Viral News: ಈ ಶೌಚಾಲಯದ ಬೆಲೆ ಬರೋಬ್ಬರಿ 2 ಕೋಟಿ ರೂ.; ಯಾಕಿಷ್ಟು ದುಬಾರಿ ಗೊತ್ತಾ?

ಈ ಶೌಚಾಲಯವನ್ನು ಖರೀದಿಸಿದರೆ, ಅದರ ಬೆಲೆ ಕಡಿಮೆ ಅವಧಿಯಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಖರೀದಿದಾರರು ಶೌಚಾಲಯ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಅಷ್ಟಕ್ಕೂ ಈ ಶೌಚಾಲಯಕ್ಕೆ ಕೋಟಿಗಟ್ಟಲೆ ಬೆಲೆ ಏಕೆ ಗೊತ್ತಾ?

Viral News: ಈ ಶೌಚಾಲಯದ ಬೆಲೆ ಬರೋಬ್ಬರಿ 2 ಕೋಟಿ ರೂ.; ಯಾಕಿಷ್ಟು ದುಬಾರಿ ಗೊತ್ತಾ?
Follow us
ಅಕ್ಷತಾ ವರ್ಕಾಡಿ
|

Updated on: Apr 10, 2024 | 11:47 AM

ಇತ್ತೀಚಿನ ದಿನಗಳಲ್ಲಿ, ಹಣವನ್ನು ಬ್ಯಾಂಕ್‌ಗಳಲ್ಲಿ ಇಡುವ ಬದಲು ಆಸ್ತಿಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಭೂಮಿಯ ಮೇಲಿನ ಹೂಡಿಕೆಯು ಬ್ಯಾಂಕುಗಳು ನೀಡುವುದಕ್ಕಿಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. ಕೇವಲ 2-3 ವರ್ಷಗಳಲ್ಲಿ ಅನೇಕ ಸ್ಥಳಗಳಲ್ಲಿ ಆಸ್ತಿ ದರಗಳು ನಾಲ್ಕೈದು ಪಟ್ಟು ಹೆಚ್ಚಾಗುತ್ತವೆ. ಕೇವಲ ಒಂದು ಕೊಠಡಿ ಅಥವಾ ಎರಡು ಕೋಣೆಗಳ ಫ್ಲ್ಯಾಟ್‌ ಬೆಲೆ ಕೋಟಿಗಳಲ್ಲಿ ಆದರೆ ಇದೀಗ ಶೌಚಾಲಯವೊಂದರ ಬೆಲೆ ಕೋಟಿಗೇರಿದೆ. ಅಂತಹ ಸ್ಥಳವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡೈಲಿ ಮೇಲ್ ವರದಿಯ ಪ್ರಕಾರ, ಯುಕೆ ಕಾರ್ನ್‌ವಾಲ್‌ನ ಸಾಲ್ಟಾಶ್ ಟೌನ್‌ನಲ್ಲಿರುವ ಈ ಶೌಚಾಲಯವನ್ನು ಖರೀದಿಸಿದರೆ, ಅದರ ಬೆಲೆ ಕಡಿಮೆ ಅವಧಿಯಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಖರೀದಿದಾರರು ಶೌಚಾಲಯ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಅಷ್ಟಕ್ಕೂ ಈ ಶೌಚಾಲಯಕ್ಕೆ ಕೋಟಿಗಟ್ಟಲೆ ಬೆಲೆ ಏಕೆ ಗೊತ್ತಾ? ಸಮುದ್ರ ತೀರದಲ್ಲಿ ಈ ಪ್ರದೇಶವು ತುಂಬಾ ಸುಂದರವಾಗಿದೆ. ಹಾಗಾಗಿಯೇ ಇಲ್ಲಿ ಪ್ರಾಪರ್ಟಿ ಬೆಲೆ ತುಂಬಾ ಹೆಚ್ಚಾಗಿದೆ.

ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ಸರ್ಕಾರವು ಈ ಹಿಂದೆ ಸಾಲ್ಟಾಶ್ ಟೌನ್‌ನಲ್ಲಿ ನಿರ್ಮಾಣ ಕಾರ್ಯವನ್ನು ನಿಷೇಧಿಸಿತ್ತು. ಆದರೆ ಈಗ ಈ ನಿಷೇಧವನ್ನು ತೆಗೆದುಹಾಕಲಾಗಿದೆ. ಹಾಗಾಗಿಯೇ ಇಲ್ಲಿ ಪ್ರಾಪರ್ಟಿ ಬೆಲೆ ಗಗನಕ್ಕೇರಿದೆ. ಸರ್ಕಾರದ ಪ್ರಕಾರ ಇಲ್ಲಿ ಸೌಲಭ್ಯಗಳಿಗನುಗುಣವಾಗಿ ನಾಲ್ಕು ಕೋಣೆಗಳ ಮನೆ ನಿರ್ಮಿಸಬಹುದಾಗಿದ್ದು, ಇದರ ವೆಚ್ಚ ಸುಮಾರು 10 ಕೋಟಿ ರೂ. ಈಗ ರೂ.2 ಕೋಟಿಗೆ ಮಾರಾಟವಾಗುತ್ತಿರುವ ಶೌಚಾಲಯದಲ್ಲಿಯೂ ಯಾರಾದರೂ ನಾಲ್ಕು ಬೆಡ್ ರೂಂ ಮನೆ ಕಟ್ಟಿ ಮನೆ ಕಟ್ಟಬೇಕೆಂದರೆ ಅದರ ಬೆಲೆ ಐದು ಪಟ್ಟು ಹೆಚ್ಚುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ