗಂಡ-ಹೆಂಡತಿ ನಡುವೆ ಯಾವ ರಹಸ್ಯವೂ ಇರಬಾರದು. ಅವರಿಬ್ಬರ ನಡುವಿನ ಸಣ್ಣಪುಟ್ಟ ರಹಸ್ಯಗಳು ಕೊನೆಗೊಂದು ದಿನ ಅವರ ಸಂಬಂಧಕ್ಕೆ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಗೆ ಹೇಳದೆ ಹಲವು ವರ್ಷಗಳ ಹಿಂದೆ ವೀರ್ಯ ದಾನ (Sperm Donate) ಮಾಡಿರುವುದನ್ನು ಪತ್ತೆ ಹಚ್ಚಿದ ನಂತರ ಆತನ ಪತ್ನಿ ವಿಚ್ಛೇದನಕ್ಕೆ (Divorce)  ಅರ್ಜಿ ಸಲ್ಲಿಸಿದ್ದಾಳೆ. ತಾನು ವೀರ್ಯ ದಾನಿಯಾಗಿದ್ದೇನೆ ಎಂಬ ಸತ್ಯವನ್ನು ಮರೆಮಾಚುವ ನಿರ್ಧಾರ ಹೆಂಡತಿಗೆ ಇಷ್ಟವಾಗಲಿಲ್ಲ. ಈ ಬಗ್ಗೆ ಆ ವ್ಯಕ್ತಿ ರೆಡ್ಡಿಟ್​ ಪೋಸ್ಟ್‌ನಲ್ಲಿ ತನ್ನ ಕತೆಯನ್ನು ಹಂಚಿಕೊಂಡಿದ್ದಾರೆ. ಅದು ವೈರಲ್ ಆಗಿದೆ.

ನಾನು ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸುವ ಸಲುವಾಗಿ ನಾನು ವೀರ್ಯ ದಾನ ಮಾಡಿದ್ದೆ. ಈ ವಿಷಯವನ್ನು ಯಾರಿಗೂ ಹೇಳಿಲಿಲ್ಲ. ಆರು ವರ್ಷಗಳ ಹಿಂದೆ ಮದುವೆಯಾಗಿ, ಮಕ್ಕಳೊಂದಿಗೆ ಈಗ ಸುಖವಾಗಿದ್ದು, ನಾನು ಮದುವೆಯಾಗುವ ಮೊದಲು ಹಳೆಯ ಸಹಪಾಠಿಗೆ ವೀರ್ಯ ದಾನ ಮಾಡಿದ್ದೆ. ಆ ವಿಷಯ ಈ ಗೊತ್ತಾಗಿದ್ದರಿಂದ ನನ್ನ ಹೆಂಡತಿ ಡೈವೋರ್ಸ್​ ಬಯಸಿದ್ದಾಳೆ ಎಂದು ಅವರು ಬರೆದುಕೊಂಡಿದ್ದಾರೆ.

ನಾನು ಕಾಲೇಜಿನಲ್ಲಿದ್ದಾಗ ವೀರ್ಯ ದಾನಿಯಾಗಿದ್ದೆ. ನಾನು ಮುಖ್ಯವಾಗಿ ಹಣ ಗಳಿಸಲು ಇದನ್ನು ಮಾಡಿದ್ದೆ. ಹಾಗೇ ಮಕ್ಕಳನ್ನು ಬಯಸುವ, ಆದರೆ, ಅದಕ್ಕಾಗಿ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ವೀರ್ಯ ದಾನ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಕಾಲೇಜು ಮುಗಿದ ಬಳಿಕ ವೀರ್ಯಾಣು ದಾನ ಮಾಡುವುದನ್ನು ಕೂಡ ನಿಲ್ಲಿಸಿದ್ದಾಗಿ ಅವರು ಹೇಳಿದ್ದಾರೆ. ಆದರೆ, ಕೆಲವು ವರ್ಷಗಳ ನಂತರ ಮತ್ತೆ ಹಣಕಾಸಿನ ಸಮಸ್ಯೆ ಎದುರಾದಾಗ ಮತ್ತೆ ವೀರ್ಯ ದಾನ ಮಾಡಲು ಆರಂಭಿಸಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ಈ ವಿಷಯವನ್ನು ನನ್ನ ಹೆಂಡತಿಯಿಂದ ಮುಚ್ಚಿಟ್ಟಿದ್ದೆ. ಆದರೆ, ನನ್ನ ಗೆಳೆಯರಿಂದ ಆಕೆಗೆ ಈ ವಿಷಯ ತಿಳಿಯಿತು. ಇದರಿಂದ ಆಕೆ ಆಘಾತಕ್ಕೊಳಗಾದಳು. ನಾನು ನನ್ನ ಹೆಂಡತಿಗೆ ನಮ್ಮ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾವುದೇ ಮಕ್ಕಳನ್ನು ಹೊಂದಿಲ್ಲ ಎಂದು ಭರವಸೆ ನೀಡಲು ಪ್ರಯತ್ನಿಸಿದರೂ ಆಕೆ ನಾನು ನಂಬಿಕೆ ದ್ರೋಹ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಾವಿನಂಚಿನಲ್ಲಿರುವ ಗಂಡನಿಂದ ಗರ್ಭಿಣಿಯಾಗಬೇಕೆಂದ ಹೆಂಡತಿ; ವೀರ್ಯ ಸಂಗ್ರಹಿಸಲು ಹೈಕೋರ್ಟ್​ ಅನುಮತಿ

Health Tips: ಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿ