Viral News: ಚಿರತೆಯೊಂದಿಗೆ ಸೆಣಸಾಡಿ 6 ವರ್ಷದ ಮಗಳನ್ನು ಸಾವಿನ ದವಡೆಯಿಂದ ಕಾಪಾಡಿದ ಮಹಿಳೆ!

| Updated By: ಸುಷ್ಮಾ ಚಕ್ರೆ

Updated on: Feb 05, 2022 | 4:50 PM

6 ವರ್ಷದ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ಆಕೆಯ ಮೇಲೆ ಎರಗಿತ್ತು. ಮಗಳ ಕಿರುಚಾಟ ಕೇಳಿದ ಮಹಿಳೆ ಓಡಿ ಬಂದು ನೋಡಿದಾಗ ಮಗಳ ಮೇಲೆ ಎರಗಿದ್ದ ಚಿರತೆಯನ್ನು ನೋಡಿ ಕಂಗಾಲಾದರು.

Viral News: ಚಿರತೆಯೊಂದಿಗೆ ಸೆಣಸಾಡಿ 6 ವರ್ಷದ ಮಗಳನ್ನು ಸಾವಿನ ದವಡೆಯಿಂದ ಕಾಪಾಡಿದ ಮಹಿಳೆ!
ಚಿರತೆ
Follow us on

ಬಹ್ರೈಚ್: ಮಕ್ಕಳಿಗಾಗಿ ತಾಯಿ ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾಳೆ. ತನ್ನ ಜೀವವನ್ನೇ ಒತ್ತಿಯಿಟ್ಟು ಮಕ್ಕಳನ್ನು ಕಾಪಾಡಿರುವ ಅದೆಷ್ಟೋ ತಾಯಂದಿರ ಉದಾಹರಣೆಗಳು ನಮ್ಮ ಮುಂದಿವೆ. ಅದೇ ರೀತಿ ಮಹಿಳೆಯೊಬ್ಬರು ತನ್ನ ಎದುರು ಬಂದ ಚಿರತೆಯನ್ನು (Leopard) ಎದುರಿಸಿ, ತನ್ನ 6 ವರ್ಷದ ಮಗಳನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಖೈರಿಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರ್ದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿಯಿಂದ ರಕ್ಷಿಸಲ್ಪಟ್ಟ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

6 ವರ್ಷದ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ಆಕೆಯ ಮೇಲೆ ಎರಗಿತ್ತು. ಮಗಳ ಕಿರುಚಾಟ ಕೇಳಿದ ಮಹಿಳೆ ಓಡಿ ಬಂದು ನೋಡಿದಾಗ ಮಗಳ ಮೇಲೆ ಎರಗಿದ್ದ ಚಿರತೆಯನ್ನು ನೋಡಿ ಕಂಗಾಲಾದರು. ಆದರೆ, ಯೋಚಿಸುತ್ತಾ ಕೂರಲು ಸಮಯವಿರಲಿಲ್ಲ. ಏನಾದರೂ ಮಾಡಿ ಮಗಳನ್ನು ಕಾಪಾಡಲೇ ಬೇಕಿತ್ತು. ಸ್ವಲ್ಪ ತಡವಾದರೂ ಆ ಬಾಲಕಿಯನ್ನು ಚಿರತೆ ಎಳೆದುಕೊಂಡು ಹೋಗಿ ಕೊಂದು ತಿನ್ನುತ್ತಿತ್ತು. ತಕ್ಷಣ ಅಂಗಳದ ಬದಿಯಲ್ಲಿ ಬಿದ್ದಿದ್ದ ದೊಣ್ಣೆಯನ್ನು ಎತ್ತಿಕೊಂಡ ಆ ಮಹಿಳೆ ಚಿರತೆಗೆ ಅದರಿಂದ ಹೊಡೆದಿದ್ದಾರೆ. ತನ್ನ ಮೇಲಾದ ದಾಳಿಯಿಂದ ಗಲಿಬಿಲಿಗೊಂಡ ಚಿರತೆ ಮಗುವಿನ ಮೇಲಿದ್ದ ತನ್ನ ಹಿಡಿತವನ್ನು ಸಡಿಲಗೊಳಿಸಿತ್ತು. ಆ ಕೂಡಲೇ ತನ್ನ ಮಗಳನ್ನು ತನ್ನತ್ತ ಎಳೆದುಕೊಂಡ ಆ ಮಹಿಳೆ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಆ ಮಹಿಳೆಯ ಸಮಯಪ್ರಜ್ಞೆಯಿಂದ ಮಗು ಸಾವಿನ ಅಂಚಿನಿಂದ ಪಾರಾಗಿದೆ. ಆದರೆ, ಚಿರತೆ ದಾಳಿಯಿಂದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೆ ಅರಣ್ಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿದೆ. ವನ್ಯಜೀವಿ ರಕ್ಷಕ ರಶೀದ್ ಜಮೀಲ್ ಕೂಡ ಸ್ಥಳಕ್ಕೆ ಆಗಮಿಸಿದ್ದು, ಗಾಯಗೊಂಡಿದ್ದ ಬಾಲಕಿಯನ್ನು ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

6 ವರ್ಷದ ಬಾಲಕಿ ಕಾಜಲ್ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಮೇಲೆ ಚಿರತೆ ದಾಳಿ ನಡೆಸಿದ್ದು, ಬಹ್ರೈಚ್ ಅರಣ್ಯ ವಿಭಾಗದ ನಾನ್‌ಪಾರಾ ವ್ಯಾಪ್ತಿಯಿಂದ ಚಿರತೆ ಊರಿನೊಳಗೆ ಬಂದಿತ್ತು.

ಆ ವೇಳೆ ಕಾಜಲ್ ತಾಯಿ ರೀನಾ ದೇವಿ ಮನೆಯನ್ನು ಗುಡಿಸುತ್ತಿದ್ದರು. ಚಿರತೆ ಏಕಾಏಕಿ ಮನೆಯ ಅಂಗಳಕ್ಕೆ ನುಗ್ಗಿ ಬಾಲಕಿಯ ಮೇಲೆ ದಾಳಿ ನಡೆಸಿ ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದೆ. ತಕ್ಷಣ ಮನೆಯಿಂದ ಹೊರಬಂದ ರೀನಾ ಕೋಲು ತೆಗೆದುಕೊಂಡು ಚಿರತೆಗೆ ಹೊಡೆದು, ಓಡಿಸಿದ್ದಾರೆ. ಆ ಬಾಲಕಿಯ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?