Viral News: ಹೀಗೂ ಇರ್ತಾರಾ?; ಗರ್ಭ ಧರಿಸಿದ ಮುದ್ದಿನ ಬೆಕ್ಕುಗಳಿಗೆ ಸೀಮಂತ ಮಾಡಿದ ಮಾಲೀಕರು!

ತಮ್ಮ ಬೆಕ್ಕುಗಳು ಗರ್ಭಿಣಿಯಾಗಿದ್ದಕ್ಕೆ ತಮಿಳುನಾಡಿನ ಕೊಯಮತ್ತೂರಿನ ಕುಟುಂಬವೊಂದು ತಮ್ಮ ಬೆಕ್ಕುಗಳಿಗೆ ಸೀಮಂತ ಆಯೋಜಿಸಿತ್ತು. ಈ ಘಟನೆಯ ಫೋಟೋಗಳು ಮತ್ತು ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

Viral News: ಹೀಗೂ ಇರ್ತಾರಾ?; ಗರ್ಭ ಧರಿಸಿದ ಮುದ್ದಿನ ಬೆಕ್ಕುಗಳಿಗೆ ಸೀಮಂತ ಮಾಡಿದ ಮಾಲೀಕರು!
ಕೊಯಮತ್ತೂರಿನಲ್ಲಿ ಬೆಕ್ಕುಗಳಿಗೆ ಸೀಮಂತ
Updated By: ಸುಷ್ಮಾ ಚಕ್ರೆ

Updated on: Jan 05, 2022 | 5:31 PM

ಮನೆಯಲ್ಲಿ ಬೆಕ್ಕು, ನಾಯಿಗಳಿದ್ದರೆ ಬೇರಾವ ಸ್ನೇಹಿತರು, ಸಂಬಂಧಿಕರೂ ಬೇಡ ಎನ್ನುವಷ್ಟು ಗಾಢ ಪ್ರಾಣಿಪ್ರಿಯರು ಸಾಕಷ್ಟು ಜನರಿದ್ದಾರೆ. ಬೆಕ್ಕು, ನಾಯಿಗಳನ್ನು ತಮ್ಮ ಮನೆಯವರಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುವವರೂ ಇದ್ದಾರೆ. ತಮ್ಮ ಮುದ್ದಿನ ಸಾಕುಪ್ರಾಣಿಗಳಿಗೆ ಮನುಷ್ಯರಂತೆ ಡ್ರೆಸ್ ಹಾಕಿ ಖುಷಿ ಪಡುವವರೂ ಇದ್ದಾರೆ. ಆದರೆ, ಇಲ್ಲೊಂದು ಕುಟುಂಬ ತಮ್ಮ ಮನೆಯ ಬೆಕ್ಕುಗಳೆರಡು ಗರ್ಭಿಣಿಯಾಗಿದ್ದನ್ನು ತಿಳಿದು ಖುಷಿಯಾಗಿ, ಆ ಬೆಕ್ಕಿಗೆ ಸೀಮಂತ ಮಾಡಿ ಸಂಭ್ರಮಿಸಿದೆ. ಅಲ್ಲದೆ, ಬೆಕ್ಕುಗಳ ಸೀಮಂತಕ್ಕೆ ಅಕ್ಕಪಕ್ಕದ ಮನೆಯ ಬೆಕ್ಕುಗಳನ್ನೂ ಕರೆಸಿ, ನೆರೆಹೊರೆಯವರಿಗೆಲ್ಲ ಊಟ ಹಾಕಿಸಿದ್ದಾರೆ!

ತಮ್ಮ ಬೆಕ್ಕುಗಳು ಗರ್ಭಿಣಿಯಾಗಿದ್ದಕ್ಕೆ ತಮಿಳುನಾಡಿನ ಕೊಯಮತ್ತೂರಿನ ಕುಟುಂಬವೊಂದು ತಮ್ಮ ಬೆಕ್ಕುಗಳಿಗೆ ಸೀಮಂತ ಆಯೋಜಿಸಿತ್ತು. ಈ ಘಟನೆಯ ಫೋಟೋಗಳು ಮತ್ತು ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಕೊಯಮತ್ತೂರಿನ ಉದ್ಯಮಿಯ ಮನೆಯವರು ತಮ್ಮ ಎರಡು ಪರ್ಷಿಯನ್ ಬೆಕ್ಕುಗಳಿಗಾಗಿ ಅದ್ದೂರಿ ಪಾರ್ಟಿ ಮಾಡಿದ್ದಾರೆ.

ಸಾಕುಪ್ರಾಣಿ ಚಿಕಿತ್ಸಾಲಯದಲ್ಲಿ ಆಯೋಜಿಸಲಾದ ಬೇಬಿ ಶವರ್ ಸಮಾರಂಭದಲ್ಲಿ ಬೆಕ್ಕುಗಳನ್ನು ಹೂಮಾಲೆಗಳಿಂದ ಸಿಂಗರಿಸಲಾಯಿತು. ಆ ಎರಡು ಬೆಕ್ಕುಗಳ ಸೀಮಂತಕ್ಕೆ ಬೇರೆ ಬೆಕ್ಕುಗಳನ್ನು ಕೂಡ ಕರೆಸಲಾಗಿತ್ತು. ಈ ವಿಶೇಷವಾದ ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸುದ್ದಿ ಸಂಸ್ಥೆ ANI ಪ್ರಕಾರ, ವಿಶೇಷ ಸಮಾರಂಭಕ್ಕಾಗಿ, ಬೆಕ್ಕುಗಳಿಗೆ ಹೊಸ ಬಟ್ಟೆಗಳನ್ನು ಹಾಕಿ, ವಿಶೇಷವಾದ ಬೆಕ್ಕಿನ ಆಹಾರ, ಸಿಹಿತಿಂಡಿಗಳು, ಹಾಲನ್ನು ನೀಡಲಾಯಿತು. ಈ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಆ ಬೆಕ್ಕುಗಳ ಮಾಲೀಕರು, ಮಹಿಳೆಯರು ಗರ್ಭಿಣಿಯಾದರೆ ಸೀಮಂತ ಮಾಡುತ್ತಾರೆ. ಈ ಬೆಕ್ಕುಗಳ ಕೂಡ ನಮ್ಮ ಮನೆಯ ಸದಸ್ಯರೇ ಆಗಿರುವುದರಿಂದ ಬೆಕ್ಕುಗಳಿಗೂ ನಾವು ಸೀಮಂತ ಮಾಡಿದ್ದೇವೆ ಎಂದಿದ್ದಾರೆ.

ಒಂದು ವರ್ಷದ ಎರಡು ಪರ್ಷಿಯನ್ ಬೆಕ್ಕುಗಳಾದ ಕ್ಷೀರ ಮತ್ತು ಐರಿಸ್​ ಗರ್ಭ ಧರಿಸಿ 50 ಮತ್ತು 35 ದಿನಗಳಾಗಿವೆ. ಬೆಕ್ಕುಗಳ ಗರ್ಭಧಾರಣೆಯ ಅವಧಿ 62 ದಿನಗಳಾಗಿದ್ದು, ಕೆಲವೇ ದಿನಗಳಲ್ಲಿ ಕ್ಷೀರ ಬೆಕ್ಕಿನ ಮರಿಗಳಿಗೆ ಜನ್ಮ ನೀಡಲಿದ್ದಾಳೆ. ಹೀಗಾಗಿ, ಎರಡೂ ಬೆಕ್ಕುಗಳಿಗೆ ಒಟ್ಟಾಗಿ ಸೀಮಂತ ಮಾಡಲಾಯಿತು.

ಇದನ್ನೂ ಓದಿ: Viral Video: ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಬರ್ಗರ್ ಕಿಂಗ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೋ ವೈರಲ್

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!