ಕಳೆದ 63 ವರ್ಷಗಳಿಂದ ನಿದ್ರೆ ಮಾಡದ ವ್ಯಕ್ತಿ, ಕೊನೆಯದಾಗಿ ಮಲಗಿದ್ದು 17ನೇ ವಯಸ್ಸಿನಲ್ಲಂತೆ!

|

Updated on: Feb 04, 2025 | 2:27 PM

ವ್ಯಕ್ತಿಯೊಬ್ಬರು ಕಳೆದ 63 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲವೆಂಬುದು ಅಚ್ಚರಿಯ ಘಟನೆ.ಈ ವ್ಯಕ್ತಿ ಕಳೆದ 63 ವರ್ಷಗಳಿಂದ ನಿದ್ದೆಯೇ ಮಾಡಿಲ್ಲವಂತೆ, ಕೊನೆಯದಾಗಿ 17ನೇ ವಯಸ್ಸಿನಲ್ಲಿ ನಿದ್ರೆ ಮಾಡಿದ ನೆನಪಿದೆಯಂತೆ. ಇವರು ವಿಯೆಟ್ನಾಂನ ವ್ಯಕ್ತಿ. ಎಂಬತ್ತೊಂದು ವರ್ಷದ ಆ ವ್ಯಕ್ತಿಯ ಹೆಸರು ಥಾಯ್ ನೋಕ್. ವೃತ್ತಿಯಲ್ಲಿ ರೈತ ಅವರು ಕೊನೆಯದಾಗಿ ಮಲಗಿದ್ದು ಸ್ಪಷ್ಟವಾಗಿ ನೆನಪಿಲ್ಲದೇ ಇದ್ದರೂ ತಮ್ಮ 17ನೇ ವಯಸ್ಸಿನಲ್ಲಿ ಎಂಬುದು ನೆನಪಿದೆ. ನಂತರ ಅವರಿಗೆ ನಿದ್ರೆ ಬರಲೇ ಇಲ್ಲ.

ಕಳೆದ 63 ವರ್ಷಗಳಿಂದ ನಿದ್ರೆ ಮಾಡದ ವ್ಯಕ್ತಿ, ಕೊನೆಯದಾಗಿ ಮಲಗಿದ್ದು 17ನೇ ವಯಸ್ಸಿನಲ್ಲಂತೆ!
ಥಾಯ್
Follow us on

ನೀವು ಎಷ್ಟು ಹೊತ್ತು ನಿದ್ರೆ ಮಾಡದೇ ಇರಲು ಸಾಧ್ಯ, ತುಂಬಾ ಅನಿವಾರ್ಯತೆ ಇದ್ದರೆ ಒಂದೆರಡು ದಿನಗಳ ಕಾಲ ಕಷ್ಟಪಟ್ಟು ಎಚ್ಚರವಿರಬಹುದು. ಆದರೆ ಈ ವ್ಯಕ್ತಿ ಕಳೆದ 63 ವರ್ಷಗಳಿಂದ ನಿದ್ದೆಯೇ ಮಾಡಿಲ್ಲವಂತೆ, ಕೊನೆಯದಾಗಿ 17ನೇ ವಯಸ್ಸಿನಲ್ಲಿ ನಿದ್ರೆ ಮಾಡಿದ ನೆನಪಿದೆಯಂತೆ.

ಇವರು ವಿಯೆಟ್ನಾಂನ ವ್ಯಕ್ತಿ. ಎಂಬತ್ತೊಂದು ವರ್ಷದ ಆ ವ್ಯಕ್ತಿಯ ಹೆಸರು ಥಾಯ್ ನೋಕ್. ವೃತ್ತಿಯಲ್ಲಿ ರೈತ ಅವರು ಕೊನೆಯದಾಗಿ ಮಲಗಿದ್ದು ಸ್ಪಷ್ಟವಾಗಿ ನೆನಪಿಲ್ಲದೇ ಇದ್ದರೂ ತಮ್ಮ 17ನೇ ವಯಸ್ಸಿನಲ್ಲಿ ಎಂಬುದು ನೆನಪಿದೆ. ನಂತರ ಅವರಿಗೆ ನಿದ್ರೆ ಬರಲೇ ಇಲ್ಲ.

ಆದರೆ ಅದಕ್ಕೆ ಕಾರಣವೇನೆಂದರೆ ಅದು ನಿದ್ರಾಹೀನತೆ ಕಾಯಿಲೆ, ಅನೇಕ ವೈದ್ಯರ ಬಳಿ ಕರೆದೊಯ್ದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಔಷಧಿಗಳನ್ನು ತೆಗೆದುಕೊಂಡಿದ್ದರು. ಆದರೂ ನಿದ್ರೆ ಬರಲಿಲ್ಲ ಎಂದು ಹೇಳುತ್ತಾರೆ ಥಾಯ್. 1962ರಲ್ಲಿ ಅವರಿಗೆ ಮಲೇರಿಯಾ ಬಂದಿತ್ತು, ಇದಾದ ಬಳಿಕ ನಿದ್ರಾಹೀನತೆ ಕಾಯಿಲೆ ಆವರಿಸಿಕೊಂಡಿತು ಎಂದು ಅವರು ಹೇಳುತ್ತಾರೆ.

ಬೇರೆಯವರು ಮಲಗಿರುವುದನ್ನು ನೋಡಿದಾಗ ಹೊಟ್ಟೆಕಿಚ್ಚಾಗುತ್ತದೆ, ನಾನು ಮಾತ್ರ ಹೊಲಕ್ಕೆ ಹೋಗಿ ಸದ್ದಿಲ್ಲದೆ ಕೂರುತ್ತೇನೆ. ಅಲ್ಲಿ ಏನನ್ನೂ ಮಾಡದೆ ಕುಳಿತುಕೊಳ್ಳುವುದು ನೋವಿನ ಸಂಗತಿ ಎಂದಿದ್ದಾರೆ. ಥಾಯ್ ಈಗಲೂ ಕೂಡ 50 ಕೆಜಿ ಚೀಲ ಹೊತ್ತುಕೊಂಡು 4 ಕಿ.ಮೀ ನಡೆಯಬಲ್ಲರು. ಅವರಿಗೆ 80 ವರ್ಷ ದಾಟಿದೆ. ಅವರು 63 ವರ್ಷಗಳಿಂದ ನಿದ್ರೆ ಮಾಡದಿದ್ದರೂ ಕೂಡ ಆರೋಗ್ಯವಾಗಿದ್ದಾರೆ. ಆದರೂ ನಿದ್ರಾಹೀನತೆ ಬಗ್ಗೆ ಅವರ ಕುಟುಂಬ ಚಿಂತಿತವಾಗಿದೆ.

ಮತ್ತಷ್ಟು ಓದಿ: 22 ವರ್ಷದಿಂದ ಮಲಗಿ ನಿದ್ದೆ ಮಾಡದ ವ್ಯಕ್ತಿ

1962ರಲ್ಲಿ ವಿಯೆಟ್ನಾಂ ಯುದ್ಧದ ನಂತರ ಆಘಾತಕಾರಿ ಒತ್ತಡದ ಅಸ್ವಸ್ಥತೆಯ ಪರಿಣಾಮವೇ ನಿದ್ರಾಹೀನತೆ ಎಂದು ಹಲವರು ಹೇಳುತ್ತಾರೆ. ಆದರೆ ಯಾರೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಆದರೆ ಥಾಯ್ ನೋಕ್ 63 ವರ್ಷಗಳಿಂದ ನಿದ್ದೆ ಮಾಡದೆ ಹೇಗೆ ಆರೋಗ್ಯವಾಗಿದ್ದಾರೆಂದು ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:21 pm, Tue, 4 February 25