Red Chilli Side Effects: ಕೆಂಪು ಮೆಣಸಿನಕಾಯಿಯ ಅತಿಯಾದ ಸೇವನೆ ಈ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು

ಕೆಂಪು ಮೆಣಸಿನಕಾಯಿ(Red Chilli) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ, ಸಾರಿಂದ ಹಿಡಿದು ಸಾಂಬಾರಿನವರೆಗೋ ಇದನ್ನು ಬಳಸಿದರೆ ಅದೊಂದು ರೀತಿಯ ಘಮ ಹಾಗೂ ರುಚಿ.

Red Chilli Side Effects: ಕೆಂಪು ಮೆಣಸಿನಕಾಯಿಯ ಅತಿಯಾದ ಸೇವನೆ ಈ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು
ಕೆಂಪು ಮೆಣಸಿನಕಾಯಿ
Follow us
ನಯನಾ ರಾಜೀವ್
|

Updated on: May 03, 2023 | 9:00 AM

ಕೆಂಪು ಮೆಣಸಿನಕಾಯಿ(Red Chilli) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ, ಸಾರಿಂದ ಹಿಡಿದು ಸಾಂಬಾರಿನವರೆಗೋ ಇದನ್ನು ಬಳಸಿದರೆ ಅದೊಂದು ರೀತಿಯ ಘಮ ಹಾಗೂ ರುಚಿ. ಅಷ್ಟೇ ಅಲ್ಲದೆ ಉಪ್ಪಿನಕಾಯಿ, ಚಟ್ನಿ ಹೀಗೆ ಹತ್ತು ಹಲವು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಕೆಂಪು ಮೆಣಸಿನಕಾಯಿ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ.

ಉಬ್ಬಸ ಅತಿಯಾಗಿ ಕೆಂಪು ಮೆಣಸಿನಕಾಯಿಯನ್ನು ತಿನ್ನುವುದು ಅಸ್ತಮಾ ರೋಗಿಗಳಿಗೆ ತುಂಬಾ ಹಾನಿಕಾರಕ, ನೀವು ನಿತ್ಯ ಕೆಂಪು ಮೆಣಸಿನಕಾಯಿ ತಿನ್ನುತ್ತಿದ್ದರೆ, ಅಸ್ತಮಾ ಹೆಚ್ಚಾಗಬಹುದು, ಅಷ್ಟೇ ಅಲ್ಲ ಉಸಿರಾಟದ ಸಮಸ್ಯೆಯೂ ತೀವ್ರವಾಗುತ್ತದೆ.

ಅತಿಸಾರ ಅತಿಯಾಗಿ ಕೆಂಪು ಮೆಣಸಿನಕಾಯಿಯನ್ನು ತಿನ್ನಲು ಇಷ್ಟಪಡುವವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಅಭ್ಯಾಸವು ಆಹಾರವನ್ನು ಜೀರ್ಣಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಆಗ ವಾಂತಿ, ವಾಕರಿಕೆಯುಂಟಾಗುವ ಸಾಧ್ಯತೆ ಇದೆ.

ಹೊಟ್ಟೆಹುಣ್ಣು ಕೆಂಪು ಮೆಣಸಿನಕಾಯಿ ನಾಲಿಗೆಗೆ ತುಂಬಾ ರುಚಿ ನೀಡಬಹುದು, ಆದರೆ ಹೊಟ್ಟೆ ತುಂಬಾ ಸಹಾಯಕಾರಿ, ವಾಸ್ತವವಾಗಿ ಕೆಂಪು ಮೆಣಸಿನಕಾಯಿಯಲ್ಲಿರುವ ಅಫ್ಲಾಟಾಕ್ಸಿನ್ ಅಂಶವು ಹೊಟ್ಟೆ ಮತ್ತು ಯಕೃತ್ತಿನಲ್ಲಿ ಹುಣ್ಣು ಮಾಡಬಹುದು ಅದು ಕ್ಯಾನ್ಸರ್​ಗೂ ಕಾರಣವಾಗಬಹುದು.

ಗರ್ಭಾವಸ್ಥೆ ಗರ್ಭಾವಸ್ಥೆಯಲ್ಲಿ ಹೆಚ್ಚು ಮೆಣಸಿನಕಾಯಿಯನ್ನು ತಿನ್ನಬೇಡಿ, ಅಕಾಲಿಕ ಜನನಕ್ಕೆ ಕಾರಣವಾಗಬಹುದು, ಇದರಿಂದ ಮಗುವಿನ ಉಸಿರಾಟಕ್ಕೂ ತೊಂದರೆಯಾಗುವ ಅಪಾಯವು ಹೆಚ್ಚುತ್ತದೆ. ಅಂತಹ ಸಮಯದಲ್ಲಿ ಗರ್ಭಾವಸ್ಥೆಯಲ್ಲಿ ಕೆಂಪು ಮೆಣಸಿನಕಾಯಿ ಸೇವನೆ ಕಡಿಮೆ ಮಾಡುವುದು ಉತ್ತಮ. ಬಾಯಿ ಹುಣ್ಣುಗಳು ಅತಿಯಾದ ಕೆಂಪು ಮೆಣಸಿನಕಾಯಿಗಳು ಬಾಯಿ ಹುಣ್ಣುಗಳನ್ನು ಉಂಟುಮಾಡುತ್ತವೆ. ನೀವು ಪ್ರತಿದಿನ ಸಾಕಷ್ಟು ಕೆಂಪು ಮೆಣಸಿನಕಾಯಿಯನ್ನು ತಿನ್ನುತ್ತಿದ್ದರೆ, ಅದು ಬಾಯಿಯೊಳಗೆ ಶಾಖವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಗುಳ್ಳೆಗಳು ಮತ್ತು ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡಬಹುದು. ಅಲ್ಲದೆ, ನೀವು ಈಗಾಗಲೇ ಬಾಯಿ ಹುಣ್ಣುಗಳಿಂದ ತೊಂದರೆಗೊಳಗಾಗಿದ್ದರೆ, ಕೆಂಪು ಮೆಣಸಿನಕಾಯಿಯನ್ನು ತಿನ್ನುವುದನ್ನು ತಪ್ಪಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ