Viral Video: ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಬರ್ಗರ್ ಕಿಂಗ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೋ ವೈರಲ್

Crime News: ಬರ್ಗರ್ ಕಿಂಗ್ ಶಾಪ್​​ನಲ್ಲಿ ಫುಡ್ ಆರ್ಡರ್ ಮಾಡಿದ್ದ ಇಬ್ಬರು ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಶಾಪ್​ನವರ ಜೊತೆ ಜಗಳವಾಡಿದ್ದಾರೆ. ಬಳಿಕ, ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ.

Viral Video: ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಬರ್ಗರ್ ಕಿಂಗ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೋ ವೈರಲ್
ಬರ್ಗರ್ ಕಿಂಗ್ ಶಾಪ್​ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 05, 2022 | 4:22 PM

ನ್ಯೂಯಾರ್ಕ್: ಫುಡ್ ಡೆಲಿವರಿ ಕೊಡುವ ಡೆಲಿವರಿ ಬಾಯ್​ಗಳ ಮೇಲೆ ಆಗಾಗ ಹಲ್ಲೆಗಳು ನಡೆಯುವ ಘಟನೆಗಳು ಬಯಲಾಗುತ್ತಲೇ ಇರುತ್ತವೆ. ಫುಡ್ ಡೆಲಿವರಿ ಕೊಡುವುದು ತಡವಾಯಿತೆಂದೋ, ತಪ್ಪಾದ ಆಹಾರವನ್ನು ಡೆಲಿವರಿ ನೀಡಿದರೆಂದೋ ಆನ್​ಲೈನ್ ಡೆಲಿವರಿ ಬಾಯ್​ ಮೇಲೆ ಹಲ್ಲೆ ನಡೆಯುತ್ತಲೇ ಇರುತ್ತದೆ. ಇದೀಗ ನ್ಯೂಯಾರ್ಕ್ ನಗರದ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಉದ್ಯೋಗಿಯೊಬ್ಬರು ಫುಡ್ ಕೊಡುವುದು ತಡ ಮಾಡಿದ್ದಕ್ಕೆ ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಬರ್ಗರ್ ಕಿಂಗ್ ಶಾಪ್​​ನಲ್ಲಿ ಫುಡ್ ಆರ್ಡರ್ ಮಾಡಿದ್ದ ಇಬ್ಬರು ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಶಾಪ್​ನವರ ಜೊತೆ ಜಗಳವಾಡಿದ್ದರು. ನ್ಯೂಯಾರ್ಕ್​ನ ಬ್ರೂಕ್ಲಿನ್‌ನ ಲಿಂಡೆನ್ ಬೌಲೆವಾರ್ಡ್‌ನಲ್ಲಿರುವ ಔಟ್‌ಲೆಟ್‌ನಲ್ಲಿ ಡಿಸೆಂಬರ್ 4ರಂದು ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬರು ರೆಸ್ಟೋರೆಂಟ್‌ನಲ್ಲಿನ ಕೌಂಟರ್‌ನಿಂದ ಜಿಗಿದು ನೌಕರನನ್ನು ಹಿಡಿದುಕೊಂಡಿದ್ದರು.

ಕೌಂಟರ್‌ನಲ್ಲಿ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಮತ್ತು ಅವನ ಸಹಚರ ಇಬ್ಬರೂ ಬರ್ಗರ್ ಕಿಂಗ್ ನೌಕರನಿಗೆ ಗುದ್ದುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬರ್ಗರ್ ಕಿಂಗ್ ಔಟ್ಲೆಟ್​ನಲ್ಲಿನ ಇತರ ಸಿಬ್ಬಂದಿಗಳು ಓಡಿಬಂದು ತಮ್ಮ ಸಿಬ್ಬಂದಿಯನ್ನು ಕಾಪಾಡಿದರು. ಇಬ್ಬರೂ ಶಂಕಿತರು ಹೆಡ್ ಜಾಕೆಟ್‌ಗಳು ಮತ್ತು ಮಾಸ್ಕ್ ಧರಿಸಿದ್ದರು. ಈ ಹಲ್ಲೆಯ ನಂತರ ರೆಸ್ಟೋರೆಂಟ್‌ನಿಂದ ಹೊರನಡೆದರು.

ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆಯ ಪ್ರಕಾರ, ಬರ್ಗರ್ ಕಿಂಗ್​ನ 22 ವರ್ಷದ ವ್ಯಕ್ತಿಯ ಮೇಲೆ ಈ ಹಲ್ಲೆ ನಡೆದಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ, ಬರ್ಗರ್ ಕಿಂಗ್​ ಔಟ್​ಲೆಟ್​ಗೆ ನುಗ್ಗಿ ದಾಳಿ ಮಾಡಿದವರ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು 3,500 ರೂ.ವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿದೆ.

ಇದನ್ನೂ ಓದಿ: Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

Published On - 4:20 pm, Wed, 5 January 22