AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷದಿಂದ ಮಲಗಿ ನಿದ್ದೆ ಮಾಡದ ವ್ಯಕ್ತಿ

22 ವರ್ಷದಿಂದ ಮಲಗಿ ನಿದ್ದೆ ಮಾಡದ ವ್ಯಕ್ತಿ

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Jan 28, 2025 | 11:56 AM

ಆಂಧ್ರಪ್ರದೇಶದ ಯೋಗಿ ಗ್ರ್ಯಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತ್ 22 ವರ್ಷಗಳಿಂದ ಮಲಗದೆ ಧ್ಯಾನದ ಮೂಲಕ ನಿದ್ರಿಸುತ್ತಿದ್ದಾರೆ. ಇದು ಅವರಿಗೆ ಆರೋಗ್ಯಕರ ಜೀವನಕ್ಕೆ ಸಹಾಯ ಮಾಡಿದೆ ಮತ್ತು ನಿದ್ರಾಹೀನತೆಯಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಮಲಗಿ ನಿದ್ರಿಸುವುದು ಅನಿವಾರ್ಯವಲ್ಲ ಎಂದು ಅವರು ಹೇಳುತ್ತಾರೆ. ಯೋಗ ನಿದ್ರೆಯು ಸಮಯವನ್ನು ಉಳಿಸುತ್ತದೆ ಮತ್ತು ಮುಕ್ತಿಯನ್ನು ನೀಡುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಮೈಸೂರು, ಜನವರಿ 28: ಆಂಧ್ರಪ್ರದೇಶದ ಪ್ರಬೋಧ್ ಅಚ್ಯುತ್ ಎಂಬುವರು 22 ವರ್ಷದಿಂದ ಮಲಗಿ ನಿದ್ದೆಯೇ ಮಾಡಿಲ್ಲ. ಧ್ಯಾನದ ಮೂಲಕ ಕುಳಿತು ನಿದ್ದೆ ಮಾಡುತ್ತಿದ್ದಾರೆ. ಈ ಮೂಲಕ ನಿದ್ದೆಯ ಪರಮಸುಖ ಪಡೆಯುತ್ತಿದ್ದಾರೆ ಯೋಗಿ ಗ್ರ್ಯಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತ್‌. ಇದು ಆರೋಗ್ಯಪೂರ್ಣ ಜೀವನಕ್ಕೆ ಸಹಕಾರಿ. ಇದು ನಿದ್ರಾ ಸಮಸ್ಯೆಯಿಂದ ಬಳಲುವವರಿಗೆ ಉಪಕಾರಿಯಾಗಿದೆ. ಮಲಗಿ ನಿದ್ರಿಸಿದರು ಜನರಿಗೆ ನಿದ್ದೆ ‌ಪೂರ್ಣವಾಗುತ್ತಿಲ್ಲ.ಹಲವು ಜಂಜಾಟಗಳಿಂದ ನಿದ್ದೆ ಪರಿಪೂರ್ಣವಾಗುತ್ತಿಲ್ಲ. ಯೋಗ ನಿದ್ರೆ ಮಾಡಿದರೆ ಸಮಯ ಉಳಿತಾಯವಾಗುತ್ತದೆ. 22 ವರ್ಷದ ಹಿಂದೆ ಈ‌ ಬಗ್ಗೆ ಸಂಶೋಧನೆ ಆರಂಭಿಸಿದೆ. ಈ ಮೂಲಕ ಮುಕ್ತಿಯನ್ನು ಸಹಾ ಪಡೆಯಬಹುದಾಗಿದೆ. ಎಲ್ಲರಿಗೂ ನಿದ್ರೆ ಅವಶ್ಯಕತೆ ಇದೆ ಆದರೆ ಮಲಗಿಯೇ ನಿದ್ರಿಸಬೇಕಾಗಿಲ್ಲ ಎಂದು ಹೇಳಿದರು.