AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Met Gala 2023: ರೆಡ್​​​​​ ಕಾರ್ಪೆಟ್ ಮೇಲೆ ವಾಕ್ ಮಾಡಿದ ಜಿರಳೆ ವೀಡಿಯೊ ವೈರಲ್!

ನ್ಯೂಯಾರ್ಕ್ನ ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆದ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಜಿರಳೆ ಕಾಣಿಸಿಕೊಂಡು ಆಕರ್ಷಣೆಯ ಕೇಂದ್ರವಾಯಿತು. ಇದನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದ್ದು ಸಿಕ್ಕಾ ಪಟ್ಟೆ ವೈರಲ್ ಆಗಿದೆ, ಅಲ್ಲದೆ ಈ ವಿಡಿಯೋ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಶೇರ್ಗಳನ್ನು ಗಳಿಸಿದೆ.

Met Gala 2023: ರೆಡ್​​​​​  ಕಾರ್ಪೆಟ್ ಮೇಲೆ ವಾಕ್ ಮಾಡಿದ ಜಿರಳೆ ವೀಡಿಯೊ ವೈರಲ್!
Met Gala 2023Image Credit source: Mashable India
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on:May 02, 2023 | 6:37 PM

Share

ಫ್ಯಾಷನ್ ಪ್ರಪಂಚದ ಮೆಗಾ ಇವೆಂಟ್ ನಲ್ಲಿ ಒಂದಾದ ಮೆಟ್ ಗಾಲಾ(Met Gala) ಅತಿದೊಡ್ಡ ಫ್ಯಾಷನ್ ರಾತ್ರಿಯಾಗಿದೆ. ಹೆಚ್ಚಿನವರಿಗೆ ತಿಳಿದಿರುವಂತೆ, ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರತಿವರ್ಷ ಮೆಟ್ಗೆ ಹಾಜರಾಗಲು ಸೆಲೆಬ್ರಿಟಿಗಳಿಗೆ ವಿಶೇಷ ಆಹ್ವಾನಗಳನ್ನು ಕಳುಹಿಸಲಾಗುತ್ತದೆ. ಆದರೆ ಈ ವರ್ಷ, ಕಾರ್ಪೆಟ್ನಲ್ಲಿ ಆಹ್ವಾನಿಸದ ಅತಿಥಿಗಳ ಬದಲು ಆಮಂತ್ರಿಸದೆಯೇ ಬಂದ ಅತಿಥಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಲ್ಲದೆ ಬಯಸದೆಯೇ ವೈರೆಲ್ ಕೂಡ ಆಗಿದೆ.

ಯಾರದು ಅಂತೀರಾ? ಬೇರಾರು ಅಲ್ಲ ಜಿರಳೆ. ಈ ಬಾರಿ ರೆಡ್ ಕಾರ್ಪೆಟ್ ಮೇಲೆ ‘ಪಾದಾರ್ಪಣೆ’ ಮಾಡಿದ ಈ ವೀಡಿಯೊ ಈಗಾಗಲೇ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಮೂಲತಃ ಮೈಕ್ರೋ-ಬ್ಲಾಗಿಂಗ್ ಸೈಟ್ನಲ್ಲಿ ವೆರೈಟಿ ಪೋಸ್ಟ್ ಮಾಡಿದೆ. “ಜಿರಳೆ #MetGala ಬಂದಿದೆ” ಎಂದು ಪೋಸ್ಟ್ನ ಶೀರ್ಷಿಕೆ ನೀಡಲಾಗಿದೆ. ಜಿರಳೆ ಚಿತ್ರವನ್ನು ಕೆವಿನ್ ಮಜೂರ್ ಸೆರೆಹಿಡಿದಿದ್ದಾರೆ. ನಂತರ, ಜಿರಳೆ ಸಾವಿನ ಬಗ್ಗೆ ವೆರೈಟಿ ಕೂಡ ಟ್ವೀಟ್ ಮಾಡಿದೆ. #RIP” ಎಂದು ಪ್ರಕಟಣೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ‘ಗೋಲ್ಡ್ ಕುಲ್ಫಿ’ ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ

ಟ್ವಿಟ್ಟರ್ ಈ ವೀಡಿಯೊವನ್ನು ಹಂಚಿಕೊಂಡಿದ್ದು. ಜಿರಳೆಯ ಪಾದಾರ್ಪಣೆ ಈಗಾಗಲೇ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಈ ವಿಡಿಯೋ ಬಗ್ಗೆ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು , “ಓ , ಅವಳು ಯಾರು?” ಎಂದಿದ್ದಾರೆ ಇನ್ನೊಬ್ಬ ವ್ಯಕ್ತಿ, “ಆ ಛಾಯಾಗ್ರಾಹಕ ತನ್ನ ವೃತ್ತಿಜೀವನವನ್ನು ರೂಪಿಸುವ ಚಿತ್ರವನ್ನು ತೆಗೆದುಕೊಳ್ಳಲು ಹೊರಟಿರುವಂತೆ ವರ್ತಿಸುತ್ತಿದ್ದಾನೆ” ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು, “ರಾತ್ರಿಯ ಅತ್ಯುತ್ತಮ ನೋಟ!” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. “ಇದು ಐಸ್ ಸ್ಪೈಸ್ ನ ಉಡುಪಿನಿಂದ ಹೊರಬಂದಿದೆ” ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಜಿರಳೆ ಬರುವುದಕ್ಕೆ ಕೆಲವರು ನಗರವನ್ನು ದೂಷಿಸಿದರು. “ಅದು ನ್ಯೂಯಾರ್ಕ್” ಎಂದು ಒಬ್ಬ ವ್ಯಕ್ತಿ ಬರೆದು ಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:36 pm, Tue, 2 May 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ