ಬೇಸಿಗೆ ವಿಪರೀತ ಸೆಖೆ, ಸಾಮಾನ್ಯವಾಗಿ ಜನರು ಕೋಲ್ಡ್ ನೀರು ಕುಡಿಯುವುದು, ಜ್ಯೂಸ್ ಕುಡಿಯುವ ಮೂಲಕ ತಮ್ಮ ದೇಹವನ್ನು ತಂಪಾಗಿರಿಸುವ ಪ್ರಯತ್ನ ಮಾಡುತ್ತಾರೆ. ಚಳಿಗಾಲದಲ್ಲಿ ಫ್ರಿಜ್ನ ಅವಶ್ಯಕತೆ ಅಷ್ಟಿಲ್ಲದಿದ್ದರೂ ಬೇಸಿಗೆಯಲ್ಲಿ ಬೇಕೇ ಬೇಕು.ವ್ಯಕ್ತಿಯೊಬ್ಬ ಐಸ್ಕ್ಯೂಬ್ಗಳನ್ನು ತೆಗೆದುಕೊಳ್ಳಲು ಫ್ರಿಜ್ ತೆರೆದಾಗ ಐಸ್ ಬದಲಿಗೆ ವ್ಯಕ್ತಿಗೆ ಬೆಂಕಿಯ ಉಂಡೆಗಳನ್ನು ಕಂಡು ಹೌಹಾರಿದ್ದಾರೆ.
ಫ್ರೀಜರ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವ್ಯಕ್ತಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ವಿಡಿಯೋವನ್ನು ವ್ಯಕ್ತಿಸ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಫ್ರೀಜ್ರನಲ್ಲಿ ಐಸ್ಕ್ಯೂಬ್ಗಳು ಇರುವ ಜಾಗದಲ್ಲಿ ಬೆಂಕಿಯ ಜ್ವಾಲೆ ಇತ್ತು. ಮನೆಯಲ್ಲಿ ಇದ್ದ ಫೈರ್ ಎಸ್ಟಿಂಗ್ವಿಷರ್ ಬಳಸಿ ಬೆಂಕಿ ನಂದಿಸಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Viral video: ಕರಡಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲರು! ಏನ್ ಆಯ್ತು ಗೊತ್ತಾ?
ಈ ಘಟನೆಯನ್ನು ವ್ಯಕ್ತಿ ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾರೆ, ಅದು ಭಾರತದಲ್ಲಿ ಬ್ಯಾನ್ ಆಗಿದೆ. ಕೇವಲ ಎರಡು ದಿನಗಳಲ್ಲಿ 53 ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದು ಬಹಳ ವಿಚಿತ್ರ ಸನ್ನಿವೇಶ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ