ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ

Singapore : ‘ನನ್ನ ತಾಯಿಯ ಪೀಳಿಗೆಯವರಲ್ಲಿ ಇವರೇ ಮೊದಲ ವಿದೇಶ ಪ್ರಯಾಣ ಮಾಡಿದವರು. ಅಷ್ಟೇ ಅಲ್ಲ ಈ ಹಳ್ಳಿಯಿಂದ ವಿದೇಶ ಪ್ರಯಾಣ ಮಾಡಿದ ಎರಡನೇ ಮಹಿಳೆ ಕೂಡ ಇವರೇ.’ ವೈರಲ್ ಆದ ಈ ಲಿಂಕ್​ಡಿನ್​ ಪೋಸ್ಟ್​ ಓದಿ

ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ
ದತ್ತಾತ್ರೇಯ ತನ್ನ ತಾಯಿಯೊಂದಿಗೆ ಸಿಂಗಪೂರ್​ ಪ್ರವಾಸದಲ್ಲಿ
Edited By:

Updated on: Jan 27, 2023 | 6:22 PM

Viral News : ಮಕ್ಕಳಿಗಾಗಿ ತಂದೆತಾಯಿಯರು ತಮ್ಮ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಡುತ್ತಾರೆ. ಆದರೆ ಅದೆಷ್ಟು ಜನ ಮಕ್ಕಳು ತಮ್ಮ ತಂದೆತಾಯಿಗಳ ಸುಖ ಸಂತೋಷ ಆಸೆಗಳ ಬಗ್ಗೆ ಯೋಚಿಸುತ್ತಾರೆ ಮತ್ತು ಅವರ ಬದುಕಿನಲ್ಲಿ ಕಾಣದ್ದನ್ನು ಕಾಣಿಸುವ ಅವಕಾಶದ ಕಲ್ಪಿಸಿಕೊಡುತ್ತಾರೆ? ದತ್ತಾತ್ರೇಯ ಜೆ ಎನ್ನುವವರೊಬ್ಬರು ಲಿಂಕ್​ಡಿನ್​ನಲ್ಲಿ ಮಾಡಿದ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ.

ದತ್ತಾತ್ರೇಯ ಸಿಂಗಪೂರ್​ನಲ್ಲಿ ವಾಸಿಸುತ್ತಾರೆ. ತನ್ನ ತಾಯಿಗೆ ಸಿಂಗಪೂರ್​ಗೆ ಕರೆತರುವ ಮೂಲಕ ಮೊದಲ ವಿದೇಶ​ ಪ್ರವಾಸ ಮಾಡಿಸಬೇಕು ಎನ್ನುವ ಅವರ ಕನಸು ನನಸಾಗಿದೆ. ಈ ವಿಷಯವನ್ನು ಇವರು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ತನ್ನ ಜೀವನಕ್ಕಾಗಿ ಇಡೀ ಬದುಕನ್ನೇ ತೇಯ್ದಿದ್ದಾರೆ. ಹಳ್ಳಿಯಲ್ಲಿರುವ ಈಕೆ ಆಕಾಶದಲ್ಲಿ ಹಾರಾಡುವ ವಿಮಾನವನ್ನು ದೂರದಿಂದ ಮಾತ್ರ ನೋಡಿದ್ದರು. ಅದನ್ನು ಹತ್ತಿರದಿಂದ ತೋರಿಸಿ, ಆ ಮೂಲಕ ವಿದೇಶ ಪ್ರಯಾಣ ಮಾಡಿಸಬೇಕು ಎನ್ನುವ ಇರಾದೆ ನನಗೆ ಮೊದಲಿನಿಂದಲೂ ಇತ್ತು. ಅದು ಸಾಧ್ಯವಾಯಿತು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ತಾಯಿಯ ಪೀಳಿಗೆಯವರಲ್ಲಿ ಇವರೇ ಮೊದಲ ವಿದೇಶ ಪ್ರಯಾಣ ಮಾಡಿದವರು. ಅಷ್ಟೇ ಅಲ್ಲ ಈ ಹಳ್ಳಿಯಿಂದ ವಿದೇಶ ಪ್ರಯಾಣ ಮಾಡಿದ ಎರಡನೇ ಮಹಿಳೆ ಕೂಡ ಇವರೇ. ನನ್ನ ತಾಯಿಯೇನೋ ವಿದೇಶ ಪ್ರಯಾಣ ಮಾಡಿದರು. ಆದರೆ ನನ್ನ ತಂದೆಯೂ ವಿದೇಶ ಪ್ರಯಾಣ ಮಾಡಬೇಕು. ವಿದೇಶದಲ್ಲಿ ವಾಸಿಸುವ ಭಾರತೀಯರಲ್ಲಿ ನನ್ನದೊಂದು ವಿನಂತಿ. ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ. ನಿಜವಾಗಲೂ ಅವರು ಅದೆಷ್ಟು ಸಂತೋಷಗೊಳ್ಳುತ್ತಾರೆ ಎನ್ನುವುದನ್ನು ಅನುಭವಿಸಿ ನೋಡಿದರೆ ಗೊತ್ತಾಗುತ್ತದೆ’ ಎಂದಿದ್ದಾರೆ ದತ್ತಾತ್ರೇಯ.

ಇದನ್ನೂ ಓದಿ : ಕಾಫಿ ಡೇಟ್​ ವಿಥ್​ ಕ್ಯಾಟ್​! ನ್ಯೂಯಾರ್ಕ್​ನಲ್ಲಿ ನಡೆದ ಹೀಗೊಂದು ಮುದ್ದಾದ ಪ್ರಸಂಗ

ಈತನಕ ಈ ಪೋಸ್ಟ್ ಅನ್ನು 3 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ. ನಿಜಕ್ಕೂ ನೀವು ನನಗೆ ಪರಿಚಿತರಲ್ಲ. ಆದರೆ ನಿಮ್ಮ ತಾಯಿಯ ಮೇಲೆ ನೀವು ಇಟ್ಟಿರುವ ಪ್ರೀತಿ, ಗೌರವ ನನ್ನನ್ನು ವಿನಮ್ರನನ್ನಾಗಿಸಿದೆ ಎಂದು ಹೇಳಿದ್ದಾರೆ ಒಬ್ಬರು. ಪ್ರತೀ ಮಗ ಅಥವಾ ಮಗಳು ಮಾಡಬಹುದಾದ ಕರ್ತವ್ಯಗಳಲ್ಲಿ ಇದು ಅತ್ಯುತ್ತಮವಾದದ್ದು ಎಂದಿದ್ದಾರೆ ಮತ್ತೊಬ್ಬರು. ದೇವರು ನಿಮ್ಮ ಕುಟುಂಬವನ್ನು ಸುಖಿಯಾಗಿ ಇಟ್ಟಿರಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ