ಇಲ್ಲಿ ನೀವು ಉಚಿತವಾಗಿ ಮೇಕೆಗಳನ್ನು ಪಡೆಯಬಹುದು; ಪೋಸ್ಟ್​​ ವೈರಲ್​​​

|

Updated on: Apr 10, 2024 | 12:44 PM

ಹಬ್ಬಗಳ ನಡುವೆ ಮೇಕೆ, ಕುರಿಗಳು ಲಕ್ಷ ಲಕ್ಷ ಮಾರಾಟವಾಗುತ್ತಿವೆ. ಆದರೆ ಇಲ್ಲೊಂದು ಜಾಗದಲ್ಲಿ ಮಾತ್ರ ಎಷ್ಟು ಮೇಕೆಗಳನ್ನು ಬೇಕಾದರೂ ಹಿಡಿದು ಉಚಿತವಾಗಿ ತೆಗೆದುಕೊಂಡು ಬರಬಹುದು. ಉಚಿತವಾಗಿ ಮೇಕೆಗಳನ್ನು ತೆಗೆದುಕೊಂಡು ಹೋಗಿ ಎಂಬ ಮನವಿಯ ಪೋಸ್ಟ್​​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಇಲ್ಲಿ ನೀವು ಉಚಿತವಾಗಿ ಮೇಕೆಗಳನ್ನು ಪಡೆಯಬಹುದು; ಪೋಸ್ಟ್​​ ವೈರಲ್​​​
'adopt a goat'
Follow us on

ನಿನ್ನೆ ಯುಗಾದಿ ಹಬ್ಬವಾದರೆ,ಇಂದು ಎಲ್ಲೆಡೆ ಹೊಸ ತೊಡಕು ಸಂಭ್ರಮ. ಹೀಗಾಗಿ ಬೆಳ್ಳಂ ಬೆಳಗ್ಗೆಯೇ ಜನ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಚಿಕನ್ ಮತ್ತು ಮಟನ್ ಸ್ಟಾಲ್ ಗಳಿಗೆ ತೆರಳಿ ಮಾಂಸ ಮನೆಗೆ ಕೊಂಡೊಯ್ದು ಬೇಯಿಸಿಕೊಂಡು ತಿನ್ನುತ್ತಾ ಹೊಸತಡಕನ್ನು ಎಂಜಾಯ್ ಮಾಡುತ್ತಾರೆ. ಜೊತೆಗೆ ಬಕ್ರೀದ್ ಹಬ್ಬವೂ ಇದ್ದಿದ್ದರಿಂದ ಮಾಂಸದ ಬೆಲೆ ಗಗನಕ್ಕೇರಿದೆ. ಮೇಕೆ, ಕರಿಗಳು ಲಕ್ಷ ಲಕ್ಷ ಮಾರಾಟವಾಗುತ್ತಿವೆ. ಆದರೆ ಇಲ್ಲೊಂದು ಜಾಗದಲ್ಲಿ ಮಾತ್ರ ಎಷ್ಟು ಮೇಕೆಗಳನ್ನು ಬೇಕಾದರೂ ಹಿಡಿದು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಉಚಿತವಾಗಿ ಮೇಕೆಗಳನ್ನು ತೆಗೆದುಕೊಂಡು ಹೋಗಿ ಎಂಬ ಮನವಿಯ ಪೋಸ್ಟ್​​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವಾಸ್ತವವಾಗಿ, ಇಟಲಿಯಲ್ಲಿ ಒಂದು ದ್ವೀಪವಿದೆ, ಅದರ ಹೆಸರು ಎಲಿಕುಡಿ. ಇದು ಸಿಸಿಲಿಯ ಉತ್ತರ ಕರಾವಳಿಯ ಏಳು ಅಯೋಲಿಯನ್ ದ್ವೀಪಗಳಲ್ಲಿ ಒಂದಾಗಿದೆ ಮತ್ತು ಕಡಿಮೆ ಜನಸಂಖ್ಯೆ ಹೊಂದಿದೆ. ನ್ಯೂಯಾರ್ಕ್ ಪೋಸ್ಟ್ ನ ವರದಿ ಪ್ರಕಾರ ಇಲ್ಲಿ ಮನುಷ್ಯರಿಗಿಂತ ಆಡುಗಳೇ ಹೆಚ್ಚು. ಇಡೀ ದ್ವೀಪದಲ್ಲಿ ಸುಮಾರು 100 ಜನರು ವಾಸಿಸುತ್ತಿದ್ದಾರೆ, ಆದರೆ ಇಲ್ಲಿ ಆಡುಗಳ ಜನಸಂಖ್ಯೆಯು 600 ಕ್ಕಿಂತ ಹೆಚ್ಚಾಗಿದೆ. ಅದಕ್ಕಾಗಿಯೇ ಇಲ್ಲಿಂದ ಆಡುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗಲು ಜನರಿಗೆ ಈ ವಿಶಿಷ್ಟ ಕೊಡುಗೆ ನೀಡಲಾಗಿದೆ. ಎಲಿಕುಡಿ ದ್ವೀಪದ ಅಧಿಕೃತ ಇಮೇಲ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆಫರ್ ಅನ್ನು ಪಡೆಯಲು, ಅವರು ಕೇವಲ 17 ಡಾಲರ್ ಅಂದರೆ ಸುಮಾರು 1400 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದರ ನಂತರ ನೀವು ಆಡುಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ವರದಿಗಳ ಪ್ರಕಾರ, ಅರ್ಜಿ ಸಲ್ಲಿಸಿದ ನಂತರ, ನಿಮಗೆ 15 ದಿನಗಳ ಕಾಲಾವಕಾಶ ನೀಡಲಾಗುವುದು ಮತ್ತು ಈ ಸಮಯದ ಮಿತಿಯೊಳಗೆ ನೀವು ಎಷ್ಟು ಮೇಕೆಗಳನ್ನು ಬೇಕಾದರೂ ಹಿಡಿದು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಆಡುಗಳ ಸಂಖ್ಯೆ 100 ತಲುಪುವವರೆಗೆ ಈ ಕೊಡುಗೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. ಈ ದ್ವೀಪದ ಮೇಯರ್ ರಿಕಾರ್ಡೊ ಗುಲ್ಲೋ ಅವರು ‘ಅಡಾಪ್ಟ್ ಎ ಗೋಟ್ ಪ್ರೋಗ್ರಾಂ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿ, ಅದರ ಅಡಿಯಲ್ಲಿ ಜನರು ಇಲ್ಲಿಂದ ಎಷ್ಟು ಮೇಕೆಗಳನ್ನು ಬೇಕಾದರೂ ತೆಗೆದುಕೊಂಡು ಹೋಗುವ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ