ವಿಚಿತ್ರ ಜನ, ಹಬ್ಬಗಳಲ್ಲಿ ಮನುಷ್ಯನ ಮಾಂಸ ತಿಂತಾರೆ, ತಲೆಬುರುಡೆಯಲ್ಲೇ ಆಹಾರ ಬೇಯಿಸ್ತಾರಂತೆ!

|

Updated on: May 13, 2024 | 10:44 AM

ಇಲ್ಲಿರುವುದು ವಿಚಿತ್ರ ಜನ ವಿಚಿತ್ರ ಸಂಪ್ರದಾಯ, ಯಾರ ಮೇಲಾದರೂ ದ್ವೇಷ ಇದೆ ಎಂದಾದರೆ ಹೆಚ್ಚೆಂದರೆ ಅವರಿಗೆ ಏಟು ಹಾಕುತ್ತಾರೆ ಇನ್ನೂ ಕ್ರೂರ ವ್ಯಕ್ತಿಗಳಾಗಿದ್ದರೆ ಕೊಲೆ ಮಾಡುತ್ತಾರೆ. ಆದರೆ ಈ ಬುಡಕಟ್ಟು ಜನಾಂಗದವರು ಮಾನವನ ಮಾಂಸವನ್ನೇ ತಿನ್ನುತ್ತಾರೆ.

ವಿಚಿತ್ರ ಜನ, ಹಬ್ಬಗಳಲ್ಲಿ ಮನುಷ್ಯನ ಮಾಂಸ ತಿಂತಾರೆ, ತಲೆಬುರುಡೆಯಲ್ಲೇ ಆಹಾರ ಬೇಯಿಸ್ತಾರಂತೆ!
ಬುಡಕಟ್ಟು ಜನಾಂಗ
Follow us on

ಒಂದೊಂದು ದೇಶ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆಗಳಿವೆ. ಅದೇ ರೀತಿ ಮನುಷ್ಯನ ಮಾಂಸವನ್ನು ತಿನ್ನುವ ಬುಡಕಟ್ಟು ಜನಾಂಗದ ಕುರಿತು ನಿಮಗೆ ತಿಳಿದಿದೆಯೇ? ನ್ಯೂ ಗಿನಿಯಾದಲ್ಲಿರುವ ಅಸ್ಮತ್ ಬುಡಕಟ್ಟು ಜನಾಂಗವು ಮಾನವನ ರಕ್ತವನ್ನು ಕುಡಿಯಲು ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ ಹಬ್ಬಗಳಲ್ಲಿ ಮಾನವನ ಮಾಂಸವನ್ನು ತಲೆಬುರುಡೆಯೊಳಗೇ ಬೇಯಿಸಿ ತಿಂತಾರಂತೆ.

ಇಂಡೋನೇಷ್ಯಾದ ದಕ್ಷಿಣ ಪಪುವಾ ಪ್ರಾಂತ್ಯದಲ್ಲಿ 10,000 ಚದರ ಮೈಲುಗಳಷ್ಟು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. 1950 ರವರೆಗೆ ಪ್ರತ್ಯೇಕವಾಗಿಯೇ ಇದ್ದರು. ಯಾವುದೇ ಹೊರಗಿನವರ ಸಂಪರ್ಕಕ್ಕೆ ಬಂದಿರಲಿಲ್ಲ.
ಅವರು ತಮ್ಮ ಮುಖವನ್ನು ಬಣ್ಣದಿಂದ ಮುಚ್ಚಿಕೊಳ್ಳುತ್ತಾರೆ. ತಲೆಯ ಮೇಲೆ ಟೋಪಿ ಮತ್ತು ಹೆಡ್‌ಹಂಟರ್ ಈಟಿಯನ್ನು ಹೊಂದಿರುತ್ತಾರೆ, ಅದರಿಂದ ಅವರು ಬೇಟೆಯಾಡುತ್ತಾರೆ. ಅವರನ್ನು ಅತ್ಯಂತ ಕ್ರೂರ ಬೇಟೆಗಾರರು ಎಂದು ಪರಿಗಣಿಸಲಾಗುತ್ತದೆ.

ಸೇಡು ತೀರಿಸಿಕೊಳ್ಳಲು ಶತ್ರುಗಳ ತಲೆಬುರುಡೆಯನ್ನು ಕಡಿಯುತ್ತಾರೆ, ಬಳಿಕ ಜನರ ರಕ್ತ ಕುಡಿಯುತ್ತಾರೆ. ಅವರ ಮಾಂಸವನ್ನೂ ತಿನ್ನುತ್ತಾರೆ. ತಮ್ಮ ಬುಡಕಟ್ಟಿನ ಸದಸ್ಯನನ್ನು ಕೊಂದರೆ ಶತ್ರುಗಳ ತಲೆ ಕಡಿಯುವವರೆಗೂ ಅವರು ಸುಮ್ಮನಿರುವುದಿಲ್ಲ.
ಪುರುಷನಾಗಿರಲಿ, ಮಹಿಳೆಯಾಗಿರಲಿ ಮಗುವಾಗಿರಲಿ ಅವರ ತಲೆಗಳನ್ನು ಅಡುಗೆಗೆ ಬಳಸಲಾಗುತ್ತಿತ್ತು.

ಮತ್ತಷ್ಟು ಓದಿ: ಜಪಾನ್: 50 ವರ್ಷಗಳಿಂದ ಖಾಲಿ ಇದೆ ಈ ದ್ವೀಪ, ಇದರ ಹಿಂದಿದೆ ಕರಾಳ ಇತಿಹಾಸ

ಡೈಲಿ ಮೇಲ್ ವರದಿಯ ಪ್ರಕಾರ,ಕಾರ್ಲ್ ಹಾಫ್ಮನ್ ಎಂಬ ವ್ಯಕ್ತಿ ಅವರ ಬಗ್ಗೆ ಬರೆದಿದ್ದಾರೆ. ಯಾರನ್ನಾದರೂ ಕೊಂದ ನಂತರ, ಆತ ತಾಳೆ ಎಲೆಗಳನ್ನು ತೆಗೆದುಕೊಳ್ಳುತ್ತಿದ್ದ. ತಲೆಬುರುಡೆಯನ್ನು ಚಾಕುವಿನಿಂದ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ನಂತರ ಅದನ್ನು ಬೆಂಕಿಯಲ್ಲಿ ಹುರಿದು ತಿನ್ನುತ್ತಿದ್ದರು. ಇದು ಅವರ ನೆಚ್ಚಿನ ಆಹಾರವಾಗಿತ್ತು.

ನ್ಯೂಯಾರ್ಕ್ ಗವರ್ನರ್ ನೆಲ್ಸನ್ ರಾಕ್‌ಫೆಲ್ಲರ್ ಅವರ 23 ವರ್ಷದ ಮಗ ಈ ಕಡೆಗೆ ಹೋದಾಗ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತದೆ. ಇದುವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬಹುಶಃ ಅವರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿರಬಹುದು ಎಂದು ಕೆಲವರು ಹೇಳುತ್ತಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ